ಫ್ಲಿಫ್‌ಕಾರ್ಟ್-ಬಜಾಜ್ ಅಲಾಯನ್ಸ್ ಸಹಯೋಗದಲ್ಲಿ ಗ್ರಾಹಕರಿಗೆ ಮೋಟಾರ್ ಇನ್ಶುರೆನ್ಸ್!

ಅಗತ್ಯ ವಸ್ತು, ಮನೆ ಬಳಕೆ ಸಾಮಾಗ್ರಿ, ಎಲೆಕ್ಟ್ರಾನಿಕ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಮನೆಬಾಗಿಲಿಗೆ ತಲಪುಸುವ ಆನ್‌ಲೈನ್ ವ್ಯವಹಾರಗಳ ದಿಗ್ಗಜ ಫ್ಲಿಪ್ ಕಾರ್ಟ್ ಇದೀಗ ಮೋಟಾರ್ ಇನ್ಶುರೆನ್ಸ್ ನೀಡುತ್ತಿದೆ. 

Flipkart partners with Bajaj Allianz to offer digital hassle free motor insurance

ಬೆಂಗಳೂರು( ಮೇ.21): ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ ಮತ್ತು ದೇಶದ ಪ್ರಮುಖ ಖಾಸಗಿ ವಿಮಾ ಕಂಪನಿಯಾಗಿರುವ ಬಜಾಜ್ ಅಲಾಯನ್ಜ್ ಜನರಲ್ ಇನ್ಶೂರೆನ್ಸ್ ಕಂಪನಿ ಫ್ಲಿಪ್‍ಕಾರ್ಟ್ ಗ್ರಾಹಕರಿಗೆ ಡಿಜಿಟಲ್ ಮೋಟರ್ ಇನ್ಶೂರೆನ್ಸ್ ಪಾಲಿಸಿ ನೀಡುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ. 

ಫ್ಲಿಪ್‌ಕಾರ್ಟ್ ಡೆಲಿವರಿಗೆ ಎಲೆಕ್ಟ್ರಿಕ್ ವಾಹನ- ಹೊಸ ಪ್ರಯತ್ನಕ್ಕೆ ಮೆಚ್ಚುಗೆ!.

ಲಾಕ್‍ಡೌನ್‍ನ ಈ ಸಂದರ್ಭದಲ್ಲಿ ವಾಹನಗಳ ಮಾಲೀಕರು ತಮ್ಮ ವಾಹನದ ಕಾರ್ಯನಿರ್ವಹಣೆ ಮತ್ತು ಫಿಟ್‍ನೆಸ್ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಬಜಾಜ್ ಅಲಾಯನ್ಜ್ ಮೋಟರ್ ಇನ್ಶೂರೆನ್ಸ್ ಪಾಲಿಸಿಗಳನ್ನು 4 ಚಕ್ರ ಮತ್ತು ದ್ವಿಚಕ್ರವಾಹನಗಳಿಗೆ ಪೂರೈಸುತ್ತಿದೆ. ಹಲವಾರು ವಿನೂತನವಾದ ಪ್ರಯೋಜನಗಳೊಂದಿಗೆ ಗ್ರಾಹಕರಿಗೆ ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಅವರಿಗಿರುವ ಭೀತಿಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಈ ಪಾಲಿಸಿಗಳನ್ನು ನೀಡುತ್ತಿದೆ. ಗ್ರಾಹಕರು ಫ್ಲಿಪ್‍ಕಾರ್ಟ್ ಆ್ಯಪ್ ಅನ್ನು ಬಳಸಿಕೊಂಡು ಈ ಮೋಟರ್-ಇನ್ಶೂರೆನ್ಸ್ ಅನ್ನು ಖರೀದಿಸಬಹುದಾಗಿದೆ.

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಜಾಜ್ ಡೀಲರ್‌ಶಿಪ್, ಸರ್ವೀಸ್ ಸೆಂಟರ್ ಆರಂಭ

