Asianet Suvarna News Asianet Suvarna News

ಹೊಚ್ಚ ಹೊಸ BMW G310 R ಮತ್ತು BMW 310 GS ಬೈಕ್ ಬಿಡುಗಡೆ!

ಸ್ಟೈಲೀಷ್ ಡಿಸೈನ್, ದಕ್ಷ ಎಂಜಿನ್ ಹೊಂದಿರುವ BMW G310 R ಮತ್ತು BMW 310 GS ಬೈಕ್ ಬಿಡುಗಡೆಯಾಗಿದೆ.  ಕೇವಲ 4500 ರೂಪಾಯಿ ಮಾಸಿಕ ಕಂತಿನಲ್ಲಿ ಹೊಚ್ಚ ಹೊಸ ಬೈಕ್ ನಿಮ್ಮದಾಗಿಸುವ ಅವಕಾಶವೂ ಇದೆ. ನೂತನ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿವೆ.
 

BMW G 310 R and BMW G 310 GS launched in a new avatar india ckm
Author
Bengaluru, First Published Oct 24, 2020, 3:18 PM IST

ಬೆಂಗಳೂರು(ಅ.24); BMW ಮೋಟಾರ್ರಾಡ್‍ಇಂಡಿಯಾ ಹೊಸ BMW G 310R  ಮತ್ತು BMW 310 GS ಭಾರತದಲ್ಲಿಇಂದು ಬಿಡುಗಡೆ ಮಾಡಿದೆ. ಹೊಸ BMW G 310  ಮತು BMW 310 GS ಬಿಡುಗಡೆ ಮಾಡಿದ ಮೊದಲ ದೇಶ ಭಾರತವಾಗಿದೆ. ಎರಡೂ ಮೋಟಾರ್ ಸೈಕಲ್ BMW ಮೋಟಾರ್ರಾಡ್‍ಇಂಡಿಯಾ ಡೀಲರ್‌ಶಿಪ್‌ನಲ್ಲಿ ಇಂದಿನಿಂದ ಲಭ್ಯವಿರುತ್ತವೆ.

ಭಾರತದಲ್ಲಿ ಫರ್ಸ್ಟ್ ಎವರ್ BMW 2 ಸೀರೀಸ್ ಗ್ರಾನ್ ಕೂಪೆ ಬಿಡುಗಡೆ!.

ಹೊಸ BMW G 310R ಮತ್ತು BMW 310 GS ಗಳನ್ನು ಜರ್ಮನಿಯ ಮ್ಯೂನಿಚ್‍ನಲಿ BMW ಮೋಟಾರ್ರಾಡ್ ಅಭಿವೃದ್ಧಿಪಡಿಸಿದೆ ಮತ್ತು ಸ್ಥಳೀಯವಾಗಿ ಭಾರತದ ಹೊಸೂರಿನಲ್ಲಿ BS-vi ಮಾನದಂಡಗಳ ಅನ್ವಯ ಸಹಕಾರ ಪಾಲುದಾರ TVS ಮೋಟಾರ್ ಕಂಪನಿ ಉತ್ಪಾದಿಸುತ್ತದೆ. 

