Asianet Suvarna News Asianet Suvarna News

30 ತಿಂಗಳಲ್ಲಿ ಕಾರಿನ 34 ಟೈರ್‌ ಬದಲಾಯಿಸಿದ ಸಚಿವ!

ಸಚಿವರ ಖರ್ಚು ವೆಚ್ಚಗಳನ್ನು ಸರಕಾರ ನೋಡಿಕೊಳ್ಳುತ್ತೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹಲವರು ಸಿಕ್ಕ ಸಿಕ್ಕ ಬಿಲ್ ಕಳುಹಿಸಿ ಹಣ ಮಂಜೂರು ಮಾಡಿಕೊಳ್ಳುತ್ತಾರೆ. ಇದೀಗ ಕಾಗಕ್ಕ ಗುಬ್ಬಕ್ಕನ ಕತೆ ಹೇಳಿ ಸಚಿವರೊಬ್ಬರು 30 ತಿಂಗಳಲ್ಲಿ ತಮ್ಮ ಕಾರಿನ 34 ಟೈರ್ ಬದಲಾಯಿಸಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ಲಕ್ಷ ಲಕ್ಷ ಹಣ ಮಂಜೂರು ಮಾಡಿಸಿಕೊಂಡಿದ್ದಾರೆ.

Kerala Minister MM Mani changed 34 tyres of his car in 30 months
Author
Bengaluru, First Published Oct 31, 2019, 12:39 PM IST

ಕೊಚ್ಚಿ(ಅ.31) : ಸರ್ಕಾರ ಸಚಿವರಿಗೆ ಗೂಟದ ಕಾರು ನೀಡುತ್ತದೆ. ಇದರ ಖರ್ಚು-ವೆಚ್ಚವೂ ಸರ್ಕಾರವೇ ಭರಿಸಬೇಕು. ಹಾಗಂತ ಇದನ್ನು ಯರ್ರಾಬಿರ್ರಿ ಬಳಸಿದರೆ ಹೇಗೆ?  ಇದೀಗ ಇಂಧನ ಸಚಿವರೊಬ್ಬರು ತಮ್ಮ ಕಾರಿನ ಟೈರನ್ನು 30 ತಿಂಗಳಲ್ಲಿ 34 ಭಾರಿ ಬದಲಾಯಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಇಂಧನಕ್ಕಿಂತ ಸಚಿವರ ಟೈರ್ ದುಬಾರಿಯಾಗಿದೆ. 

ಇದನ್ನೂ ಓದಿ: ಟಯರ್ ಆಯ್ಕೆಯಲ್ಲಿ ನಿರ್ಲಕ್ಷ್ಯ ಬೇಡ- ಇಲ್ಲಿದೆ ಭಾರತದ ಟಾಪ್ 5 ಟಯರ್

ಕೇರಳದ ಸಚಿವರು ಸರ್ಕಾರ ತಮಗೆ ನೀಡಿದ ಕಾರಿನ ಟೈರ್‌ಗಳ ಬಗ್ಗೆ ಅದೆಷ್ಟುಕಾಳಜಿ ಹೊಂದಿದ್ದಾರೆ ಅಂದರೆ, 30 ತಿಂಗಳಲ್ಲಿ ಬರೋಬ್ಬರಿ 34 ಬಾರಿ ಕಾರಿನ ಟೈರ್‌ ಬದಲಾಯಿಸಿ ಸರ್ಕಾರದ ಬೊಕ್ಕಸವನ್ನೇ ಖಾಲಿ ಮಾಡಲು ಹೊರಟಿದ್ದಾರೆ. ಇಂಧನ ಸಚಿವ ಎಂ.ಎಂ. ಮಣಿ ಇದರಲ್ಲಿ ಅಗ್ರಪಂಕ್ತಿಯಲ್ಲಿದ್ದು, ಎರಡೂವರೆ ವರ್ಷದಲ್ಲಿ 34 ಬಾರಿ ತಮ್ಮ ಕಾರಿನ ಟೈರ್‌ ಬದಲಾಯಿಸಿದ್ದಾರಂತೆ. 

ಇದನ್ನೂ ಓದಿ: ಕೊಳೆತ ಟೊಮ್ಯಾಟೊ, ಮೊಟ್ಟೆಯಿಂದ ಕಾರು ಟಯರ್ ಉತ್ಪಾದನೆ ಸಾಧ್ಯ!

ಇದಕ್ಕಾಗಿ 3.4 ಲಕ್ಷ ರೂ. ವ್ಯಯಿಸಿದ್ದಾರೆ. ಒಂದು ಟೈರ್‌ ಬೆಲೆ 10000 ದಿಂದ 13000 ಬೆಲೆ ಬಾಳುತ್ತದೆ. MM ಮಣಿ ಹೇಳೋ ಪ್ರಕಾರ, ಸರಿಸುಮಾರು 26 ದಿನಕ್ಕೆ ಸಚಿವರು ಕಾರಿನ ಚಕ್ರ ಬದಲಾಯಿಸಿದ್ದಾರೆ. ಸಾಮಾನ್ಯವಾಗಿ ಕಾರುಗಳ ಟೈರ್‌ಗೆ 1 ಲಕ್ಷ ಕಿ.ಮೀ ವಾರೆಂಟಿ ಇರುತ್ತೆ. ಇಂಧನ ಸಚಿವ ಮಣಿ ಪ್ರಕಾರ,  26 ದಿನಕ್ಕೆ 1 ಲಕ್ಷಕ್ಕೂ ಹೆಚ್ಚು  ಕಿ.ಮೀ ಪ್ರಯಾಣಿಸಿದ್ದಾರೆ.  ಅಂದರೆ ಮಣಿ 30 ತಿಂಗಳಲ್ಲಿ ಕನಿಷ್ಠ 3.4 ಕೋಟಿ ಕಿ.ಮೀ ಪ್ರಯಾಣ ಮಾಡಿದ್ದಾರೆ. 

ಅಸಲಿಗೆ ಇಡೀ ಕೇರಳ ಸುತ್ತಾಡಿದರೆ 38,863 ಕಿ.ಮೀ ಆಗಲಿದೆ. ಆದರೆ ಸಚಿವ ಮಣಿ ಲೆಕ್ಕ ಕೋಟಿ ದಾಟಿದೆ. ಇನ್ನು ಅರಣ್ಯ ಸಚಿವ ಕೆ.ರಾಜು 19 ಬಾರಿ ಚಕ್ರ ಬದಲಾಯಿಸಿ 1.9 ಲಕ್ಷ ವ್ಯಯಿಸಿದರೆ, ಜಲಸಂಪನ್ಮೂಲ ಸಚಿವ ಕೆ.ಕೃಷ್ಣನ್‌ಕುಟ್ಟಿ13 ಬಾರಿ ಬದಲಾಯಿಸಿದ್ದಾರೆ. ವಿಶೇಷವೆಂದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ತಮ್ಮ ಸರ್ಕಾರಿ 2 ಕಾರಿಗೆ 11 ಬಾರಿ ಟೈರ್‌ ಅನ್ನು ಬದಲಾಯಿಸಿದ್ದಾರೆ

ಮಣಿ ದಾಖಲೆಯ ಟೈರ್ ಬದಲಾವಣೆಗೆ ಕೇರಳ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ. 

 

Follow Us:
Download App:
  • android
  • ios