Asianet Suvarna News Asianet Suvarna News

ಶಾಲಾ ಪ್ರವಾಸಕ್ಕೂ ಮೊದಲು ಚಾಲಕನ ಸಾಹಸ; ಬಸ್ ವಶಕ್ಕೆ, ಲೆಸೆನ್ಸ್ ರದ್ದು!

ವಾಹನದಲ್ಲಿ ಸ್ಟಂಟ್ ಮಾಡುವುದು ಅಪಾಯಕಾರಿ ಮಾತ್ರವಲ್ಲ ನಿಯಮ ಉಲ್ಲಂಘನೆ. ಇದೇ ರೀತಿ ಅಪಾಯಾಕಾರಿ ಸ್ಟಂಟ್ ಮಾಡಿದ ಶಾಲಾ ಬಸ್ ಚಾಲಕನ ಲೈಸೆನ್ಸ್ ರದ್ದು ಮಾಡಿ, ಪ್ರಕರಣ ದಾಖಲಿಸಲಾಗಿದೆ.

Bus driver licence canceled after stunt in school ground
Author
Bengaluru, First Published Nov 30, 2019, 5:58 PM IST

ಕೊಲ್ಲಂ(ನ.30): ಶಾಲಾ ವಿದ್ಯಾರ್ಥಿಗಳಲ್ಲಿ ಸಂಭ್ರಮ ಒಂದೆಡೆಯಾದರೆ, ಪ್ರವಾಸಕ್ಕೆ ಸಕಲ ಸಿದ್ದತೆ ಮಾಡಿಕೊಂಡ ಶಿಕ್ಷಕರು ಮತ್ತೊಂದೆಡೆ. ಪ್ರವಾಸಕ್ಕೆ ಎರಡು ಖಾಸಗಿ ಬಸ್‌ಗಳು ಮೈದಾನದಲ್ಲಿ ಸಜ್ಜಾಗಿದೆ. ಆದರೆ ಪ್ರವಾಸಕ್ಕೂ ಮೊದಲು ಬಸ್ ಚಾಲಕನ ಮೈದಾನದಲ್ಲಿ ಸಾಹಸ ಪ್ರದರ್ಶಿಸಿದ್ದಾನೆ. ಬಳಿಕ ಶಾಲಾ ಪ್ರವಾಸಕ್ಕೆ ತೆರಳಿದ ಬಸ್ ಚಾಲಕ, ಮರಳಿ ಶಾಲೆ ಸೇರುವುದರೊಳಗೆ ಲೈಸೆನ್ಸ್ ರದ್ದಾಗಿದೆ. ಇಷ್ಟೇ ಅಲ್ಲ ಬಸ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ: ಕಾಲೇಜು ಹುಡುಗಿಯರ ಗೋವಾ ಟ್ರಿಪ್; ಬಸ್ ಚಾಲಕನ ಲೈಸೆನ್ಸ್ ರದ್ದು

ಕೇರಳದ ಕೊಲ್ಲಂ ಜಿಲ್ಲೆಯ ವೆಂದಾರ್ ಬಳಿಯ ವಿದ್ಯಾದಿರಾಜಾ ಶಾಲೆಯಲ್ಲಿ ಈ ಘಟನೆ ನಡೆದಿದೆ.  ಪ್ರವಾಸಕ್ಕೆ ಎರಡು ಖಾಸಗಿ ಬಸ್‌ಗಳನ್ನು ಶಾಲಾ ಆಡಳಿತ ಮಂಡಳಿ ಬುಕ್ ಮಾಡಿದೆ. ಪ್ರವಾಸಕ್ಕಾಗಿ ವಿದ್ಯಾರ್ಥಿಗಳೆಲ್ಲಾ ಮೈದಾನದಲ್ಲಿ ಜಮಾಯಿಸಿದ್ದರು. ಹಲವು ವಿದ್ಯಾರ್ಥಿಗಳು ಬಸ್ ಏರಿ ಕುಳಿತಿದ್ದರು. ಈ ವೇಳೆ ವಿದ್ಯಾರ್ಥಿಗಳ ಮುಂದೆ ಬಸ್ ಚಾಲಕ ಸಾಹಸ ಪ್ರದರ್ಶಿಸಿದ್ದಾನೆ.

ಇದನ್ನೂ ಓದಿ: 30 ತಿಂಗಳಲ್ಲಿ ಕಾರಿನ 34 ಟೈರ್‌ ಬದಲಾಯಿಸಿದ ಸಚಿವ!

