ಬರಲ್ಲ, ಆಗಲ್ಲ ಎಂದ 918 ಆಟೋ ಚಾಲಕರ ಲೈಸೆನ್ಸ್ ರದ್ದು!

ನಗರದ ಹೊರಭಾಗದ ಮಾತು ಬದಿಗಿರಲಿ, ನಗರದೊಳಗೆ ಕನಿಷ್ಠ 3ಕಿ.ಮೀ ವ್ಯಾಪ್ತಿಯೊಳಗೆ ಬರಲು ಆಟೋ ಚಾಲಕರು ನಿರಾಕರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಳಿದರೆ ಆಗಲ್ಲ ಅಂತಾರೆ, ಮನವಿ ಮಾಡಿದರೆ, 200 ಕೊಡಿ, 300 ಕೊಡಿ ಅಂದೇ ಬಿಡ್ತಾರೆ. ಇದೀಗ ಈ ರೀತಿ ಹೇಳಿದ 918 ಆಟೋ ಚಾಲಕರ ಲೈಸೆನ್ಸ್ ರದ್ದಾಗಿದೆ.  ಬೆಂಗಳೂರಿನ ಆಟೋ ಚಾಲಕರು ಎಚ್ಚರವಹಿಸೋದು ಮುಖ್ಯ.

Mumbai RTO suspended 918 auto driver licence for refusing rides

ಮುಂಬೈ(ಆ.14): ಭಾರತದ ಬದಲಾಗುತ್ತಿದೆ. ರಸ್ತೆ ನಿಯಮಗಳು ಬಿಗಿ ಗೊಳ್ಳುತ್ತಿದೆ. ವಾಹನ ಚಲಾಯಿಸುವಾಗ ಎಚ್ಚರ ವಹಿಸದಿದ್ದರೆ ದಂಡ ಮಾತ್ರವಲ್ಲ, ಶಿಕ್ಷೆಗೂ ಗುರಿಯಾಗಬೇಕಾಗುತ್ತೆ. ಪ್ರಯಾಣಿಕರ ಸುರಕ್ಷತೆ, ಆದ್ಯತೆಗಳಿಗೆ ಹೆಚ್ಚಿನ ಒತ್ತು ಸಿಕ್ಕಿದೆ. ಹೀಗಾಗಿ ಟ್ಯಾಕ್ಸಿ, ಕ್ಯಾಬ್, ಆಟೋ  ಚಾಲಕರು ಯಾರನ್ನೂ ನಿರ್ಲಕ್ಷಿಸುವಂತಿಲ್ಲ. ಇದೇ ರೀತಿ ಪ್ರಯಾಣಿಕರು ಕರೆದಾಗ, ಆಗಲ್ಲ, ಬರಲ್ಲ ಎಂದು 918 ಮಂದಿ ಆಟೋ ಚಾಲಕರ ಲೈಸೆನ್ಸ್ ರದ್ದಾಗಿದೆ.

ಇದನ್ನೂ ಓದಿ: ಪ್ರಯಾಣಿಕರನ್ನು ನಿರ್ಲಕ್ಷಿಸಿದ್ರೆ ಆಟೋ ಚಾಲಕರ ಲೈಸೆನ್ಸ್ ರದ್ದು!

ಮುಂಬೈನ ಥಾಣೆಯ 918 ಆಟೋ ರಿಕ್ಷಾ ಚಾಲಕರ ಲೈಸೆನ್ಸ್ ರದ್ದಾಗಿದೆ. ಪ್ರಯಾಣಿಕರನ್ನು ನಿರ್ಲಕ್ಷಿಸಿದ ಕಾರಣಕ್ಕೆ ಮುಂಬೈ RTO(The Regional Transport Office) ದಿಟ್ಟ ಕ್ರಮ ಕೈಗೊಂಡಿದೆ. ಕಳೆದ 3 ತಿಂಗಳಿಂದ ಆಟೋ ಚಾಲಕರ ಮೇಲೆ ನಿಗಾ ಇಟ್ಟಿದ್ದ ಪೊಲೀಸರು,ಸುಮಾರು 1500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.  ಇದರಲ್ಲಿ 918 ಮಂದಿ ಚಾಲಕರ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗಿದೆ. 

