ಪಂಜಾಬ್(ನ.24): ಟ್ರಾಫಿಕ್ ನಿಯಮ ಪಾಲನೆಯಲ್ಲಿ ಭಾರತೀಯರು ತುಸು ಹಿಂದೆ. ಅದರಲ್ಲೂ ಎಲ್ಲೆಂದರಲ್ಲಿ ಪಾರ್ಕ್ ಮಾಡುವು ಖಯಾಲಿ ಹೆಚ್ಚಿನವರಲ್ಲಿದೆ. ಅದರಲ್ಲೂ ಕಿರಿದಾದ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿದರೆ ಇತರರು ಪರದಾಡಬೇಕಾದ ಪರಿಸ್ಥಿತಿ. ಇದೇ ರೀತಿ ರಸ್ತೆಯಲ್ಲಿ ಕಾರು ಪಾರ್ಕಿ ಮಾಡಿದ ಕಾರಣ, ಇದೇ ದಾರಿಯಲ್ಲಿ ಬಂದ ವಾಹನ ಚಾಲಕ ಕಾರನ್ನೇ ಎತ್ತಿ ಬದಿಗಿಟ್ಟು ಮುಂದೆ ಸಾಗಿದ ಘಟನೆ ನಡೆದಿದೆ. 

ಇದನ್ನೂ ಓದಿ: ಫಾಸ್ಟ್ ಟ್ಯಾಗ್ ಇಲ್ದಿದ್ರೆ ಡಿ. 1 ರಿಂದ ದುಪ್ಪಟ್ಟು ಶುಲ್ಕ

ಈ ಘಟನೆ ವಿಡಿಯೋವನ್ನು ಪಂಜಾಬ್ ಪೊಲೀಸರೊಬ್ಬರು ಹಂಚಿಕೊಂಡಿದ್ದಾರೆ. ಕಿರಿದಾದ ರಸ್ತೆಯಲ್ಲಿ ಸ್ವಿಫ್ಟ್ ಡಿಸೈರ್ ಕಾರನ್ನು ಪಾರ್ಕ್ ಮಾಡಲಾಗಿತ್ತು. ಇದೇ ದಾರಿಯಲ್ಲಿ ಮಹೀಂದ್ರ TUV300 ವಾಹನ ಬಂದಿತ್ತು. ಸ್ವಿಫ್ಟ್ ಡಿಸೈರ್ ಕಾರು ಪಾರ್ಕ್ ಮಾಡಿದ ಕಾರಣ, ಮಹೀಂದ್ರ TUV300 ಮಾಲೀಕನಿಗೆ ಮುಂದೆ ಸಾಗಲು ಸಾಧ್ಯವಾಗಿಲ್ಲ. ಹಲವು ಬಾರಿ ಹಾರ್ನ್ ಹಾಕಿದ್ದಾನೆ. ಆದರೆ ಸ್ವಿಫ್ಟ್ ಕಾರು ಕದಲಿಲ್ಲ.

 

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ JCB ಡ್ರೈವರ್ ರಂಪಾಟ; ಪೊಲೀಸರಿಗೆ ಪ್ರಾಣ ಸಂಕಟ!

ಮಹೀಂದ್ರ TUV300 ಚಾಲಕ ಕಾರಿನಿಂದ ಇಳಿದು ಪಾರ್ಕ್ ಮಾಡಿದ ಸ್ವಿಫ್ಟ್ ಕಾರು ಬಳಿ ತೆರಳಿದ್ದಾನೆ. ಸ್ವಿಫ್ಟ್ ಕಾರು ಪಾರ್ಕ್ ಮಾಡಲಾಗಿತ್ತು. ಹೀಗಾಗಿ ಮಾಲೀಕ, ಕಾರನ್ನು ತನ್ನ ಶಕ್ತಿ ಬಳಸಿ ಬದಿಗೆ ಸರಿಸಿದ್ದಾನೆ. ಮಹೀಂದ್ರ ಕಾರು ಮಾಲೀಕನ ಟೆಕ್ನಿಕ್ ನೋಡಿ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಡಿಸೈರ್ ಕಾರು ಸರಿಸುಮಾರು 1,070 kg ತೂಕ ಹೊಂದಿದೆ. ಈ ಕಾರನ್ನು ಪಕ್ಕಕ್ಕೆ ಸರಿಸಿದ ಈ ಮಾಲೀಕನಿಗೆ ಆಧುನಿಕ ಬಾಹುಬಲಿ ಎಂದೇ ಕರೆಯಲಾಗುತ್ತಿದೆ.