BMW G 310 R and BMW G 310 GS launched in a new avatar india ckm

ಜಾಗತಿಕವಾಗಿ BMW ಮೋಟಾರ್ರಾಡ್‍ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಬ್-500cc ಸೆಗ್ಮೆಂಟ್‌ನಲ್ಲಿ  BMW G 310R  ಮತ್ತು BMW 310 GS ಗಳಿಗೆ ಒಂದುಅನನ್ಯ ಸ್ಥಾನವನ್ನು ಸೃಷ್ಟಿಸಿಕೊಂಡಿದೆ. ಸಾವಿರಾರು ರೈಡರ್‌ಗಳು ಮತ್ತು ಉತ್ಸಾಹಿಗಳಿಗೆ  BMW  G310  ಪ್ರತಿನಿತ್ಯದ ಜೀವನದ  ನಗರದ ಮೋಟಾರ್ ಸೈಕಲ್  ಮರು ವ್ಯಾಖ್ಯಾನಿಸಿದೆ.ಸಾಹಸ ಮತ್ತು ವಿನೋದ ನಿರೀಕ್ಷಿಸುವವರಿಗೆ BMW G 310 GS ಆಫ್-ಬೀಟ್‍ಟ್ರ್ಯಾಕ್ ತೆಗೆದುಕೊಳ್ಳಲು ಪರಿಪೂರ್ಣಕಾರಣ ಒದಗಿಸಿದೆ.ತಮ್ಮ ಹೊಸ ಅವತಾರಗಳಲ್ಲಿ ಎರಡೂ ಮೋಟಾರ್‍ಸೈಕಲ್‍ಗಳು ಆಕರ್ಷಕಡಿಸೈನ್ ಬದಲಾವಣೆಗಳು, ಹೊಸ ತಂತ್ರಜ್ಞಾನ ಮತ್ತು ಹೆಚ್ಚಿಸಲಾದರೈಡಿಂಗ್‍ಡೈನಮಿಕ್ಸ್ ಹೊಂದಿವೆ. ನಾವು ಎರಡೂ ಬೈಕ್‍ಗಳನ್ನು ಅತ್ಯಂತಆಕರ್ಷಕ ಬೆಲೆ,ಅಸಾಧಾರಣ EMI ಮತ್ತುಕಡಿಮೆ ಮಾಡಲಾದ ಮಾಲೀಕತ್ವದ ವೆಚ್ಚದಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು BMW ಗ್ರೂಪ್‍ಇಂಡಿಯಾದ ಪ್ರೆಸಿಡೆಂಟ್  ವಿಕ್ರಮ್ ಪಾವಾಹ್ ಹೇಳಿದರು.

ಭಾರತದಲ್ಲಿ BMW R18 ಕ್ರೂಸರ್ ಬೈಕ್ ಬಿಡುಗಡೆ!...

ಎಕ್ಸ್-ಶೋರೂಂ ಬೆಲೆಗಳು ಈ ಕೆಳಕಂಡಂತಿವೆ-
BMW G310R = 2,45,000 ರೂಪಾಯಿ
BMW 310GS= 2,85,000 ರೂಪಾಯಿ

BMW G 310 R and BMW G 310 GS launched in a new avatar india ckm

BMW G 310 R ಮತ್ತು BMW  310 GS ಬೈಕ್ BWM ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್‍ನಲ್ಲಿಆಕರ್ಷಕ ಹಣಕಾಸು ಯೋಜನೆಗಳೊಂದಿಗೆ ಎಲ್ಲವನ್ನೂ ಒಳಗೊಂಡ ಮಾಸಿಕ ಕಂತುಗಳು ಕ್ರಮವಾಗಿ  4,500 ರೂಪಾಯಿ ಮತು 5,500 ರೂಪಾಯಿಗಳಿಂದ ಆರಂಭವಾಗಲಿದೆ.

BMW ಮೋಟಾರ್ರಾಡ್ ಬೈಕ್‍ಗಳು ಸ್ಟಾಂಡರ್ಡ್ ವಾರೆಂಟಿ,`ಮೂರು ವರ್ಷಗಳ ಅನ್‍ಲಿಮಿಟೆಡ್ ಕಿಲೋಮೀಟರ್ಸ್  ಸೌಲಭ್ಯ ಸಿಗಲಿದೆ.. ವಾರೆಂಟಿಯನ್ನು ನಾಲ್ಕು ಮತ್ತುಐದನೇ ವರ್ಷಕ್ಕೆಹೆಚ್ಚುವರಿ ವೆಚ್ಚ 16,250 ರೂಪಾಯಿ ಪಾವತಿಸಿ ವಿಸ್ತರಿಸಿಕೊಳ್ಳಬಹುದು. ಮೊದಲ 500 ಗ್ರಾಹಕರು ವಿಶೇಷ ದರ  5,499 ಪಡೆಯುತ್ತಾರೆ. ರೋಡ್-ಸೈಡ್ ಅಸಿಸ್ಟೆನ್ಸ್, 24x7 365 ದಿನಗಳ ಪ್ಯಾಕೇಜ್ ಬ್ರೇಕ್‍ಡೌನ್ ಮತ್ತು ಎಳೆದುಕೊಂಡು ಹೋಗುವ ಸನ್ನಿವೇಶಗಳಲ್ಲಿ ಪ್ರಾಮಾಣಿಕ ಸೇವೆಗಳನ್ನು ಒದಗಿಸುತ್ತದೆ.

