ಕಾಲೇಜು ಹುಡುಗಿಯರ ಗೋವಾ ಟ್ರಿಪ್; ಬಸ್ ಚಾಲಕನ ಲೈಸೆನ್ಸ್ ರದ್ದು
ಗೋವಾ ಅಂದರೆ ಎಲ್ಲರ ಕಿವಿ ನೆಟ್ಟಗಾಗುತ್ತೆ. ಗೋವಾ ಟ್ರಿಪ್ ಅಂದರೆ ಕೇಳಬೇಕಾ? ಹೀಗೆ ಕಾಲೇಜು ಹುಡುಗಿಯರನ್ನು ಕರೆದುಕೊಂಡು ಗೋವಾ ಟ್ರಿಪ್ ಹೋದ ಬಸ್ ಚಾಲಕನ ಲೈಸೆನ್ಸ್ ರದ್ದಾಗಿದೆ.
ವಯನಾಡು(ನ.18): ಸಾಮಾಜಿಕ ಜಾಲತಾಣ ಯಾರನ್ನೂ ಬೇಕಾದರೂ ಹೀರೋ ಮಾಡುತ್ತೆ. ಕ್ಷಣಾರ್ಧದಲ್ಲಿ ವಿಡಿಯೋ, ಪೋಟೋ ವೈರಲ್ ಆಗಿ ಸ್ಟಾರ್ ಆಗಬಲ್ಲ. ಇಷ್ಟೇ ಅಲ್ಲ ಒಂದೇ ನಿಮಿಷದಲ್ಲಿ ಇರೋ ಪದವಿ, ಘನತೆಯನ್ನು ಕಳೆದುಕೊಳ್ಳವ ಸಾಧ್ಯತೆಗಳಿವೆ. ಹೀಗೆ ಗೋವಾ ಟ್ರಿಪ್‌ನಲ್ಲಿನ ವೈರಲ್ ವಿಡೀಯೋದಿಂದ ಬಸ್ ಚಾಲಕನೊಬ್ಬನ ಲೈಸನ್ಸ್ ರದ್ದಾಗಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಬರಲ್ಲ, ಆಗಲ್ಲ ಎಂದ 918 ಆಟೋ ಚಾಲಕರ ಲೈಸೆನ್ಸ್ ರದ್ದು!
ಈ ಘಟನೆ ನಡೆದಿದ್ದು ಕೇರಳದಿಂದ ಗೋವಾ ಟ್ರಿಪ್‌ನಲ್ಲಿ. ಕಾಲೇಜು ಹುಡುಗಿಯರ ಗೋವಾ ಟ್ರಿಪ್ ಬಸ್ ಚಾಲಕನಿಗೆ ಸಂಕಷ್ಟ ತಂದೊಡ್ಡಿದೆ. ಕಾಲೇಜು ಹುಡುಗಿಯರ ಗೋವಾ ಟ್ರಿಪ್ ಅಂದಾಕ್ಷಣ ಬಸ್ ಚಾಲಕ ಕೂಡ ಟಿಪ್ ಟಾಪ್ ಆಗಿ ಬಂದಿದ್ದಾನೆ. ಕೇರಳದಿಂದ ಗೋವಾ ಹೊರಟ ಬಸ್‌ನಲ್ಲಿ ಮಸ್ತಿ ಆರಂಭವಾಯಿತು. ಈ ನಡುವೆ ಕೆಲ ಹುಡುಗಿಯರ ಗುಂಪು ಬಸ್ ಚಾಲನಕ ಬಳಿಕ ತೆರಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ 30% ಲೈಸೆನ್ಸ್ ನಕಲಿ; ರದ್ದಾಗೋ ಮುನ್ನ ಚೆಕ್ ಮಾಡಿಕೊಳ್ಳಿ!