ಇದನ್ನೂ ಓದಿ: ಮಸೂದೆ ಪಾಸ್, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಭಾರೀ ದಂಡ!: ಯಾವುದಕ್ಕೆ ಎಷ್ಟು ದಂಡ?

ಲೈಸೆನ್ಸ್ ರದ್ದಾಗಿರುವ ಆಟೋ ಚಾಲಕರ ಮನವಿಯನ್ನು ತಿರಸ್ಕರಿಲಾಗಿದೆ. ಹೀಗಾಗಿ 918 ಆಟೋ ಚಾಲಕರು ಭಾರತದ ಯಾವುದೇ ಭಾಗದಲ್ಲಿ ವಾಹನ ಚಲಾಯಿಸುವಂತಿಲ್ಲ. ಕಳೆದ 6 ತಿಂಗಳಲ್ಲಿ ರಸ್ತೆ ನಿಯಮ ಉಲ್ಲಂಘನೆಯಿಂದ 12,342 ಆಟೋ ಚಾಲಕರ ಲೈಸೆನ್ಸ್ ರದ್ದಾಗಿದೆ. ಈ 12,342 ಆಟೋ ಚಾಲಕರಲ್ಲಿ 918 ಮಂದಿ ಚಾಲಕರು ಪ್ರಯಾಣಿಕರನ್ನು ನಿರ್ಲಕ್ಷಿಸಿದ ಕಾರಣಕ್ಕೆ ದಂಡ ತೆರಬೇಕಾಗಿದೆ.

ಇದನ್ನೂ ಓದಿ: 3 ಗಂಟೆಯಲ್ಲಿ 1,169 ಡ್ರಿಂಕ್ & ಡ್ರೈವ್ ಪ್ರಕರಣ; ಬೆಂಗಳೂರು ಪೊಲೀಸರ ದಾಖಲೆ!

ಇದೀಗ ಬೆಂಗಳೂರಿನ ಪ್ರಯಾಣಿಕರು  ಈ ನಿಯಮ ಉದ್ಯಾನ ನಗರಿಯಲ್ಲಿ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.  ಕಾರಣ ಬೆಂಗಳೂರು ನಗರದೊಳಗೆ ಆಟೋ ಚಾಲಕರು ಪ್ರಯಾಣಿಕರನ್ನು ನಿರ್ಲಕ್ಷಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. 3 ಕಿ.ಮೀ ವ್ಯಾಪ್ತಿಯೊಳಗೆ ಬರಲು ಕೂಡ ಆಟೋ ಚಾಲಕರು ನಿರಾಕರಿಸಿದ ಉದಾಹರಣೆಗಳು ಸಾಕಷ್ಟಿವೆ. ತಮಗಿಷ್ಟವಾದ ಹಾಗೂ ದುಬಾರಿ ಮೊತ್ತ ಕೀಳುವ ಅವಕಾಶಗಳಿದ್ದರೆ ಮಾತ್ರ ಆಟೋ ಚಾಲಕರು ತಾ ಮುಂದು ತಾಮುಂದು ಎಂದು ನಿಲ್ಲುತ್ತಾರೆ. ಇಲ್ಲವಾದಲ್ಲಿ, ಅಲ್ಲಿಗೆ ಬರಲ್ಲ, 25 ರೂಪಾಯಿ ದೂರದ ಪ್ರಯಾಣವಿದ್ದರೂ 200 ಕೊಡಿ, 300 ಕೊಡಿ ಎಂದು ಹೇಳುವ ಚಾಲಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.ಮುಂಬೈ ರೀತಿಯಲ್ಲಿ ಬೆಂಗಳೂರಲ್ಲೂ ಕಟ್ಟು ನಿಟ್ಟಿನ ನಿಯಮ ಆಗಬೇಕಿದೆ ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios