ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಎಲ್ಲರಿಗೂ ಮಾದಿರಿಯಾಗೋ ನಿರ್ಧಾರ ತೆಗೆದುಕೊಂಡಿದ್ದಾರೆ. ಪರಿಸರಕ್ಕೆ ಪೂರಕವಾಗಿರುವ ಎಲೆಕ್ಟ್ರಿಕ್ ಕಾರು ಬಳಕೆ ಆರಂಭಿಸಿದ್ದಾರೆ. ಇಷ್ಟೇ ಅಲ್ಲ ಜನರಲ್ಲಿ ವಿಶೇಷ ಮನವಿಯನ್ನು ಮಾಡಿದ್ದಾರೆ. 

ನವದೆಹಲಿ(ನ.18): ದೆಹಲಿ ವಾಯು ಮಾಲಿನ್ಯ ಮೀತಿ ಮೀರಿದೆ. ಹಲವು ಕ್ರಮ ಕೈಗೊಳ್ಳುತ್ತಿದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಡೀಸೆಲ್ ವಾಹನದ ಬದಲು ಎಲೆಕ್ಟ್ರಿಕ್ ಕಾರು ಬಳಸಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಇದೀಗ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಎಲೆಕ್ಟ್ರಿಕ್ ಕಾರು ಬಳಕೆ ಮಾಡೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜಾವಡೇಕರ್ ಹ್ಯುಂಡೈ ಇತ್ತೀಚೆಗೆ ಬಿಡುಗಡೆ ಮಾಡಿದ ಕೋನಾ ಎಲೆಕ್ಟ್ರಿಕ್ ಕಾರಿನ ಮೂಲಕ ಸಂಸತ್ತಿಗೆ ಆಗಮಿಸಿದರು.

ಇದನ್ನೂ ಓದಿ: ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ಕಾರು ಮೊರೆ ಹೋದ ಉಪಮುಖ್ಯಮಂತ್ರಿ!

ಚಳಿಗಾಲದ ಮೊದಲ ದಿನದ ಅಧಿವೇಶನಕ್ಕೆ ಪ್ರಕಾಶ್ ಜಾವಡೇಕರ್ ಎಲೆಕ್ಟ್ರಿಕ್ ಕಾರಿನ ಮೂಲಕ ಸಂಸತ್ತಿಗೆ ಆಗಮಿಸಿದ್ದಾರೆ. ನಾನು ಪರಿಸರ ಸಚಿವ, ಎಲೆಕ್ಟ್ರಿಕ್ ಕಾರು ಉಪಯೋಗಿಸುವ ಮೂಲಕ ಪರಿಸರಕ್ಕೆ ನನ್ನ ಸಣ್ಣ ಕೊಡುಗೆಯಾದರೂ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. 

Scroll to load tweet…

ದೆಹಲಿ ಮಾಲಿನ್ಯ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ದೆಹಲಿ ನಾಗರೀಕರಲ್ಲಿ ನನ್ನ ಮನವಿ, ಸೈಕಲ್ ಅಥವಾ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡಿ ಎಂದು ಜಾವಡೇಕರ್ ಹೇಳಿದರು. ಜನರಲ್ಲಿ ಮನವಿ ಮಾಡಿರುವ ಜಾವಡೇಕರ್ ಎಲೆಕ್ಟ್ರಿಕ್ ಕಾರಿನ ಮೂಲಕ ಪ್ರಯಾಣ ಆರಂಭಿಸಿದ್ದಾರೆ. 

ಇದನ್ನೂ ಓದಿ: ಹೆಚ್ಚು ಮೈಲೇಜ್, ಕಡಿಮೆ ಬೆಲೆ; ಟಾಟಾ ಬಿಡುಗಡೆ ಮಾಡಿದೆ ಹೊಸ ಕಾರು

ಜಾವಡೇಕರ್ ಮಾತ್ರವಲ್ಲ, ಬಿಜೆಪಿ ಸಂಸದ ಮನ್ಸುಕ್ ಮಾಂಡವಿಯಾ, ಮನೋಜ್ ತಿವಾರಿ ಸೈಕಲ್ ಮೂಲಕ ಸಂಸತ್ತಿಗೆ ಆಗಮಿಸಿದರು. ಇತ್ತೀಚೆಗೆ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಬಳಕೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು; ಸವಾರಿ ಬಲು ಜೋರು!.

ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಸಬ್ಸಡಿ ನೀಡಲಾಗುತ್ತಿದೆ. ಇಷ್ಟೇ ಅಲ್ಲ ಜಿಎಸ್‌ಟಿ ಸೇರಿದಂತೆ ಇತರ ತೆರೆಗೆಯನ್ನು ಕಡಿತಗೊಳಿಸಲಾಗಿದೆ. ಈ ಮೂಲಕ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.