Asianet Suvarna News Asianet Suvarna News

ಟ್ರಾಫಿಕ್ ದಂಡ ಬಾಕಿ ಪಾವತಿಸುವವರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಪೊಲೀಸ್!

ಟ್ರಾಫಿಕ್ ನಿಯಮ ಉಲ್ಲಂಘಿಸಿ ದುಬಾರಿ ಮೊತ್ತ ಬಾಕಿ ಉಳಿಸಿಕೊಂಡಿರುವವರಿಗೆ ಪೊಲೀಸ್ ಭರ್ಜರಿ ಆಫರ್ ಘೋಷಿಸಿದೆ. ಈಗಾಗಲೇ ಬಾಕಿ ಪಾವತಿಗೆ ಡಿಸ್ಕೌಂಟ್ ಆಫರ್ ನೀಡಿದ್ದ ಪೊಲೀಸರು ಇದೀಗ ಅವದಿ ವಿಸ್ತರಿಸಿದ್ದಾರೆ. ಬಾಕಿ ಪಾವತಿಯಲ್ಲಿ ಡಿಸ್ಕೌಂಟ್ ಹೇಗೆ? ಈ ಆಫರ್ ನೀಡಿರುವು ಎಲ್ಲಿ? ಹಾಗೂ ಇತರ ಮಾಹಿತಿ ಇಲ್ಲಿದೆ.

Dubai police extend discount Traffic Violations Settlement Scheme
Author
Bengaluru, First Published Jan 27, 2020, 5:33 PM IST

ದುಬೈ(ಜ.27): ಭಾರತದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಕಟ್ಟಬೇಕು. ಹೀಗಾಗಿ ಹಲವರು ದುಬಾರಿ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ. ಈಗಾಗಲೇ ನಿಯಮ ಉಲ್ಲಂಘಿಸಿ ದುಬಾರಿ ದಂಡ ಕಟ್ಟಲಾಗದೆ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆಗಳು ನಡೆದಿದೆ. ಇದೀಗ ದುಬಾರಿ ದಂಡ ಬಾಕಿ ಉಳಿಸಿಕೊಂಡಿರುವರಿಗೆ ನೀಡಿದ್ದ ಡಿಸ್ಕೌಂಟ್ ಆಫರ್ ಅವದಿ ವಿಸ್ತರಿಸಲಾಗಿದೆ. 

ಇದನ್ನೂ ಓದಿ: ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಫೋನ್ ಮೂಲಕ ಮಾತನಾಡಿದರೂ ಬೀಳುತ್ತೆ ಫೈನ್!

ಡಿಸ್ಕೌಂಟ್ ಆಫರ್ ಯಾವತ್ತೂ ಭಾರತೀಯರಿಗೆ ಹೆಚ್ಚು ಖುಷಿ ಕೊಡುವ ವಿಚಾರ. ಆದರೆ ಪೊಲೀಸರ ಈ ಡಿಸ್ಕೌಂಟ್ ಆಫರ್ ಭಾರತದಲ್ಲಿ ಅಲ್ಲ, ಇದು ದುಬೈ ಪೊಲೀಸರ ಆಫರ್. ಡಿಸ್ಕೌಂಟ್ ಆಫರ್‌ನಲ್ಲೂ ಕೆಲ ಕಂಡೀಷನ್‌ಗಳಿವೆ. 2019ರ ಫೆಬ್ರವರಿಯಲ್ಲಿ ದುಬೈ ಪೊಲೀಸರು ಸೆಟ್ಲಮೆಂಟ್ ಸ್ಕೀಮ್ ಹೊರತಂದಿದ್ದರು. ಇದೀಗ ಈ ಸ್ಕೀಮ್ ಅವದಿಯನ್ನು ವಿಸ್ತರಿಸಲಾಗಿದೆ.

