ಹೆಲ್ಮೆಟ್ ಧರಿಸಿದ್ದರೆ 26 ಸಾವಿರ ರೂ ಉಳಿಯುತ್ತಿತ್ತು, ಅಪ್ಪ-ಮಗನಿಗೆ ಎದುರಾಯ್ತು ಸಂಕಷ್ಠ!
ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಧರಿಸಿದರೆ ಅಪಘಾತ, ವಾಹನ ಸ್ಕಿಡ್ ಸೇರಿದಂತೆ ಯಾವುದೇ ಅವಘಡಗಳಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು. ಹೆಲ್ಮೆಟ್ ಉಪಯೋಗ ಇಷ್ಟು ಮಾತ್ರವಲ್ಲ, ಪೊಲೀಸರಿಂದಲೂ ಎಸ್ಕೇಪ್ ಆಗಬಹುದು. ಹೀಗೆ ಅಪ್ಪ-ಮಗ ಹೆಲ್ಮೆಟ್ ಧರಿಸಿದ ಕಾರಣ, ತೀವ್ರ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.
ಕಟಕ್(ಜ.16): ಅಪ್ರಾಪ್ತರು ವಾಹನ ಚಲಾಯಿಸುವುದು ಅಪರಾಧ. ಮಕ್ಕಳು ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಅಥವಾ ಜೈಲು ಶಿಕ್ಷೆ ತಪ್ಪಿದ್ದಲ್ಲ. ಅದರಲ್ಲೂ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ನಿಯಮಗಳು ಕಟ್ಟು ನಿಟ್ಟಾಗಿವೆ. ಹೀಗಾಗಿ ತಪ್ಪು ಸಣ್ಣದಾದರೂ ಭಾರಿ ದಂಡ ತೆರಬೇಕಾಗುತ್ತೆ. ಇದೀಗ ಅಪ್ಪನ ಕೂರಿಸಿಕೊಂಡು ಪೇಟೆಗೆ ಹೊರಟ ಮಗನನ್ನು ಪೊಲೀಸರು ಹಿಡಿದು ದಂಡ ಹಾಕಿದ್ದಾರೆ. ದಂಡ ಕೇಳಿದ ಅಪ್ಪ ಕಂಗಾಲಾಗಿದ್ದಾನೆ.
ಇದನ್ನೂ ಓದಿ: ತನ್ನದೇ ಬೈಕ್ ಸುಟ್ಟು ಆಕ್ರೋಶ; ವಾಹನವೂ ಹೋಯ್ತು, ಅರೆಸ್ಟ್ ಆದ!
ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕನಿಷ್ಠ 18 ವರ್ಷ ತುಂಬಿರಬೇಕು. ಮೋಟಾರು ವಾಹನ ತಿದ್ದುಪಡಿ ಬಳಿಕ ಈ ನಿಯಮ ಉಲ್ಲಂಘಿಸಿದರೆ ವಾಹನ ಮಾರಿ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಲಿದೆ. ಇದೀಗ ಒಡಿಶಾದ ಕಟಕ್‌ನಲ್ಲಿ ಅಪ್ಪನ ಕೂರಿಸಿಕೊಂಡು ಹೋದ ಮಗನನ್ನು ಪೊಲೀಸರು ಹಿಡಿದು ಅಪ್ಪನಿಗೆ ದಂಡ ಹಾಕಿದ್ದಾರೆ.
ಇದನ್ನೂ ಓದಿ: Zebra ಲೈನ್ ಕ್ರಾಸ್: ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ ಕಾರಿಗೆ ಡಬಲ್ ಫೈನ್!
