ನವದೆಹಲಿ(ಜು.20): ಡ್ಯುಕಾಟಿ ಇಂಡಿಯಾ ಭಾರತದಲ್ಲಿ ಪನಿಗೇಲ್ v2 ಬೈಕ್ ಬುಕಿಂಗ್ ಆರಂಭಿಸಿದೆ. 1 ಲಕ್ಷ ರೂಪಾಯಿ ನೀಡಿ ನೂತನ ಬೈಕ್ ಬುಕ್ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ಪನಿಗೇಲ್ V2 ಡ್ಯುಕಾಟಿಯ ಎಂಟ್ರಿಲ್ ಲೆವೆಲ್ ಬೈಕ್ ಆಗಿದೆ. ವಿಶೇಷ ಅಂದರೆ ಟ್ವಿನ್ ಸಿಲಿಂಡರ್ ಸೂಪರ್ ಕ್ವಾಡ್ರೋ ಎಂಜಿನ್ ಹೊಂದಿದೆ.

ಡುಕಾಟಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ-75 ಕಿ.ಮೀ ಮೈಲೇಜ್!.

ಡ್ಯುಕಾಟಿ ಇಂಡಿಯಾದ ಪ್ರಕಾರ ಬುಕ್ ಮಾಡಿದ ಗ್ರಾಹಕರಿಗೆ ಶೀಘ್ರದಲ್ಲೇ ಬೈಕ್ ಡಿಲೆವರಿ ಮಾಡಲಾಗುವುದು. ಡ್ಯುಕಾಟಿ ಇಂಡಿಯಾ ಡೀಲರ್‌ಗಳಲ್ಲಿ ನೂತನ ಬೈಕ್ ಲಭ್ಯವಿದೆ ಎಂದಿದೆ. ಭಾರತದಲ್ಲಿ ದೆಹಲಿ, ಬೆಂಗಳೂರು ಮುಂಬೈ, ಪುಣೆ, ಅಹಮ್ಮದಾಬಾದ್, ಕೋಲ್ಕತಾನ, ಕೊಚ್ಚಿ, ಚೆನ್ನೈ ನಗರಗಳಲ್ಲಿ ಡ್ಯುಕಾಟಿ ಪನಿಗೇಲ್ V2 ಲಭ್ಯವಿದೆ.

ಶಾಹಿದ್ ಕಪೂರ್ to ಸಂಜಯ್ ದತ್: ಯಾವ ನಟನಲ್ಲಿದೆ ಡುಕಾಟಿ ಬೈಕ್!

ಡ್ಯುಕಾಟಿ ಪನಿಗೇಲ್ ಬೈಕ್ ಬೆಲೆ 15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಪನಿಗೇಲ್ V2 ಬೈಕ್‌ಗೆ ಸರಿಸಾಟಿ ಯಾವುದೂ ಇಲ್ಲ. ರೈಡಿಂಗ್ ಅನುಭವ, ABS ಸೇರಿದಂತೆ ಆಧುನಿಕ ತಂತ್ಪಜ್ಞಾನದ ಬ್ರೇಕಿಂಗ್ ಸಿಸ್ಟಮ್, ಸ್ಪೋರ್ಟ್ ಲುಕ್, ಅಗ್ರೆಸ್ಸೀವ್ ಪವರ್ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಡ್ಯುಕಾಟಿ ಪನಿಗೇಲ್ V2 ಮುಂಚೂಣಿಯಲ್ಲಿದೆ ಡ್ಯುಕಾಟಿ ಇಂಡಿಯಾ ಹೇಳಿದೆ.