ಇದನ್ನೂ ಓದಿ: ಹೆಲ್ಮೆಟ್ ಧರಿಸಿದ್ದರೆ 26 ಸಾವಿರ ರೂ ಉಳಿಯುತ್ತಿತ್ತು, ಅಪ್ಪ-ಮಗನಿಗೆ ಎದುರಾಯ್ತು ಸಂಕಷ್ಠ!.

ದುಬೈ ಪೊಲೀಸರ ಸ್ಕೀಮ್ ಪ್ರಕಾರ ಶೇಕಡಾ 100 ರಷ್ಟು ಡಿಸ್ಕೌಂಟ್ ಲಭ್ಯವಿದೆ. ಟ್ರಾಫಿಕ್ ಫೈನ್ ಬಾಕಿ ಉಳಿಸಿಕೊಂಡಿರುವವರು, ಯೋಜನೆ ಜಾರಿಯಾದ ಬಳಿಕ 3 ತಿಂಗಳು ಯಾವುದೇ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡದಿದ್ದರೆ. ಶೇಕಡಾ 25 ರಷ್ಟು ಡಿಸ್ಕೌಂಟ್, ಇನ್ನು 6 ತಿಂಗಳು ಯಾವುದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದಿದ್ದರೆ ಶೇಕಡಾ 50 ರಷ್ಟು ಡಿಸ್ಕೌಂಟ್ ಹಾಗೂ 9 ತಿಂಗಳು ಯಾವುದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದಿದ್ದರೆ ಶೇಕಡಾ 75 ರಷ್ಟು ಡಿಸ್ಕೌಂಟ್ ನೀಡಲಾಗಿದೆ.

ಇದನ್ನೂ ಓದಿ:ತನ್ನದೇ ಬೈಕ್ ಸುಟ್ಟು ಆಕ್ರೋಶ; ವಾಹನವೂ ಹೋಯ್ತು, ಅರೆಸ್ಟ್ ಆದ!

2019ರ ಫೆಬ್ರವರಿ ಮೊದಲು ನಿಯಮ ಉಲ್ಲಂಘಿಸಿ ದಂಡ ಪಾವತಿ ಬಾಕಿ ಉಳಿಸಿಕೊಂಡಿರುವ ಹಾಗೂ 2019ರ ಫೆಬ್ರವರಿ ಬಳಿಕ ಟ್ರಾಫಿಕ್ ನಿಯಮ ಪಾಲಿಸಿರುವವರು ಯಾವುದೇ ದಂಡ ಕಟ್ಟಬೇಕಿಲ್ಲ. ಆದರೆ ಡಿಸ್ಕೌಂಟ್ ಆಫರ್ ಪಡೆಯುವವರು ಇನ್ನೆಂದು ಟ್ರಾಫಿಕ್ ನಿಯಮ ಉಲ್ಲಂಘಿಸಿವುದಿಲ್ಲ ಎಂದು ಶಪಥ ಮಾಡಬೇಕಿದೆ. ಶಪಥದ ಬಳಿಕ ನಿಯಮ ಉಲ್ಲಂಘಿಸಿದರೆ ಡಬಲ್ ಫೈನ್ ಹಾಗೂ ಪ್ರಕರಣ ಕೂಡ  ದಾಖಲಾಗಲಿದೆ.

ನೂತನ ಸ್ಕೀಮ್‌ನಿಂದ ಹಲವರು  ಬಾಕಿ ಉಳಿಸಿಕೊಂಡಿರು ಮೊತ್ತ ಪಾವತಿಸಿದ್ದಾರೆ. ಈ ಸ್ಕೀಮ್‌ಗೆ ಸ್ಪಂದನೆ ವ್ಯಕ್ತವಾದ ಹಿನ್ನಲೆಯಲ್ಲಿ ದುಬೈ ಪೊಲೀಸರು ಅವದಿ ವಿಸ್ತರಿಸಲಾಗಿದೆ.
 

Follow Us:
Download App:
  • android
  • ios