ಮಗನ ವಯಸ್ಸು 17, ಇನ್ನೂ ಡ್ರೈವಿಂಗ್ ಲೆಸೆನ್ಸ್ ಪಡೆಯುವ ವಯಸ್ಸು ಆಗಿಲ್ಲ. ಲೆಸೆನ್ಸ್ ಕೂಡ ಇಲ್ಲ. ಪೊಲೀಸರು ತಪಾಸಣೆ ಮಾಡುತ್ತಿದ್ದ ವೇಳೆ ಅಪ್ಪ-ಮಗ ಹೆಲ್ಮೆಟ್ ಧರಿಸದೇ ಪ್ರಯಾಣಿಸುತ್ತಿದ್ದರು. ತಕ್ಷಣವೇ ಅಡ್ಡಗಟ್ಟಿದ ಪೊಲೀಸರು ಹೆಲ್ಮೆಟ್ ರಹಿತಿ ಪ್ರಯಾಣಕ್ಕೆ 1000 ರೂಪಾಯಿ ದಂಡ ಹಾಕಿದ್ದಾರೆ. ಈ ವೇಳೆ ಸವಾರನ ಲೈಸೆನ್ಸ್ ಕೇಳಿದ್ದಾರೆ. ಆದರೆ ಲೈಸೆನ್ಸಿ ನೀಡಲು ತಡಕಾಡಿದ ಮಗ, ಲೆಸೆನ್ಸ್ ಇಲ್ಲ ಎಂದಿದ್ದಾನೆ. ಪೊಲೀಸರು ಪರಿಶೀಲನೆ ನಡೆಸಿದಾಗ ಮಗನ ವಯಸ್ಸು 17 ಎಂಬುಬುದು ಧೃಡಪಟ್ಟಿದೆ. ಹೀಗಾಗಿ ಅಪ್ರಾಪ್ತ ಬೈಕ್ ರೈಡ್‌ಗೆ 25,000 ರೂಪಾಯಿ ಹಾಗೂ ಹೆಲ್ಮೆಟ್ ರಹಿತ ಪ್ರಯಾಣಕ್ಕೆ 1000 ರೂಪಾಯಿ ಒಟ್ಟು 26,000 ರೂಪಾಯಿ ದಂಡ ಹಾಕಲಾಗಿದೆ.
ಇದನ್ನೂ ಓದಿ: 10 ವರ್ಷದ ಬಾಲಕನಿಂದ ಕಾರು ಡ್ರೈವಿಂಗ್; ಪೋಷಕರಿಗೆ ಬಿತ್ತು ಬರೆ!...
ಅಷ್ಟು ಮೊತ್ತ ಇಲ್ಲದ ಅಪ್ಪ ಮಗ ದಿಕ್ಕು ತೋಚದೆ ನಿಂತಿದ್ದಾರೆ. ಪೊಲೀಸರು ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಆನ್‌ಲೈನ್ ಮೂಲಕ ಹಣ ಪಾವತಿಸಿ ಸ್ಕೂಟರ್ ಬಿಡಿಸಿಕೊಂಡು ಹೋಗಲು ಹೇಳಿದ್ದಾರೆ. ಇಷ್ಟೇ ಅಲ್ಲ ದಂಡ ಪಾವತಿಸದಿದ್ದರೆ, ಸ್ಕೂಟರ್ ರಿಜಿಸ್ಟ್ರೇಶನ್ ಹಾಗೂ ಮಾಲೀಕನ ಲೈಸೆನ್ಸ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೆಲ್ಮೆಟ್ ಧರಿಸಿದ್ದರೆ ಪೊಲೀಸರು ಈ ಬೈಕ್ ಸವಾರರನ್ನು ನಿಲ್ಲಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಕೇವಲ ಹೆಲ್ಮೆಟ್ ರಹಿತ ಸವಾರರನ್ನು ಮಾತ್ರ ಪೊಲೀಸರು ಟಾರ್ಗೆಟ್ ಮಾಡಿದ್ದರು. ಹೀಗಾಗಿ ಹೆಲ್ಮೆಟ್ ಪ್ರಾಣ ಮಾತ್ರವಲ್ಲ ದಂಡವನ್ನು ಉಳಿಸುತ್ತದೆ.