ದ್ವಿಚಕ್ರ ವಾಹನ

  • ಇನ್‍ಸ್ಟಂಟ್ ಸಪೋರ್ಟ್: ದಿನದ 24 ಗಂಟೆಯೂ ಗ್ರಾಹಕರಿಗೆ ಎಸ್‍ಎಂಎಸ್, ಟೋಲ್‍ಫ್ರೀ ದೂರವಾಣಿ ಸಂಖ್ಯೆ, ವಾಟ್ಸಪ್ ಸೇವೆ, ಮಿಸ್ಡ್ ಕಾಲ್ ವ್ಯವಸ್ಥೆ, ಚಾಟ್ ಬಾಟ್ ಬೋಯಿಂಗ್ ಸೇರಿದಂತೆ ಇನ್ನಿತರೆ ಸೇವೆಗಳನ್ನು ಒದಗಿಸುತ್ತದೆ
  • ತಡೆರಹಿತವಾದ ನವೀಕರಣ:ಯಾವುದೇ ಪರಿಶೀಲನೆ ಇರುವುದಿಲ್ಲ, ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ, ಕೇವಲ ಪ್ರೀಮಿಯಂ ಹಣವನ್ನು ಪಾವತಿ ಮಾಡಿ ಯಾವುದೇ ಕಿರಿಕಿರಿ ಇಲ್ಲದೇ ನವೀಕರಣ ಮಾಡಬಹುದು
  • ನೋ-ಕ್ಲೇಮ್ ಬೋನಸ್‍ನ ವರ್ಗಾವಣೆ ಇಲ್ಲ: ಎನ್‍ಸಿಬಿ -ಒಂದು ವಿನೂತನವಾದ ವೈಶಿಷ್ಟ್ಯತೆಯಾಗಿದೆ. ಗ್ರಾಹಕರು ಪ್ರತಿ ಕ್ಲೇಮ್-ವರ್ಷವನ್ನು ರಿವಾರ್ಡ್ ರೂಪದಲ್ಲಿ ಪಡೆಯಲಿದ್ದಾರೆ. ಗ್ರಾಹಕರು ಹಿಂದಿನ ವರ್ಷದ ಪಾಲಿಸಿಯ ಶೇ.50 ರವರೆಗೆ ಎನ್‍ಸಿಬಿಯನ್ನು ವರ್ಗಾವಣೆ ಮಾಡಬಹುದಾಗಿದೆ.

ವಾಹನ: 

  • ಮೋಟರ್ ಒಟಿಎಸ್ (ಮೋಟರ್ ಆನ್ ದಿ ಸ್ಪಾಟ್): ಅಪಘಾತ ಸಂದರ್ಭಗಳಲ್ಲಿ ಗ್ರಾಹಕರು ಸ್ವಯಂ ಪರಿಶೀಲನೆ ಮಾಡಲು ಈ ಮೋಟರ್ ಒಟಿಎಸ್ ಅವಕಾಶ ಕಲ್ಪಿಸುತ್ತದೆ.
  • ಝೀರೋ ಡಿಪ್ರಿಸಿಯೇಷನ್: ಕಾರುಗಳಿಗೆ ಡಿಪ್ರಿಸಿಯೇಷನ್ ವೆಚ್ಚದಿಂದ ರಕ್ಷಣೆ ನೀಡುತ್ತದೆ, ಕ್ಲೇಮ್ ಮಾಡುವ ವೇಳೆ ತಮ್ಮ ಜೇಬಿನಿಂದ ಆಗುವ ಖರ್ಚನ್ನು ಕಡಿಮೆ ಮಾಡುತ್ತದೆ ಮತ್ತು ಉಳಿತಾಯವನ್ನು ಹೆಚ್ಚಿಸುತ್ತದೆ
  • 4000 ಕ್ಕೂ ಹೆಚ್ಚು ಗ್ಯಾರೇಜ್‍ಗಳ ಜಾಲ: ನಗದುರಹಿತವಾದ ಕ್ಲೇಮ್ ಸೆಟಲ್‍ಮೆಂಟ್ ಮತ್ತು ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ದೇಶಾದ್ಯಂತ ಇರುವ ಗ್ಯಾರೇಜ್‍ಗಳ ಜಾಲದಿಂದ ಪಡೆಯಬಹುದು
  • 24x7 ರೋಡ್ ಸೈಡ್ ನೆರವು: ಪಾಲಿಸಿ ಹೊಂದಿರುವವರು ದೇಶಾದ್ಯಂತ ರಸ್ತೆ ಬದಿಯ ನೆರವಿನ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ

ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಆತಂಕಕ್ಕೆ ಒಳಗಾಗಿರುವ ಗ್ರಾಹಕರಿಗೆ ಪರಿಹಾರ ನೀಡಿ ಅವರನ್ನು ನೆಮ್ಮದಿಯಾಗಿರುವಂತೆ ಮಾಡುವುದು ನಮ್ಮ ಈ ಯೋಜನೆಯ ಉದ್ದೇಶವಾಗಿದೆ. ಕಳೆದ ಕೆಲವು ತಿಂಗಳಿಂದ  ಭಾರತೀಯ ಗ್ರಾಹಕರ ಅಭಿರುಚಿಯನ್ನು ಅರ್ಥ ಮಾಡಿಕೊಂಡಿದ್ದೇವೆ. ಇದರನ್ವಯ ಫ್ಲಿಪ್‍ಕಾರ್ಟ್ ಜೀವವಿಮೆ, ಆರೋಗ್ಯ ಮತ್ತು ಡಿವೈಸ್‍ಗಳಿಗೆ ಹಲವಾರು ವಿಮಾ ಯೋಜನೆಗಳನ್ನು ನೀಡುತ್ತಿದೆ. ನಮ್ಮ ಪ್ಲಾಟ್‍ಫಾರ್ಮ್‍ನಲ್ಲಿ ಬರುವ ನಮ್ಮ ಗ್ರಾಹಕರಿಗೆ ಈ ಪರೀಕ್ಷೆಯ ಸಂದರ್ಭದಲ್ಲಿ ಅತ್ಯಂತ ಪ್ರಮುಖವಾದ ಪರಿಹಾರಗಳನ್ನು ಒದಗಿಸುತ್ತಿದೆ. ಮೋಟರ್-ಇನ್ಶೂರೆನ್ಸ್‍ನಲ್ಲಿ ಗ್ರಾಹಕರು ತಮ್ಮ ವಾಹನಗಳ ಸುರಕ್ಷತೆಗೆ ಸಂಬಂಧಿಸಿದಂತೆ ವಿಮೆಯನ್ನು ಪಡೆದುಕೊಳ್ಳಬಹುದಾಗಿದೆ. ನಾವು ಬಜಾಜ್ ಅಲಾಯನ್ಝ್ ಪಾಲುದಾರಿಕೆಯೊಂದಿಗೆ ಗ್ರಾಹಕ ಆಧಾರಿತ ಸೇವೆಯನ್ನು ಒದಗಿಸುತ್ತಿದ್ದೇವೆ. ಇದು ವಾಹನ ವಿಮೆ ಉದ್ಯಮದಲ್ಲಿ ಅತ್ಯಂತ ಹೆಚ್ಚು ಪ್ರಯೋಜನ ನೀಡುವಂತಹ ವಿಮೆ ಆಗಿದೆ ಎಂದು  ಫ್ಲಿಪ್‍ಕಾರ್ಟ್‍ನ ಫಿನ್‍ಟೆಕ್ ಅಂಡ್ ಪೇಮೆಂಟ್ಸ್ ಗ್ರೂಪ್‍ನ ಮುಖ್ಯಸ್ಥ ರಂಜಿತ್ ಬೋಯನಪಲ್ಲಿ ಹೇಳಿದರು. 

ನಮ್ಮ ಗ್ರಾಹಕರ ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ವಿಮೆ ಪರಿಹಾರಗಳನ್ನು ನೀಡುತ್ತಿದ್ದೇವೆ. ಇದರ ಜತೆಗೆ ಇದೀಗ ಫ್ಲಿಪ್‍ಕಾರ್ಟ್ ಜತೆ ಸೇರಿ ಮೊಬೈಲ್ ಇನ್ಶೂರೆನ್ಸ್ ನೀಡುತ್ತಿದ್ದೇವೆ. ಈ ಮೋಟರ್ ಇನ್ಶೂರೆನ್ಸ್ ಅನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತದೆ. ಇದು ನಮ್ಮ ವಿತರಣಾ ಮೂಲವನ್ನು ಬಲಪಡಿಸುವುದಷ್ಟೇ ಅಲ್ಲ, ಫ್ಲಿಪ್‍ಕಾರ್ಟ್ ಗ್ರಾಹಕರಿಗೆ ಅತ್ಯುತ್ಕಷ್ಠವಾದ ಸೇವೆಯನ್ನು ಒದಗಿಸುತ್ತದೆ ಎಂದು ಬಜಾಜ್ ಅಲಾಯನ್ಝ್ ಜನರಲ್ ಇನ್ಶೂರೆನ್ಸ್ ವ್ಯವಸ್ಥಾಪಕ ನಿರ್ದೇಶಕ & ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಪನ್ ಸಿಂಘೆಲ್ ಹೇಳಿದರು. 

Latest Videos
Follow Us:
Download App:
  • android
  • ios