ಬೆಂಗಳೂರು(ಆ.26): ವಿಶ್ವದ ದುಬಾರಿ ಕಾರಾದ ಬುಗಾಟಿ ಇದೀಗ ನೂತನ ಡಿವೋ ಕಾರು ಬಿಡುಗಡೆ ಮಾಡಿದೆ. ಬುಗಾಟಿ ಸಂಸ್ಥೆಯ ಎಲ್ಲಾ ಕಾರುಗಳು ದುಬಾರಿಯಾಗಿದೆ. ಜೊತೆಗೆ ಲಕ್ಸುರಿ ಕಾರುಗಳನ್ನ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ.

ನೂತನ ಬುಗಾಟಿ ಡಿವೋ ಕಾರಿನ 5 ಅಂಶಗಳು ಎಲ್ಲರಿಗೆ ಗೊತ್ತಿರಲೇಬೇಕು. ಎಲ್ಲರಿಗೂ ಈ ಕಾರನ್ನ ಖರೀದಿಸುವುದು ಅಸಾಧ್ಯ. ಹಾಗಂತ ಬುಗಾಟಿ ಕಾರಿನ ಕುರಿತು ತಿಳಿದುಕೊಳ್ಳದೇ ಇರುವುದು ಉತ್ತಮವಲ್ಲ.

ಇಲ್ಲಿದೆ ಬುಗಾಟಿ ಡಿವೋ ಕಾರಿನ ಗೊತ್ತಿರಲೇಬೇಕಾದ ಅಂಶಗಳು: 

  • ವಿಶ್ವದ ಅತ್ಯಂತ ದುಬಾರಿ ಬುಗಾಟಿ ಡಿವೋ ಒಟ್ಟು 40 ಕಾರುಗಳನ್ನ ಮಾತ್ರ ತಯಾರಿಸಲಾಗಿದೆ.  ಪ್ರತಿ ಕಾರಿನ ಬೆಲೆ 40 ಕೋಟಿ ರೂಪಾಯಿ(ಏಕ್ಸ್ ಶೋ ರೂಂ)
  • ಬುಗಾಟಿ ಡಿವೋ 40 ಕಾರುಗಳು ಬಿಡುಗಡೆಗೂ ಮುನ್ನವೇ ಸೋಲ್ಡ್ ಆಟೌ ಆಗಿದೆ.(ಆನ್‌ಲೈನ್ ಬುಕ್ಕಿಂಗ್ ಮೂಲಕ ಎಲ್ಲಾ 40 ಕಾರುಗಳು ಸೇಲ್)
  • ಬುಗಾಟಿ ಡಿವೋ ಕಾರು 1479 ಬಿಹೆಚ್‌ಪಿ ಪವರ್ ಹೊಂದಿದೆ. 0-100 ಕೀಮಿ ಪ್ರಯಾಣಕ್ಕೆ ಬುಗಾಟಿ ಡಿವೋ ತೆಗೆದುಕೊಂಡ ಸಮಯ 2.4 ಸೆಕೆಂಡುಗಳು. 
  • ಬುಗಾಟಿ ಡಿವೊ ಗರಿಷ್ಠ ವೇಗ 30 ಕೀಮಿ ಪ್ರತಿ ಗಂಟೆಗೆ. ವಿಶೇಷ ಅಂದರೆ ಇದರ ನಾಲ್ಕು ಚಕ್ರಗಳನ್ನ ಬದಲಾಯಿಸೋ ಹಣದಲ್ಲಿ BMW ಫುಲ್ ಲೋಡೆಡ್ ಕಾರು ಖರೀದಿಸಬುಹುದು.
  • ಬುಗಾಟಿ ಡಿವೋ ಕಾರಿನ ಆಯಿಲ್ ಬದಲಾಯಿಸೋ ಹಣದಲ್ಲಿ ಮಹಿಂದ್ರ ಮಹೀಂದ್ರ XUV500 ಕಾರು ಖರೀದಿಸಬಹುದು.