ನವದೆಹಲಿ(ಡಿ.17): ಭಾರತದ ಐತಿಹಾಸಿಕ ಸ್ಕೂಟರ್ ಲ್ಯಾಂಬಿ(ಲ್ಯಾಂಬ್ರಟ್ಟಾ) ಮತ್ತೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಜಾವಾ ಮೋಟರ್ ಬೈಕ್ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ 1975ರಲ್ಲಿ ಭಾರತದ ಮನೆ ಮಾತಾಗಿದ್ದ ಲ್ಯಾಂಬಿ ಸ್ಕೂಟರ್ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ.

1947ರಲ್ಲಿ ಇಟಲಿಯಲ್ಲಿ ಆರಂಭಗೊಂಡ ಲ್ಯಾಂಬ್ರೆಟ್ಟಾ ಕಂಪೆನಿ, 1972ರಲ್ಲಿ ಲ್ಯಾಂಬ್ರೆಟ್ಟಾ ಸ್ಕೂಟರ್ ಭಾರತಕ್ಕೆ ಕಾಲಿಟ್ಟಿತು. ಸ್ಕೂಟರ್ ಇಂಡಿಯಾ ಲಮಿಟೆಡ್ ಭಾರತದಲ್ಲಿ ಲ್ಯಾಂಬ್ರೆಟ್ಟಾ ಸ್ಕೂಟರ್ ನಿರ್ಮಾಣ ಹಕ್ಕು ಪಡೆಯಿತು. ಲ್ಯಾಂಬ್ರೋ ಹಾಗೂ ವಿಜಯ್ ಸೂಪರ್ ಹೆಸರಿನಲ್ಲಿ ಭಾರತದಲ್ಲಿ ಲ್ಯಾಂಬಿ ಸ್ಕೂಟರ್ ಹೆಚ್ಚು ಪ್ರಸಿದ್ಧಿ ಪಡೆಯಿತು.

1972 ರಿಂದ 1990ರ ವರೆಗೆಭಾರತದಲ್ಲಿ ಯಶಸ್ವಿಯಾಗಿ ಮರೆದಾಡಿದ ಲ್ಯಾಂಬ್ರೆಟ್ಟಾ ಸ್ಕೂಟರ್ ಬಳಿಕ ಬಜಾಜ್ ಚೇತಕ್ ಸ್ಕೂಟರ್‌ನಿಂದ ತೀವ್ರ ಪೈಪೋಟಿ ಎದುರಿಸಿತು. ಹೀಗಾಗಿ 1993ರಲ್ಲಿ ಲ್ಯಾಂಬ್ರೆಟ್ಟಾ ಸ್ಥಗಿತಗೊಂಡಿತು. ಇದೀಗ 25 ವರ್ಷಗಳ ಬಳಿಕ ಲ್ಯಾಂಬ್ರೆಟ್ಟಾ ಸ್ಕೂಟರ್ ಮತ್ತೆ ಭಾರತದ ರಸ್ತೆಗಿಳಿಯುತ್ತಿದೆ.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಕಾರುಗಳಿಗೆ ಪೈಪೋಟಿ- ಬಿಡುಗಡೆಯಾಗಲಿದೆ 4 ಎಲೆಕ್ಟ್ರಿಕ್ ಕಾರು!

ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ. ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪೈಪೋಟಿಯಾಗಿ ನೂತನ ಲ್ಯಾಂಬ್ರೆಟ್ಟಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ. 2020ರ ಆಟೋ ಎಕ್ಸ್‌ಪೋದಲ್ಲಿ ಈ ಸ್ಕೂಟರ್ ಪರಿಚಯಿಸಲಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: