Asianet Suvarna News Asianet Suvarna News

ಬರಲಿದೆ ಮಾರುತಿ ಡಿಜೈರ್ ಪ್ರತಿಸ್ಪರ್ಧಿ ರೆನಾಲ್ಟ್ ಕ್ವಿಡ್ ಸೆಡಾನ್ ಕಾರು!

ರೆನಾಲ್ಟ್ ಇಂಡಿಯಾ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. ರೆನಾಲ್ಟ್ ಕ್ವಿಡ್ ಬಳಿಕ ಇದೀಗ 3 ಕಾರುಗಳನ್ನು ಬಿಡುಗಡೆ ಮಾಡಲು ರೆನಾಲ್ಟ್ ಮುಂದಾಗಿದೆ. ಇದೀಗ ಮಾರುತಿ ಸುಜುಕಿ ಡಿಜೈರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ ಕಾರು ಬಿಡುಗಡೆಯಾಗಲಿದೆ.

Renault India will launch Maruti dzire competitor kwid sedan car
Author
Bengaluru, First Published Apr 25, 2019, 1:47 PM IST

ನವದೆಹಲಿ(ಏ.25): ರೆನಾಲ್ಟ್ ಕ್ವಿಡ್ ಕಾರು ಭಾರತದಲ್ಲಿ ಸಂಚಲನ ಸೃಷ್ಟಿಸಿದೆ. ಸಣ್ಣ ಹಾಗೂ ಕಡಿಮೆ ಬೆಲೆ ಕಾರು ಹಲವರ ಕಾರು ಕನಸು ನನಸಾಗಿಸಿದೆ. ಇದೀಗ ರೆನಾಲ್ಟ್ ಮಾರುತಿ ಬ್ರೆಜಾಗೆ ಪ್ರತಿಸ್ಪರ್ಧಿಯಾಗಿ SUV ಕಾರು ಹಾಗೂ ಇನೋವಾಗೆ ಪೈಪೋಟಿಯಾಗಿ MPV ಕಾರು ಬಿಡುಗಡೆ ಮಾಡಡುತ್ತಿದೆ. ಇದರ ಬೆನ್ನಲ್ಲೇ ಮಾರುತಿ ಡಿಜೈರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಕ್ವಿಡ್ ಸೆಡಾನ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. 

ಇದನ್ನೂ ಓದಿ: ಬೇಸಿಗೆಯಲ್ಲಿ ಕಾರಿನ AC ಎಫೆಕ್ಟೀವ್ ಮಾಡಲು ಇಲ್ಲಿದೆ 5 ಸರಳ ಟಿಪ್ಸ್!

ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ರೆನಾಲ್ಟ್ ಕ್ವಿಡ್ ಸೆಡಾನ್ ಕಾರು ಬಿಡುಗಡೆಯಾಗುತ್ತಿದೆ. ಶೀಘ್ರದಲ್ಲೇ ರೆನಾಲ್ಟ್ ಓಟ್ಟು 3 ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ರೆನಾಲ್ಟ್ ಕ್ವಿಡ್ ಟ್ರೈಬರ್ MPV, ರೆನಾಲ್ಟ್ ಕ್ವಿಡ್ HBC(SUV) ಹಾಗೂ ರೆನಾಲ್ಟ್ ಕ್ವಿಡ್ ಸೆಡಾನ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಇದೀಗ ರೆನಾಲ್ಟ್ ಇಂಡಿಯಾ, ಮಾರುತಿ ಸುಜುಕಿ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ಬಾಲಿವುಡ್ ನಟಿ ವಿದ್ಯಾ ಬಾಲನ್ ಮನೆಗೆ ಹೊಸ ಅತಿಥಿ!

ನೂತನ ರೆನಾಲ್ಟ್ ಸೆಡಾನ್ ಕಾರಿಗೆ LBA ಎಂದು ಹೆಸರಿಡಲಾಗಿದೆ. ಈ ಕಾರು ಮಾರುತಿ ಡಿಜೈರ್, ಫೋರ್ಡ್ ಆಸ್ಪೈರ್, ಹ್ಯುಂಡೈ  ಎಕ್ಸೆಂಟ್ ಹಾಗೂ ಟಾಟಾ ಟಿಗೋರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿದೆ. ಈ ಕಾರು 2021ರ ಅಂತ್ಯ ಅಥಲಾ 2022ರ ಆರಂಭದಲ್ಲಿ ಬಿಡುಗಡೆಯಾಗಲಿದೆ. 1.0 ಲೀಟರ್ ಟರ್ಬೋಚಾರ್ಜ್‌ಡ್ ಪೆಟ್ರೋಲ್ ಎಂಜಿನ್ ಇರಲಿದೆ ಎಂದು ಕಂಪನಿ ಹೇಳಿದೆ. ಈ ಕಾರಿನ ಬೆಲೆ ಬಹಿರಂಗವಾಗಿಲ್ಲ, ಆದರೆ 5 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಅಂದಾಜಿಸಲಾಗಿದೆ.

Follow Us:
Download App:
  • android
  • ios