ಸೆ.19ರಂದು ಭಾರತದಲ್ಲಿ BMW R18 ಕ್ರೂಸರ್ ಬೈಕ್ ಬಿಡುಗಡೆ!

 ಕ್ರೂಸರ್‌ ಬೈಕ್‌ಗಳ ಪೈಕಿ ಅತ್ಯಂತ ಆಕರ್ಷಕ, ಹೆಚ್ಚು ಸ್ಟೈಲೀಶ್ ಜೊತೆಗೆ ಅಪರಿಮಿತ ಫೀಚರ್ಸ್ ಹೊಂದಿರುವ BMW R18 ಕ್ರೂಸರ್ ಭಾರತದಲ್ಲಿ ಇದೇ ಸೆಪ್ಟೆಂಬರ್ 19 ರಂದು ಬಿಡುಗಡೆಯಾಗುತ್ತಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

BMW R 18 retro cruiser motorcycle will be launched in India soon

ನವದೆಹಲಿ(ಸೆ.12): ಆಧುನಿಕ ತಂತ್ರಜ್ಞಾನ, ರೆಟ್ರೋ ಹಾಗೂ ಕ್ಲಾಸಿಕ್ ಸ್ಟೈಲ್ ಮೂಲಕ ಹೊಚ್ಚ ಹೊಸ BMW R18 ಕ್ರೂಸರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. 2020ರ ಎಪ್ರಿಲ್ ತಿಂಗಳಲ್ಲೇ ನೂತನ ಬೈಕ್ BMW ಅಧೀಕೃತ ವೆಬ್‌ಸೈಟ್‌ನಲ್ಲಿ ಸೇರಿಕೊಂಡಿತ್ತು. ಆದರೆ ಕೊರೋನಾ ವೈರಸ್, ಲಾಕ್‌ಡೌನ್ ಸೇರಿದಂತೆ ಹಲವು ಕಾರಣದಿಂದ ಬಿಡುಗಡೆ ವಿಳಂಬವಾಗಿತ್ತು.

 ಜು.16ಕ್ಕೆ ಭಾರತದಲ್ಲಿ ಬಿಡುಗಡೆಯಾಗುತ್ತಿದೆ BMW S 1000 XR ಬೈಕ್ !

ಇದೇ ಸೆಪ್ಟೆಂಬರ್ 19 ರಂದು ಭಾರತದಲ್ಲಿ BMW R18 ಕ್ರೂಸರ್ ಬೈಕ್ ಬಿಡುಗಡೆಯಾಗುತ್ತಿದೆ. ಆಕರ್ಷಕ ಫ್ಯುಯೆಲ್ ಟ್ಯಾಂಕ್, ಲಾಂಗ್ ವೀಲ್ಹ್‌ಬೇಸ್, ರೌಂಡ್ ಹೆಡ್‌ಲ್ಯಾಂಪ್ಸ್ ಜೊತೆ ಕ್ರೋಮ್ ಫಿನೀಶ್ ಸೇರಿದಂತೆ ಹಲವು ಫೀಚರ್ಸ್ ಹಾಗೂ ಡಿಸೈನ್ ಕಣ್ಣು ಕುಕ್ಕುವಂತಿದೆ.  ಬೈಕ್ ವಿನ್ಯಾಸ ಅತ್ಯಂತ ಆಕರ್ಷವಾಗಿದೆ. ಇದು 1930ರಲ್ಲಿ ಬಿಡುಗಡೆಯಾದ BMW R5 ಬೈಕ್ ವಿನ್ಯಾಸದಿಂದ ಪ್ರೇರಿತವಾಗಿ ನೂತನ ಬೈಕ್ ನಿರ್ಮಿಸಲಾಗಿದೆ.

 

📽️ https://t.co/2kewsBrhVy

👆 Click the link and join us as we dissect every exciting feature about the new BMW R 18 #InTheSpotlight, streaming on YouTube! #MakeLifeARide #BMWR18 #SoulFuel #BMWMotorrad pic.twitter.com/lY6PgEFDTO

— BMWMotorrad (@BMWMotorrad) September 4, 2020

ಎಕ್ಸಾಸ್ಟ್ , LED ಹೆಡ್‌‌ಲ್ಯಾಂಪ್ಸ್, ವೈಯರ್ ಸ್ಪೋಕ್ ವೀಲ್ಸ್ ಹೊಂದಿದೆ. 1,802 cc, ಬಾಕ್ಸನ್ ಟ್ವಿನ್ ಎಂಜಿನ್, ಏರ್ ಕೂಲ್ಡ್ ಹಾಗೂ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು,  91 bhp ಪವರ್ ಹಾಗೂ 157 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. 

ರೈನ್, ರೋಲ್ ಹಾಗೂ ರಾಕ್ ಎಂಬು ರೈಡಿಂಗ್ ಮೊಡ್‌ಗಳಿವೆ. ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್ ಹೊಂದಿದೆ. BMW R18 ಕ್ರೂಸರ್ ಬೈಕ್ ಬೆಲೆ 18 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. 

Latest Videos
Follow Us:
Download App:
  • android
  • ios