ಹುಡುಗಿಯರ ಗುಂಪು ನೋಡಿ ಚಾಲಕ ಪುಳಕಿತನಾಗಿದ್ದಾನೆ. ಇಷ್ಟೇ ಅಲ್ಲ ಬಸ್ ಚಲಿಸುತ್ತಿರುವಾಗಲೇ ಹುಡುಗಿಯರಿಗೆ ಗೇರ್ ಬದಲಾಯಿಸಲು ಅವಕಾಶ ನೀಡಿದ್ದಾರೆ. ಹುಡುಗಿಯರು ಹಲವು ಬಾರಿ ಗೇರ್ ಬದಲಾಯಿಸಿದ್ದಾರೆ. ಇದರ ನಡುವೆ ಚಾಲಕ ಕೂಡ ಗೇರ್ ಬದಲಾಯಿಸಿದ್ದಾನೆ. ಹುಡುಗಿಯರಿಗೆ ಬಸ್ ಗೇರ್ ಹಾಕಿದ ಸಂಭ್ರಮ. ಇತ್ತ ಚಾಲಕನಿಗೆ ಹುಡುಗಿಯರ ಕೈ ಹಿಡಿದು ಗೇರ್ ಬದಲಾಯಿಸಿ ಸಂತಸ. ಇಷ್ಟೇ ಆಗಿದ್ದರೆ ಹೆಚ್ಚಿನ ಅಪಾಯ ಎದುರಾಗುತ್ತಿರಲಿಲ್ಲ. ಈ ಗೇರ್ ಬದಲಾಯಿಸುವ ಕಾರ್ಯಕ್ರಮವನ್ನು ಹುಡುಗಿಯರು ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ: 15 ಸಾವಿರ ಬೆಲೆಯ ಸ್ಕೂಟಿ: ಹೈರಾಣಾದ 23 ಸಾವಿರ ದಂಡ ಕಟ್ಟಿ!
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇಷ್ಟೇ ನೋಡಿ. ಮಿಂಚಿನ ವೇಗದಲ್ಲಿ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಆರ್‌ಟಿಒ ಅಧಿಕಾರಿಗಳ ಕೈಗೂ ಸಿಕ್ಕಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆರ್‌ಟಿಒ ಬಸ್ ಚಾಲಕನನ್ನು ಗುರುತಿಸಿದ್ದಾರೆ. ಅಜಾಗರೂಕತೆಯಿಂದ ಚಾಲನೆ ಹಾಗೂ ಚಲಿಸುತ್ತಿರುವಾಗ ಬಸ್ ಚಾಲಕನ ಅಪಾಯಕಾರಿ ವರ್ತನೆ ಮಾಡಿದ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ 6 ತಿಂಗಳ ಕಾಲ ಲೈಸನ್ಸ್ ಕ್ಯಾನ್ಸಲ್ ಮಾಡಿದ್ದಾರೆ.
ನಿಯಮದ ಪ್ರಕಾರ, ಯಾವುದೇ ವಾಹನ ಚಲಿಸುವಾಗ ಸಂಪೂರ್ಣ ನಿಯಂತ್ರಣ ಚಾಲನಕ ಮೇಲಿರುತ್ತೆ. ಈ ಸಂದರ್ಭದಲ್ಲಿ ಸಹ ಪ್ರಯಾಣಿಕರಿಗೆ ವಾಹನ ಚಲಾಯಿಸುವ ಅಥವಾ ಚಾಲನೆಗೆ ಸಂಬಂಧಿಸಿದ ಸ್ಟೇರಿಂಗ್, ಗೇರ್ ಸೇರಿದಂತೆ ಯಾವುನ್ನೂ ಉಪಯೋಗಿಸುವ ಅವಕಾಶವಿಲ್ಲ. ಚಾಲನೆ ಮಾಡುವಾಗ ಬ್ರೇಕ್, ಸ್ಟೇರಿಂಗ್, ಕ್ಲಚ್, ಗೇರ್, ಆಕ್ಸಲರೇಟರ್ ಸೇರಿದಂತೆ ಎಲ್ಲವೂ ಕೂಡ ಚಾಲಕನ ನಿಯಂತ್ರಣದಲ್ಲಿರುತ್ತೆ. ಅದರಲ್ಲೂ ಬಸ್ ರೀತಿಯ ಘನವಾಹನಗಳಲ್ಲಿ ಸಹ ಪ್ರಯಾಣಿಕರಿಗೆ ಅವಕಾಶ ಮಾಡಿಕೊಡುವುದು ಹೆಚ್ಚಿನ ಅಪಾಯವನ್ನ ಮೈಮೇಲೆ ಎಳೆದಂತೆ ಹೀಗಾಗಿ ಬಸ್ ಚಾಲಕನಿಗೆ ದಂಡ ವಿಧಿಸಲಾಗಿದೆ.