ಮುಂಬೈ(ಮಾ.09): ಅಮಿತಾಬ್ ಬಚ್ಚನ್ ದಶಕಗಳ ಹಿಂದೆ ಫೋರ್ಡ್ ಪ್ರಿಫಕ್ಟ್ ಕಾರು ಖರೀದಿಸಿದ್ದರು. ಇದು ಅಮಿತಾಬ್ ಖರೀದಿಸಿದ ಮೊದಲ ಫ್ಯಾಮಿಲಿ ಕಾರು. ಅಲಹಬಾದ್‌ನಲ್ಲಿದ್ದ ವೇಳೆ ಅಮಿತಾಬ್ ಬಚ್ಚನ್ ಈ ಕಾರು ಖರೀದಿಸಿದ್ದರು. ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್ ಗಟ್ಟಿಯಾಗಿ ನೆಲೆಯೂರುತ್ತಿದ್ದಂತೆ ಫೋರ್ಡ್ ಪ್ರೆಫೆಕ್ಟ್ ಕಾರು ಮಾರಾಟ ಮಾಡಿದ್ದರು. ಇದೀಗ ಮತ್ತೆ ಅಮಿತಾಬ್ ಮೊದಲ ಕಾರು ಕೈಸೇರಿದೆ.

ಇದನ್ನೂ ಓದಿ: ನಟ ಮೋಹನ್‌ಲಾಲ್ ಕೈಸೇರಿತು ಮೊದಲ ಟೊಯೊಟಾ ವೆಲ್‌ಫೈರ್ ಕಾರು!

ಗುಜುರಿಯಲ್ಲಿ ಬಿದ್ದಿದ್ದ ಅಮಿತಾಬ್ ಫೋರ್ಡ್ ಪ್ರಿಫೆಕ್ಟ್ ಕಾರನ್ನು ಗಮಿನಿಸಿದ ಬಚ್ಚನ್ ಗೆಳೆಯ ಕಾರಿಗೆ ಮರುಜೀವ ನೀಡಲು ಮುಂದಾಗಿದ್ದಾರೆ. ಸತತ ಪ್ರಯತ್ನಗಳ ಬಳಿಕ ಕಾರಿನ ಶೈಲಿಗೆ ಯಾವುದೇ ದಕ್ಕೆ ಬರದ ರೀತಿಯಲ್ಲಿ ಮರುಜೀವ ನೀಡಲಾಯಿತು. ಬಳಿಕ ಅಮಿತಾಬ್ ಬಚ್ಚನ್‌ಗೆ ಸರ್ಪ್ರೈಸ್ ನೀಡಿದ್ದಾರೆ. ತನ್ನ ಮೊದಲ ಕಾರನ್ನು ನೋಡಿದ ಅಮಿತಾಬ್ ಬಚ್ಚನ್ ಭಾವುಕರಾಗಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ನನ್ನ ಸಂತಸವನ್ನು ಹೇಳಲು ಪದಗಳು ಸಿಗುತ್ತಿಲ್ಲ ಎಂದಿದ್ದಾರೆ. ಗೆಳೆಯ ಹಾಗೂ ಆತನ ಕುಟುಂಬಕ್ಕೆ ಅಮಿತಾಬ್ ಬಚ್ಚನ್ ಧನ್ಯವಾದ ಅರ್ಪಿಸಿದ್ದಾರೆ.

 

ಫೋರ್ಡ್ ಪ್ರಿಫೆಕ್ಟ್ ಕಾರು ಬ್ರಿಟೀಷ್ ನಿರ್ಮಾಣದ ಕಾರಾಗಿದೆ. ಫೋರ್ಡ್ ಯುಕೆ ಈ ಕಾರನ್ನು 1938 ರಿಂದ 1960ರ ವರೆಗೆ ತಯಾರಿಸಿತ್ತು. ಈ ಕಾರು 1.2 ಲೀಟರ್ ಎಂಜಿನ್ ಹೊಂದಿದ್ದು, 3  ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ.