ಆ್ಯಂಬುಲೆನ್ಸ್ ಬಂದಾಗ ಪಾಲಿಸಬೇಕು ಹಲವು ನಿಯಮ - ಉಲ್ಲಂಘಿಸಿದರೆ ಕಠಿಣ ಶಿಕ್ಷೆ!

ಆ್ಯಂಬುಲೆನ್ಸ್ ಮುಂದೆ ದಾರಿ ಮಾಡಿಕೊಡುವವರಂತೆ ಶೋ ಆಫ್ ಮಾಡಿದ ಬೈಕ್ ಸವಾರನಿಗೆ ದಂಡ ವಿಧಿಸಲಾಗಿದೆ. ಇಷ್ಟೇ ಅಲ್ಲ ಕೇಸ್ ಕೂಡ ದಾಖಲಾಗಿದೆ. ಬೈಕ್ ಸವಾರನ ಶೋ ಆಫ್ ಹಾಗೂ ಆ್ಯಂಬುಲೆನ್ಸ್ ಬಂದಾಗ ಯಾವ ನಿಯಮಗಳನ್ನ ಪಾಲಿಸಬೇಕು ಅನ್ನೋ ಮಾಹಿತಿ ಇಲ್ಲಿದೆ.
 

Bike rider Show Off in front of Ambulance busted and fined by Kerala police

ಎರ್ನಾಕುಲಂ(ಫೆ.23): ಆ್ಯಂಬುಲೆನ್ಸ್ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ ದಾರಿ ಬಿಡದಿರುವುದು ಅಪರಾಧ. ಇದೇ ರೀತಿ ಆ್ಯಂಬುಲೆನ್ಸ್‌ಗೆ ದಾರಿ ಬಿಡದ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಬರೋಬ್ಬರಿ 6000 ರೂಪಾಯಿ ದಂಡ ವಿಧಿಸಿದ್ದಾರೆ.

ಕೇರಳದ ಕಾಯಂಕುಳಂ ನಿವಾಸಿ ಆದರ್ಶ್ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್ ಮೂಲಕ ಎರ್ನಾಕುಲಂಗೆ ತೆರಳುತ್ತಿದ್ದ. ಇದೇ ವೇಳೆ ಈ ರಸ್ತೆಯಲ್ಲಿ ಆ್ಯಂಬುಲೆನ್ಸ್ ಕೂಡ ಆಗಮಿಸಿದೆ. ತುರ್ತು ಸೇವೆಯಲ್ಲಿದ್ದ ಆ್ಯಂಬುಲೆನ್ಸ್‌ಗೆ ದಾರಿ ಮಾಡಿ ಕೊಡೋ ನೆಪದಲ್ಲಿ ಆದರ್ಶ್, ಆ್ಯಂಬುಲೆನ್ಸ್ ವಾಹನದ ಮುಂದೆ ಸಾಗಿದ್ದಾನೆ. ಇದರಿಂದ ಶರವೇಗದಲ್ಲಿ ಸಾಗೋ ಆ್ಯಂಬುಲೆನ್ಸ್‌ಗೆ ಸಮಸ್ಯೆಯಾಗಿದೆ.

ಇದನ್ನೂ ಓದಿ: ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?

ಮುಂದೆ ಹೋಗುತ್ತಿದ್ದ ರಾಯಲ್ ಎನ್‌ಫೀಲ್ಡ್ ಬೈಕ್‍‌ನಿಂದ ಆ್ಯಂಬುಲೆನ್ಸ್ ಓವರ್ ಟೇಕ್ ಮಾಡಿ ಮುಂದೆ ಹೋಗಲು ಸಾಧ್ಯವಾಗಿಲ್ಲ. ಇದರಿಂದ ತುರ್ತು ಸೇವೆ ಕರ್ತ್ಯವ್ಯಕ್ಕೆ ಅಡ್ಡಿಯಾಗಿದೆ. ಇದನ್ನ ಆ್ಯಂಬುಲೆನ್ಸ್ ಕೋ ಡ್ರೈವರ್ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೇರಳ ಪೊಲೀಸರು ರಾಯಲ್ ಎನ್‌ಫೀಲ್ಡ್ ನಂಬರ್ ನೋಟ್ ಮಾಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಆದರ್ಶ್‌ಗೆ 6000 ರೂಪಾಯಿ ದಂಡ ವಿಧಿಸಿದ್ದಾರೆ.

