5 ಸಾವಿರಕ್ಕೆ ಬುಕ್ ಮಾಡಿ ನೂತನ BS6 ಬಜಾಜ್ ಪಲ್ಸರ್ 200 NS ಬೈಕ್!

ಬಜಾಜ್ ಪಲ್ಸರ್ 200 NS ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಬೈಕ್ ಬುಕಿಂಗ್ ಕೂಡ ಆರಂಭವಾಗಿದೆ. ಕೇವಲ 5000 ರೂಪಾಯಿಗೆ ಬೈಕ್ ಬುಕ್ ಮಾಡಿಕೊಳ್ಳಬಹುದು. ನೂತನ ಬೈಕ್ ವಿವರ ಇಲ್ಲಿದೆ. 

BS6 engine Bajaj Pulsar 200ns Bike launched India

ಮುಂಬೈ(ಫೆ.10): ಬಜಾಜ್ ಪಲ್ಸರ್ 200 NS ಬೈಕ್ ಎಂಜಿನ್ ಅಪ್‌ಗ್ರೇಡ್ ಆಗಿದೆ. BS6 ಎಂಜಿನ್‌ನೊಂದಿಗೆ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಬೈಕ್ ಬುಕಿಂಗ್ ಕೂಡ ಆರಂಭವಾಗಿದ್ದು, ಕೇವಲ 5,000 ರೂಪಾಯಿಗೆ ಬಜಾಜ್ ಪಲ್ಸರ್ 200 NS ಬೈಕ್ ಬುಕ್ ಮಾಡಿಕೊಳ್ಳುವ ಅವಕಾಶ ನೀಡಿದೆ.

ಇದನ್ನೂ ಓದಿ: 10 ಸಾವಿರಕ್ಕೆ ಬುಕ್ ಮಾಡಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ BS6 ಬೈಕ್!

ಬಜಾಜ್ ಪಲ್ಸರ್ 200 NS ಬೈಕ್ ಬೆಲೆ 1.24 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸರ್ 200 NS ಬೈಕ್ ಬೆಲೆಗಿಂತ 11,000 ರೂಪಾಯಿ ಹೆಚ್ಚಾಗಿದೆ. ನೂತನ ಬೈಕ್ 199 cc, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು,  24.2bhp ಪವರ್ ಹಾಗೂ 18.6Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: BS6 ಕೆಟಿಎಂ 250 ಡ್ಯೂಕ್ ಬೈಕ್ ಬಿಡುಗಡೆ; ಪ್ರಮುಖ 5 ಬದಲಾವಣೆ!

ಸದ್ಯ ಮಾರುಕಟ್ಟೆಲ್ಲಿರುವ BS4 ಎಂಜಿನ್ ಬೈಕ್ 23.2bhp ಪವರ್ ಹಾಗೂ 18.3Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ನೂತನ ಬೈಕ್ ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿದೆ. 

BS6 ಎಂಜಿನ್ ಹೊರತು ಪಡಿಸಿದರೆ ನೂತನ ಬಜಾಜ್ ಪಲ್ಸಾರ್ 200 NS ಬೈಕ್‌ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ನೂತನ ಬೈಕ್  TVS ಅಪಾಚೆ RTR 200 4V, ಯಮಹಾ FZ25 ಹಾಗೂ ಸುಜುಕಿ ಜಿಕ್ಸರ್ 250 ಗೆ ಪ್ರತಿಸ್ಪರ್ಧಿಯಾಗಿದೆ. 

Latest Videos
Follow Us:
Download App:
  • android
  • ios