BMW G 310 R and BMW G 310 GS launched in a new avatar india ckm

 ಕಾರ್ಯಕ್ಷಮತೆ ಮತ್ತು ಅನುಕೂಲಕ್ಕೆ ಏನು ಬೇಕೋ ಅದನ್ನೇ ನಿಖರವಾಗಿ BMW ನೂತನ ಬೈಕ್ ನೀಡಲಿದೆ.  ಇದು ನಗರದಕಿರಿದಾದ ಬೀದಿಗಳಲ್ಲಿ ಚುರುಕಾಗಿ ಮತ್ತುಅನುಕೂಲಕರವಾಗಿ ಸಂಚರಿಸುವುದರ ಜೊತೆಗೆ ಹಳ್ಳಿಗಳ ರಸ್ತೆಗಳ ಮೇಲೂ ಸಂಚರಿಸಲುಅತ್ಯಂತ ಸೂಕ್ತವಾಗಿದೆ. ಹೊಸ BMW  310 GS ಈ ವರ್ಗದಅತ್ಯುನ್ನತ ಮಟ್ಟದ ವೈವಿಧ್ಯತೆಯನ್ನು ಹೊಂದಿದೆ.ಟ್ರಾಫಿಕ್‍ನಲ್ಲಿ ಚುರುಕು ಮತ್ತು ಕಠಿಣ ಪ್ರದೇಶದಲ್ಲಿಅತ್ಯಂತ ಸದೃಢವಾಗಿರುತ್ತದೆ.  

BMW G 310 R ಮತ್ತು BMW  310 GS ಬೈಕ್  ಈಗ ರಾತ್ರಿ ರೈಡಿಂಗ್ ಸುಲಭವಾಗಿಸಲು ಫುಲ್-LED ಹೆಡ್‍ಲೈಟ್ ಹೊಂದಿದೆ ಮತ್ತು LED ಫ್ಲಾಷಿಂಗ್‍ಟರ್ನ್‍ಇಂಡಿಕೇಟರ್ಸ್ ಮತ್ತು LED ಬ್ರೇಕ್‍ಲೈಟ್ ಟ್ರಾಫಿಕ್‍ನಲ್ಲಿ ಹೆಚ್ಚಿನ ಬೆಳಕಿನ ಪ್ರಮಾಣಕ್ಕೆ ಹೊಂದಿದೆ. ಇದುರಸ್ತೆಯ ಮೇಲೆ ಪ್ರಜ್ವಲ ಮತ್ತು ಸಮಾನ ಬೆಳಕನ್ನು ನೀಡುತ್ತದೆ. ಹೊಸ LED ಹೆಡ್‍ಲೈಟ್ ಸಂಪರ್ಕಗಳು ಏರಿಳಿತದ ರಸ್ತೆಗಳಲ್ಲಿ ಬೆಳಕಿನ ಯಾವುದೇ ಕಂಪನಗಳನ್ನು ನಿವಾರಿಸುತ್ತದೆ.

