ಬೆಂಗಳೂರು(ಫೆ.25): ಬೆಂಗಳೂರಿನಲ್ಲಿ ಮನೆ ಖಾಲಿ ಮಾಡಿ ಹೊಸ ಮನೆ ಸೇರಿಕೊಳ್ಳುವಾಗ ಅಥವಾ ಇತರ ಯಾವುದೇ ವಸ್ತುಗಳನ್ನ ಒಂದು ಕಡೆಯಿಂದ ಮತ್ತೊದೆಡೆ ಸಾಗಿಸಲು ಹೆಚ್ಚಾಗಿ ಪ್ಯಾಕ್ಸ್ ಹಾಗೂ ಮೂವರ್ಸ್ ಸಹಾಯ ಪಡೆಯುವುದು ಸಾಮಾನ್ಯ. ಹೀಗೆ ಪ್ಯಾಕರ್ಸ್ ಹಾಗೂ ಮೂವರ್ಸ್ ಸಹಾಯ ಪಡೆದು ಅನ್ಯಾಯಕ್ಕೊಳಗಾದ ವ್ಯಕ್ತಿ ಬರೋಬ್ಬರಿ 4 ವರ್ಷಗಳ ಬಳಿಕ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯ ಟೆಸ್ಟ್ ಡ್ರೈವ್‌ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!

2015ರಲ್ಲಿ ಬೆಂಗಳೂರಲ್ಲಿ ಐಟಿ ಉದ್ಯೋಗಿಯಾಗಿರುವ ಸಿಮಂತ್ ದತ್, ತಮ್ಮ ಹ್ಯುಂಡೈ ಎಲಾಂಟ್ರ ಕಾರನ್ನ ಅಸ್ಸಾಂ ನಿಂದ ಬೆಂಗಳೂಗೆ ಸಾಗಿಸಲು ನಿರ್ಧರಿಸಿದ್ದರು. ಐಟಿ ಕ್ಷೇತ್ರದಲ್ಲಿ ಉಪಾಧ್ಯಕ್ಷನಾಗಿರುವ ಸಿಮಂತ್ ದತ್ತ, ನೇರವಾಗಿ ಅಗರ್ವಾಲ್ ಪ್ಯಾಕರ್ಸ್ & ಮೂವರ್ಸ್ ಸಹಾಯ ಪಡೆದಿದ್ದಾರೆ. ಅಕ್ಟೋಬರ್ 9 ರಂದು ತಮ್ಮ ಕಾರನ್ನ ಅಗರ್ವಾಲ್ ಪ್ಯಾಕರ್ಸ್ & ಮೂವರ್ಸ್ ನೀಡಿ ಹಣ ಪಾವತಿಸಿದ್ದಾರೆ.

ಇದನ್ನೂ ಓದಿ: ಸಾಬೀತಾಯ್ತು ಟಾಟಾ ನೆಕ್ಸಾನ್ ಕಾರು ಸುರಕ್ಷತೆ- ಪಿಲ್ಲರ್ ಬಿದ್ದರೂ ಪ್ರಯಾಣಿಕರು ಸೇಫ್!

ಅಗರ್ವಾಲ್ ಪ್ಯಾಕರ್ಸ್ & ಮೂವರ್ಸ್ ಕಾರನ್ನ ಅಕ್ಟೋಬರ್ 26 ರಂದು ಬೆಂಗಳೂರಿಗೆ ತಲುಪಿಸುವುದಾಗಿ ಹೇಳಿದ್ದಾರೆ. ಆದರೆ ಹೇಳಿದ ದಿನಾಂಕದಂದು ಕಾರು ಬರಲೇ ಇಲ್ಲ. ಹೀಗಾಗಿ ಬೆಂಗಳೂರಿನಲ್ಲಿರುವ ಅಗರ್ವಾಲ್ ಪ್ಯಾಕರ್ಸ್ & ಮೂವರ್ಸ್ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ. ಕಾರಿಗಾಗಿ ಪ್ರತಿ ದಿನ ಕಚೇರಿ ಅಲೆದಿದ್ದಾರೆ. ನಿರಂತರ ಪ್ರಯತ್ನ ಫಲವಾಗಿ ನವೆಂಬರ್ 6 ರಂದು ಕಾರು ಬೆಂಗಳೂರು ತಲುಪಿದೆ. ಇದಕ್ಕಾಗಿ ಸಿಮಂತ್ ದತ್ 43,670 ರೂಪಾಯಿ ಪಾವತಿಸಿದ್ದರು.

ಇದನ್ನೂ ಓದಿ: ಕೆಟ್ಟು ನಿಂತ ಭಾರತದ ಅತಿ ವೇಗದ ರೈಲು: ಏನಾಗಿತ್ತು?

ಕಾರಿನ ಕವರ್ ತೆಗೆದಾಗ ಸಿಮಂತ್ ದತ್ತಾಗೆ ಆಘಾತವಾಗಿತ್ತು. ಕಾರಿನ ಮುಂಭಾಗ ಡ್ಯಾಮೇಜ್ ಆಗಿತ್ತು. ಇಷ್ಟೇ ಅಲ್ಲ ಕಾರಿನ ಒಳಭಾಗದಲ್ಲಿ ನೀರು ತುಂಬಿಕೊಂಡಿತ್ತು. ಕಾರು ಸ್ಟಾರ್ಟ್ ಕೂಡ ಆಗುತ್ತಿರಲಿಲ್ಲ. ಹೀಗಾಗಿ ಗ್ರಾಹಕರ ನ್ಯಾಯಾಲಯದ ಮೊರೆ ಹೋದರು. 4 ವರ್ಷಗಳ ಬಳಿಕ ಸಿಮಂತ್ ದತ್ ಗೆಲುವು ಸಾಧಿಸಿದ್ದಾರೆ. ಕಾರು ಸರಿಪಡಿಸಲು ಹಾಗು ಪರಿಹಾರವಾಗಿ 4 ಲಕ್ಷ ರೂಪಾಯಿ ನೀಡುವಂತೆ ಕೋರ್ಟ್ ಸೂಚಿಸಿದೆ.