ಬೆಂಗಳೂರು(ಡಿ.29): ಬ್ರಿಟೀಷರು ದೋಚಿ ಹೋದ ಮೇಲೆ ಭಾರತ ಬರಿದಾಗಿತ್ತು. 1947ರ ನಂತರ ಭಾರತ ಸ್ವತಂತ್ರ್ಯವಾಗಿ ವಿಶ್ವದೆಲ್ಲಡೆ ತಲೆಎತ್ತಿ ನಿಂತಿತ್ತು. ಭಾರತದಲ್ಲಿ ಅಲ್ಲೊಂದು-ಇಲ್ಲೊಂದು ಕಾರು ಬೈಕ್‌ಗಳು ಭಾರತದಲ್ಲಿ ಕಾಣಸಿಗುತ್ತಿತ್ತು.  ಆದರೆ  1980 ಹಾಗೂ 1990ರ ದಶಕ ಭಾರತದ ಆಟೋಮೊಬೈಲ್ ಕ್ಷೇತ್ರ ಕ್ರಾಂತಿ ಮಾಡಿತ್ತು.  

ಹೆಚ್ಚಿನ ಮನೆಗಳಲ್ಲಿ ಕಾರು ಬೈಕ್ ರಾರಾಜಿಸತೊಡಗಿತು. ಮಾರುತಿ 800 ಬಳಿಕ ಭಾರತದಲ್ಲಿ ಹಲವು ಕಾರುಗಳ ಅಗ್ರಜನಾಗಿ ಮೆರದಾಡಿದೆ. ಹಿಂದೂಸ್ಥಾನ್ ಮೋಟಾರ್ಸ್ ಬಿಡುಗಡೆ ಮಾಡಿದ ಅಂಬಾಸಿಡರ್, ಫಿಯೆಟ್ ಕಂಪೆನಿಯ ಪ್ರೀಮಿಯರ್ ಪದ್ಮಿನಿ 1990-2000ದಲ್ಲೂ ತನ್ನ ಘನತೆ ಗಾಂಭೀರ್ಯ ಉಳಿಸಿಕೊಂಡಿತ್ತು. 

ಇದನ್ನೂ ಓದಿ: ಪೊಲೀಸರ ರಣತಂತ್ರ: ರಾಂಗ್ ಸೈಡ್ ಹೋದರೆ ಪಂಚರ್!

ಮಾರುತಿ 800, ಅಂಬಾಸಿಡರ್ ಜೊತೆಗೆ ಇತರ ಕಾರುಗಳು ಭಾರತವನ್ನ ಆಕ್ರಮಿಸಿಕೊಂಡಿತ್ತು. ಹೀಗೆ 1990ರ ಸನಿಹದಲ್ಲಿ ಭಾರತೀಯರನ್ನ ಮೋಡಿ ಮಾಡಿದ 8 ಕಾರುಗಳು ವಿವರ ಇಲ್ಲಿದೆ.

ಇದನ್ನೂ ಓದಿ: ಎಲ್ಲಾ ವಾಹನಗಳಿಗೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ!

ಕಾಂಟೆಸ್ಸಾ 


1984ರಲ್ಲಿ ಬಿಡುಗಡೆಯಾದ ಕಾಂಟೆಸ್ಸಾ ಕಾರು 49bhp ಪವರ್ ಹೊಂದಿತ್ತು. 83,437.50 ರೂಪಾಯಿಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ ಕಾಂಟೆಸ್ಸಾ ಹೊಸ ಅಲೆ ಸೃಷ್ಟಿಸಿತು. 

ಮಾರುತಿ 1000


ಮಾರುತಿ 800, ಮಾರುತಿ ಓಮ್ಮಿ ಬಳಿಕ ಭಾರತದಲ್ಲಿ ಮಾರುತಿ ಸಂಸ್ಥೆ ಮಾರುತಿ 1000 ಬಿಡುಗಡೆ ಮಾಡಿತು. ಮಾರುತಿ 1000 ಸೆಡಾನ್ ಕಾರು ಬಿಡುಗಡೆ ಮಾಡೋ ಮೂಲಕ ಹೊಸ ಇತಿಹಾಸ ರಚಿಸಿತು. 1.3 ಲೀಟರ್ ಎಂಜಿನ್ ಕಾರು ಮತ್ತೆ ಮಾರುತಿ ಎಸ್ಟೀಮ್ ಆಗಿ ಬಿಡುಗಡೆಗೊಂಡಿತು.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ರೆಡ್ಡಿಚ್ ABS ಬೈಕ್ ಬಿಡುಗಡೆ!

ಮಾರುತಿ ಜೆನ್


ಸೆಡಾನ್ ಕಾರಿನ ಬಳಿಕ 1993ರಲ್ಲಿ ಮಾರುತಿ ಜೆನ್ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಸಣ್ಣ ಕಾರು ಹಾಗೂ ಹೆಚ್ಚು ಸ್ಟೈಲಿಶ್ ಮಾಡೆಲ್ ಭಾರತೀರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.