BMW G 310 R and BMW G 310 GS launched in a new avatar india ckm

ಕ್ಲಚ್‍ಲಿವರ್‍ಮತ್ತು ಹ್ಯಾಂಡಲ್‍ಬ್ರೇಕ್ ಲಿವರ್‍ಎರಡೂ ಈಗ ನಾಲ್ಕು ಹಂತಗಳಲ್ಲಿ ಹೊಂದಿಸಬಹುದು.ಇದುಸಣ್ಣಕೈಗಳಲ್ಲಿರುವಜನರಿಗೆದಕ್ಷತಾಶಾಸ್ತ್ರದ ಅನುಕೂಲಗಳನ್ನು ಒದಗಿಸುತ್ತದೆ.ಅತ್ಯುತ್ತಮ ವಿವರಗಳಾದ ಹೊಸ ಸ್ಟಾಂಡರ್ಡ್‍ಅಪ್‍ಸೈಡ್-ಡೌನ್ ಫೋರ್ಕ್,ಗುಣಮಟ್ಟದ ವಸ್ತುಗಳು, ಪೂರಕ ಫಿಟ್ಟಿಂಗ್‍ಗಳು ಮತ್ತುಅದ್ಭುತಕುಶಲಗಾರಿಕೆಎಲ್ಲವೂ ಈ ವರ್ಗದಲ್ಲಿಅತ್ಯುತ್ತಮವಾಗಿ ಪ್ರತಿಫಲಿಸುವ ಮೂಲಕ BMW G 310 ಮಾದರಿಗಳ ಪ್ರೀಮಿಯಂ ಆಕಾಂಕ್ಷೆಯನ್ನು ಸ್ಪಷ್ಟವಾಗಿಒತ್ತಿ ಹೇಳುತ್ತವೆ.

BMW G310 `ಸ್ಟೈಲ್ ಸ್ಪೋರ್ಟ್’ಕಲರ್ ಸ್ಕೀಂ ಹೊಂದಿದ್ದುಇದರಲ್ಲಿ ವಿಶೇಷ ಲೈಮ್‍ಸ್ಟೋನ್ ಮೆಟಾಲಿಕ್ ಬಣ್ಣವು ಕೆಂಪು ರಿಮ್ಸ್ ಮತ್ತು ಕೆಂಪು ಫ್ರೇಮ್‍ನೊಂದಿಗೆ ಸಂಯೋಜಿಸಿ ದಿಟ್ಟ, ಸ್ಪೋರ್ಟಿ ಹೊರನೋಟ ಸೃಷ್ಟಿಸುತ್ತದೆ.ಅದೇರೀತಿಯಲ್ಲಿ BMW 310 GS ವಿಶೇಷವಾದ`ಸ್ಟೈಲ್‍ರ್ಯಾಲೀ’ ಪರಿಣಾಮದಕಲರ್ ಸ್ಕೀಂ ಹೊಂದಿದೆ.ಇಲ್ಲಿ, ಕೆಂಪು ಫ್ರೇಮ್‍ಕ್ಯಾನೈಟ್ ಬ್ಲೂ ಮೆಟಾಲಿಕ್ ಬಣ್ಣದಲ್ಲಿ ಲಭ್ಯವಿದೆ.  BMW 310 GS ಮತ್ತೊಂದು ವಿಶೇಷ `40 ವರ್ಷ GS ಎಡಿಷನ್  ಸ್ಕೀಂ ಆಗಿದೆ. BMW ಇತಿಹಾಸದ ಪ್ರಖ್ಯಾತ ಐತಿಹಾಸಿಕ ಮಾದರಿ ಆಧರಿಸಿದೆ. ಈ ಆವೃತ್ತಿಯು ಮೂಲಭೂತ ಕಾಸ್ಮಿಕ್ ಬ್ಲಾಕ್ ಬಣ್ಣ ಹಾಗೂ ಟ್ಯಾಂಕ್ ಸೈಡ್ ಪ್ಯಾನೆಲ್ಸ್‍ನಲ್ಲಿಯೆಲ್ಲೋಗ್ರಾಫಿಕ್ಸ್‍ನೊಂದಿಗೆ ಬರುತ್ತದೆ.

ಎರಡೂ ಬೈಕ್‍ಗಳಲ್ಲಿ ಎಂಜಿನ್‍ಹೌಸಿಂಗ್ ಆಲ್ಟರ್ನೇಟರ್,ಕ್ಲಚ್ ಮತ್ತು ವಾಟರ್ ಪಂಪ್‍ಗಳಿಗೆ ಕವರ್ ಹೊಂದಿದ್ದು ಅವುಗಳನ್ನು ಹೊಸ ಟೈಟಾನಿಯಂಗ್ರೇ ಮೆಟಾಲಿಕ್ ಬಣ್ಣದಲ್ಲಿ ಸಿಗಲಿದೆ. BMW 310G ಫುಟ್‍ರೆಸ್ಟ್ ಪ್ಲೇಟ್ ಮತ್ತಷ್ಟು ವಿಸ್ತರಿಸಿದೆ ಮತ್ತು ಹ್ಯಾಂಡಲ್ ಆಧುನಿಕ ನೋಟವನ್ನು ಹೆಚ್ಚಿಸುತ್ತದೆ.

