ಆತ್ಮನಿರ್ಭರ್ ಭಾರತಕ್ಕೆ ಪುಷ್ಠಿ ನೀಡಿದ ನೂತನ ಮಹೀಂದ್ರ ಥಾರ್!
ಭಾರತದ ಹೆಮ್ಮೆಯ ಆಟೋಮೊಬೈಲ್ ಕಂಪನಿ ಮಹೀಂದ್ರ ಹೊಚ್ಚ ಹೊಸ ಮಹೀಂದ್ರ ಥಾರ್ ಜೀಪ್ ಅನಾವರಣ ಮಾಡಿದೆ. ಸ್ವಾತಂತ್ರ್ಯ ದಿನಾಚರಣೆಗೆ ನ್ಯೂ ಜನರೇಶನ್ ಥಾರ್ ಅನಾವರಣಗೊಂಡಿದೆ. ಗಾಂಧಿ ಜಯಂತಿ ದಿನ(ಅಕ್ಟೋಬರ್ 2) ನೂತನ ಥಾರ್ ಬಿಡುಗಡೆಯಾಗಲಿದೆ. ಪ್ರಧಾನಿ ಮೋದಿಯ ಆತ್ಮನಿರ್ಭರ್ ಭಾರತ ಪರಿಕಲ್ಪನೆಗೆ ಪುಷ್ಠಿ ನೀಡುವ ಜೀಪ್ ಇದಾಗಿದೆ. ಆತ್ಮನಿರ್ಭರ್ ಥಾರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
10 ವರ್ಷಗಳ ಬಳಿಕ ಮಹೀಂದ್ರ ಥಾರ್ ಹೊಸ ಅವತಾರದಲ್ಲಿ, ಹೆಚ್ಚು ಫೀಚರ್ಸ್, ಹೊಸ ವಿನ್ಯಾಸದಲ್ಲಿ ಅನಾವರಣಗೊಂಡಿದೆ
ನೂತನ ಮಹೀಂದ್ರ ಥಾರ್ ಪ್ರಧಾನಿ ಮೋದಿಯ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯ ಜೀಪ್
ಥಾರ್ ಹಾಗೂ ಆತ್ಮನಿರ್ಭರ್ ಕುರಿತು ಮಹೀಂದ್ರ ಅಟೋಮೇಕರ್ ನಿರ್ದೇಶಕ ಪವನ್ ಗೋಯೆಂಕ ಖಚಿತ ಪಡಿಸಿದ್ದಾರೆ
ನೂತನ ಥಾರ್ ಜೀಪ್ ಡಿಸೈನ್, ಎಂಜನೀಯರಿಂಗ್ ಹಾಗೂ ಉತ್ಪಾದನೆ ಸೇರಿದಂತೆ ಪ್ರತಿಯೊಂದು ಕೂಡ ಭಾರತದಲ್ಲೇ ಆಗಿದೆ
ಆತ್ಮನಿರ್ಭರ್ ಥಾರ್ ಜೀಪ್ ಕುರಿತು ಟ್ವೀಟ್ ಮೂಲಕ ಸಂತಸ ಹಂಚಿಕೊಂಡ ಪವನ್ ಗೋಯೆಂಕ
ಕಳೆದ 10 ವರ್ಷಗಳಲ್ಲಿ 60,000 ಮಹೀಂದ್ರ ಥಾರ್ ಜೀಪ್ ಮಾರಾಟವಾಗಿದೆ, ಇದೀಗ ನೂತನ ಥಾರ್ ಈ ದಾಖಲೆ ಮುರಿಯಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ
2.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 2.2 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್‌ಗಳಲ್ಲಿ ನೂತನ ಥಾರ್ ಜೀಪ್ ಲಭ್ಯವಿದೆ
226mm ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ, 650mm ಆಳದ ನೀರಿನಲ್ಲಿ ಥಾರ್ ಸಲೀಸಾಗಿ ಪ್ರಯಾಣ ಮಾಡಲಿದೆ