10 ಸಾವಿರಕ್ಕೆ ಬುಕ್ ಮಾಡಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ BS6 ಬೈಕ್!
ರಾಯಲ್ ಎನ್‌ಫೀಲ್ಡ್ ಹಿಮಾನಲಯನ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. BS6 ಎಮಿಶನ್ ಎಂಜಿನ್ ಹೊಂದಿರುವ ನೂತನ ಬೈಕ್ ವೇರಿಯೆಂಟ್, ಕಲರ್, ಬೆಲೆ ಹಾಗೂ ಬುಕಿಂಗ್ ವಿವರ ಇಲ್ಲಿದೆ.
ಚೆನ್ನೈ(ಜ.17): ರಾಯಲ್ ಎನ್‌ಫೀಲ್ಡ್ ಈಗಾಗಲೇ ಕ್ಲಾಸಿಕ್ 350 ಬೈಕ್‌ನ್ನು BS6 ಎಂಜಿನ್ ಅಪ್‌ಗ್ರೇಡ್ ಮಾಡಿದೆ. ಇದರ ಬೆನ್ನಲ್ಲೇ ಆಫ್ ರೋಡ್ ಬೈಕ್ ಎಂದೇ ಗುರುತಿಸಿಕೊಂಡಿರುವ ಹಿಮಾಲಯನ್ BS6 ಎಂಜಿನ್ ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್ 10,000 ರೂಪಾಯಿ ನೀಡಿ ಬುಕ್ ಮಾಡಬಹುದು.
ಇದನ್ನೂ ಓದಿ: ಮಹಿಳೆಯರಿಗಾಗಿ ಬರುತ್ತಿದೆ ಕಡಿಮೆ ತೂಕದ ರಾಯಲ್ ಎನ್‌ಫೀಲ್ಡ್ ಬೈಕ್!
ನೂತನ ಹಿಮಾಲಯನ್ ಬೈಕ್ 3 ವೇರಿಯೆಂಟ್ ಹಾಗೂ 3 ಕಲರ್‌ಗಳಲ್ಲಿ ಲಭ್ಯವಿದೆ. ಹಿಮಾಲಯನ್ ಬೈಕ್ ವೇರಿಯೆಂಟ್ ಹಾಗೂ ಬೆಲೆ ವಿವರ ಇಲ್ಲಿದೆ.
ಹಿಮಾಲಯನ್ ಸ್ನೋ ವೈಟ್ = 1.86 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಹಿಮಾಲಯನ್ ಗ್ರಾನೈಟ್ ಬ್ಲಾಕ್ = 2.23 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಹಿಮಾಲಯನ್ ಸ್ಲೀಟ್ ಗ್ರೇ = 1.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಹಿಮಾಲಯನ್ ಡ್ಯುಯಲ್ ಟೋನ್ ಕಲರ್ = 1.91 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಇದನ್ನೂ ಓದಿ: BS6 ರಾಯಲ್ ಎನ್‌ಫೀಲ್ಡ್ ಬೈಕ್ ಬಿಡುಗಡೆ; ಬೆಲೆ ಏರಿಕೆ!
ಹಿಮಾಲಯನ್ ಎಲ್ಲಾ ವೇರಿಯೆಂಟ್ ಬೈಕ್‌ಗಳು ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. 15 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. 411cc, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್, SOHC ಎಂಜಿನ್ ಹೊಂದಿದೆ. 24.5 bhp ಪವರ್ ಹಾಗೂ 32 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.