BMW G 310 R ಮತ್ತು BMW  310 GS ಹೊಸದಾಗಿಅಭಿವೃದ್ಧಿಪಡಿಸಲಾದ BS-VI ಎಂಜಿನ್ ಹೊಂದಿದೆ. ಇದು313cc ವಾಟರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಫೋರ್-ಸ್ಟ್ರೋಕ್‍ಎಂಜಿನ್ ಹೊಂದಿದೆ.   34hp ಪವರ್ ಔಟ್‍ಪುಟ್ ಮತ್ತು 28 nm ಗರಿಷ್ಠ ಟಾರ್ಕ್‍ನೊಂದಿಗೆ ಎಂಜಿನ್‍ಡೈನಮಿಕ್‍ರೈಡಿಂಗ್ ಪ್ಲೆಷರ್‌ಗೆ ಸೂಕ್ತ ಪಾಲುದಾರನಾಗಿದೆ. ಎಂಜಿನ್‍ನಗಮನಾರ್ಹ ವಿಶೇಷತೆಯೆಂದರೆ ಓಪನ್-ಡೆಕ್‍ಡಿಸೈನ್‍ನ ಹಿಂಬದಿಗೆ ಬಾಗಿದ ಸಿಲಿಂಡರ್, ಈ ಸಿಲಿಂಡರ್ ಹೆಡ್180ಡಿಗ್ರಿಗಳು ತಿರುಗಿದ್ದುಇದುಇಂಟೇಕ್‍ಟ್ರಾಕ್ಟ್‍ಅನ್ನು ಪ್ರಯಾಣದ ದಿಕ್ಕಿನಿಂದ ನೋಡಿದರೆ ಮುಂಬದಿಗೆ ಬರುವಂತೆ ಮಾಡಿದೆ.

ಹೊಸದಾಗಿ ಪರಿಚಯಿಸಲಾದ`ರೈಡ್ ಬೈ ವೈರ್’ ವ್ಯವಸ್ಥೆಯುರೈಡರ್‍ನ ಆದೇಶಗಳನ್ನು ನೇರವಾಗಿ ಸೆನ್ಸರ್‍ನಿಂದಎಂಜಿನ್‍ಕಂಟ್ರೋಲ್ ಸಿಸ್ಟಂನ ಟ್ವಿಸ್ಟ್‍ಗ್ರಿಪ್‍ಗೆ ವರ್ಗಾಯಿಸುತ್ತದೆ ಇದರಿಂದ ಮತ್ತಷ್ಟು ಉತ್ತಮ ನಿಯಂತ್ರಣ ಮತ್ತು ಸುಧಾರಿತ ಥ್ರಾಟಲ್‍ರೆಸ್ಪಾನ್ಸ್  ನೀಡುತ್ತದೆ. ಎಲೆಕ್ಟ್ರೊಮೊಟಿವ್‍ಥ್ರಾಟಲ್‍ಕಂಟ್ರೋಲರ್‍ಅದಕ್ಕೆಕಾರಣವಾಗಿದೆ,ಆಟೊಮ್ಯಾಟಿಕ್‍ಐಡ್ಲ್ ಸ್ಪೀಡ್ ಪ್ರಾರಂಭವಾದಾಗ ಹೆಚ್ಚಾಗುತ್ತದೆಅಲ್ಲದೆಎಂಜಿನ್‍ನ ಸಂಭವನೀಯ ಸ್ಥಗಿತಗೊಳ್ಳುವುದನ್ನು ನಿಯಂತ್ರಿಸುತ್ತದೆ.

Follow Us:
Download App:
  • android
  • ios