ಮುಂಬೈ(ಮಾ.04) ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಶ್ರೀಮಂತ ನಟ. ವಿಶ್ವದ ಶ್ರೀಮಂತರ ನಟರಲ್ಲಿ ಕಿಂಗ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. ರೋಮ್ಯಾನ್ಸ್ ಕಿಂಗ್ ಶಾರುಖ್‌ಗೆ ಕಾರು ಕ್ರೇಜ್ ಹೆಚ್ಚೇ ಇದೆ. ಹೀಗಾಗಿ ಶಾರುಖ್ ಬಳಿ ರೋಲ್ಸ್ ರಾಯ್ಸ್ ಫಾಂಟಮ್, ಬುಗಾಟಿ ಸೇರಿದಂತೆ ಐಷಾರಾಮಿ ಕಾರುಗಳಿವೆ. ಆದರೆ ಶಾರುಖ್ ಬಳಸಿದ ಮೊದಲ ಕಾರು ಕಡಿಮೆ ಬೆಲೆ ಕಾರು. 

ಇದನ್ನೂ ಓದಿ: ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!

ಶಾರುಖ್ ಖಾನ್ ಮೊದಲ ಕಾರು ಬೇರೆ ಯಾವುದು ಅಲ್ಲ, ಅದು ಮಾರುತಿ ಸುಜುಕಿ ಒಮ್ಮಿ. ಈ ಕಾರನ್ನ ಶಾರುಖ್ ತಾಯಿ ಉಡುಗೊರೆಯಾಗಿ ನೀಡಿದ್ದರು. ಆದರೆ ಕಾರು ನೀಡಿದ ಕೆಲ ತಿಂಗಳ ಬಳಿಕ ಶಾರುಖ್ ತಾಯಿ ನಿಧನರಾದರು. ಹೀಗಾಗಿ ಕಾರಿನ ಕಂತು(EMI) ಪಾವತಿಸಿರಲಿಲ್ಲ. ಒಂದು ದಿನ ಬ್ಯಾಂಕ್ ಅಧಿಕಾರಿಗಳು ಕಾರನ್ನ ಜಪ್ತಿ ಮಾಡಿದ್ದರು.

ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?

ತಾಯಿ ಲೋನ್ ಮೂಲಕ ಕಾರು ಖರೀದಿಸಿದ್ದರು ಅನ್ನೋ ವಿಚಾರ ಶಾರುಖ್‌ಗೆ ತಿಳಿದಿರಲಿಲ್ಲ. ಶಾರುಖ್ ಖಾನ್ ರಾಜು ಬನ್‌ ಗಯಾ ಜಂಟ್ಲಮೆನ್ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಇದೇ ವೇಳೆ ಶೂಟಿಂಗ್ ಸ್ಥಳಕ್ಕೆ  ಬ್ಯಾಂಕ್ ಅಧಿಕಾರಿಗಳು ಆಗಮಿಸಿದರು. ಶಾರುಖ್ ಅಭಿಮಾನಿಗಳು ಆಟೋಗ್ರಾಫ್‌ಗಾಗಿ ಬಂದಿದ್ದಾರೆ ಎಂದುಕೊಂಡಿದ್ದರು. 

ಇದನ್ನೂ ಓದಿ: ಡ್ರೈವಿಂಗ್ ವೇಳೆ ಮೊಬೈಲ್ ಬಳಸುವವರಿಗೆ ವಿಶೇಷ ಪ್ರಕಟಣೆ!

ಬ್ಯಾಂಕ್ ಅಧಿಕಾರಿಗಳು ಕೂಡ ಶಾರುಖ್ ಬಳಿ ಅಟೋಗ್ರಾಫ್ ಪಡೆದು, ಫೋಟೋ ಕ್ಲಿಕ್ಕಿಸಿಕೊಂಡರು. ಬಳಿಕ ಕಾರಿನ ಕೀ ನೀಡಲು ಹೇಳಿದರು. ಕಾರಿನ  ಕಂತು ಕಟ್ಟದ ಕಾರಣ ಕಾರನ್ನು ಜಪ್ತಿ ಮಾಡುವುದಾಗಿ ಹೇಳಿ ಮಾರುತಿ ಸುಜುಕಿ ಒಮ್ಮಿ ಕಾರನ್ನ ವಶಕ್ಕೆ ಪಡೆದರು. ಇದನ್ನ ಸ್ವತಃ ಶಾರುಖ್ ಖಾನ್ ಬಹಿರಂಗ ಪಡಿಸಿದ್ದಾರೆ.