ಮೈದಾನದಲ್ಲಿ ಬಲ್ ಚಲಿಸುತ್ತಿರುವಾಗಲೆ ಚಾಲಕ ಬಸ್‌ನಿಂದ ಇಳಿದು, ಬಸನ್ನೇ ಎಳೆದು ತರುವ ರೀತಿಯಲ್ಲಿ ಸಾಹಸ ಮಾಡಿದ್ದಾನೆ. ಚಾಲಕನ ಸಾಹಸ ಪ್ರದರ್ಶನದ ವೇಳೆ ಬಸ್‌ನಲ್ಲಿ ಕೆಲ ವಿದ್ಯಾರ್ಥಿಗಳಿದ್ದರೆ, ಮೈದಾನದಲ್ಲಿ ಕೂಡ ಹಲವು ವಿದ್ಯಾರ್ಥಿಗಳಿದ್ದರು. ಅಪಾಯಾಕಾರಿ ಸಾಹಸವನ್ನು ವಿದ್ಯಾರ್ಥಿಗಳು ವಿಡಿಯೋ ಮಾಡಿ ಸಂಭ್ರಮಿಸಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಮದಲ್ಲಿ ವೈರಲ್ ಆಗುತ್ತಿದ್ದಂತೆ, ಕೇರಳ ಟ್ರಾಫಿಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಕ್ಷಣವೆ ಶಾಲೆಗೆ ತೆರಳಿ ಮಾಹಿತಿ ಪಡೆದಿದ್ದಾರೆ. ಶಾಲಾ ಪ್ರವಾಸದಲ್ಲಿದ್ದ ಬಸ್ ಚಾಲಕ ಮರಳಿ ಶಾಲೆಗೆ ಬರುವ ವರೆಗೂ ಪೊಲೀಸರು ಶಾಲೆಯಲ್ಲಿ ಠಿಕಾಣಿ ಹೂಡಿದ್ದಾರೆ. ಶಾಲೆಗೆ ಬಸ್ ಬಂದ ತಕ್ಷಣವೇ ಚಾಲಕನಿಂದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ: ಆಧುನಿಕ ಬಾಹುಬಲಿ; ನಡು ರಸ್ತೆಯಲ್ಲಿದ್ದ ಸ್ವಿಫ್ಟ್ ಕಾರನ್ನೇ ಎತ್ತಿ ಬದಿಗಿಟ್ಟ ಚಾಲಕ!

ಬಸ್ ಚಾಲಕನ ಲೈಸೆನ್ಸ್ ರದ್ದು ಮಾಡಿ, ಬಸನ್ನು ವಶಕ್ಕೆ ಪಡೆದಿದ್ದಾರೆ. ಚಾಲಕನ್ನು ಅರೆಸ್ಟ್ ಮಾಡಲಾಗಿತ್ತು. ಆದರೆ ಜಾಮೀನು ಮೂಲಕ ಚಾಲಕ ಹೊರಬಂದಿದ್ದಾನೆ. ಬಸ್ ಚಾಲಕನನ್ನು ರಂಜು ಎಂದು ಗುರುತಿಸಲಾಗಿದೆ. ಬಸ್ ವಶಕ್ಕೆ ಪಡೆದು ಪರೀಶೀಲನೆ ನಡೆಸಿರುವ ಪೊಲೀಸರು ಚಾಲನಕ ಅಪಾಯಕಾರಿ ಸ್ಟಂಟ್ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಸ್‌ಗೆ ನಿಯಮ ಬಾಹಿರ ಹಾರನ್ ಬಳಸಲಾಗಿದೆ. ಇನ್ನು ಹೆಚ್ಚುವರಿ ಲೈಟ್ಸ್ ಕೂಡ ಬಳಸಲಾಗಿದೆ. ಹೀಗಾಗಿ ಮಾಡಿಫಿಕೇಶನ್ ನಿಯಮದಡಿ ಮತ್ತೆರಡು ಕೇಸ್ ದಾಖಲಿಸಲಾಗಿದೆ. ಈ ಬಸ್ ಜೊತೆಗೆ ಕಾರು ಕೂಡ ಶಾಲಾ ಮೈದಾನದಲ್ಲಿ ಸ್ಟಂಟ್ ಮಾಡಿದೆ. ಈ ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಚಾಲಕನ ಲೈಸೆನ್ಸ್ ಕ್ಯಾನ್ಸಲ್ ಮಾಡಿದ್ದಾರೆ.

Follow Us:
Download App:
  • android
  • ios