;

ಆ್ಯಂಬುಲೆನ್ಸ್ ಬಂದಾಗ ಏನು ಮಾಡಬೇಕು- ನಿಯಮವೇನು?
ಆ್ಯಂಬುಲೆನ್ಸ್ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ ಪಾಲಿಸಬೇಕಾದ ಹಲವು ನಿಯಮಗಳಿವೆ. ಈ ನಿಯಮಗಳನ್ನ ಪಾಲಿಸದಿದ್ದರೆ ಪ್ರಕರಣ ದಾಖಲಾಗುತ್ತೆ. ಇಷ್ಟೇ ಅಲ್ಲ ಭಾರಿ ದಂಡ ತೆರೆಬೇಕಾಗುತ್ತೆ.  

ಇದನ್ನೂ ಓದಿ: ಮಹಿಳೆಯ ಟೆಸ್ಟ್ ಡ್ರೈವ್‌ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!

ಆ್ಯಂಬುಲೆನ್ಸ್‌ಗೆ ದಾರಿ ಮಾಡಕೊಡದಿರುವುದು, ಆ್ಯಂಬುಲೆನ್ಸ್  ಮುಂದೆ ಎಸ್ಕಾಟ್ ರೀತಿ(ದಾರಿ ಮಾಡಿ ಕೊಡೋ ರೀತಿ) ಅಥವಾ ಸಹಾಯ ಮಾಡುವವರಂತೆ ಹೋಗುವುದು ಅಪರಾಧ. ಇದು ತುರ್ತು ಸೇವೆಗೆ ಅಡ್ಡಿ ಮಾಡಿದಂತೆ. 

ಆ್ಯಂಬುಲೆನ್ಸ್ ವಾಹವನ್ನು ಮುಂದೆ ಬಿಟ್ಟು ಅದರ ಹಿಂಭಾಗದಲ್ಲಿ ಅಷ್ಟೇ ವೇಗವಾಗಿ ಹೋಗುವುದು ಕೂಡ ಅಪರಾಧ. ಭಾರತದಲ್ಲಿ ಈ ಖಯಾಲಿ ಹೆಚ್ಚು. ಸಂಬಂಧಿಕರಂತೆ ತುರ್ತು ಸೇವೆ ವಾಹನದ ಹಿಂಬಾಗದಲ್ಲಿ ಚಲಿಸುವವರ ಸಂಖ್ಯೆ ಹೆಚ್ಚು.  ಆ್ಯಂಬುಲೆನ್ಸ್ ಅತೀ ವೇಗವಾಗಿ ಚಲಿಸುತ್ತಿರುತ್ತದೆ. ತಕ್ಷಣವೇ ಬ್ರೇಕ್ ಹಾಕುವ ಅಥವಾ ಪಥ ಬದಲಾಯಿಸುವ ಸಾಧ್ಯತೆ ಹೆಚ್ಚು. ಇದರಿಂದ ಹಿಂಬದಿಯಲ್ಲಿರುವ ವಾಹನಗಳು ಆ್ಯಂಬುಲೆನ್ಸ್‌ಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ. ಇದರಿಂದ ತುರ್ತು ಸೇವೆಗೆ ಅಡ್ಡಿಯಾಗಲಿದೆ. ಇದು ಕೂಡ ಅಪರಾಧವಾಗಿದೆ. 

ಇದನ್ನೂ ಓದಿ: ಪಾಳು ಬಿದ್ದಿದ್ದ ಭಾರತದ ಮೊಟ್ಟ ಮೊದಲ ಮಾರುತಿ ಕಾರಿಗೆ ಮರು ಜೀವ!

ರಾಂಗ್ ಸೈಡ್ ಮೂಲಕ ಆ್ಯಂಬುಲೆನ್ಸ್ ಆಗಮಿಸುತ್ತಿದ್ದರೆ, ದಾರಿ ಮಾಡಿಕೊಡಬೇಕು. ಇಂತಹ ಸಂದರ್ಭದಲ್ಲಿ ತುರ್ತು ಸೇವೆಗೆ ಅಡ್ಡಿಪಡಿಸುವುದು ಅಪರಾಧ. ಹಿಂಬದಿಯಿಂದ ಆ್ಯಂಬುಲೆನ್ಸ್ ಸೈರನ್ ಕೇಳಿಸಿದಾಗ ನಿಮ್ಮ ಎಡಭಾಗಕ್ಕೆ ಚಲಿಸಿ. ಈ ಮೂಲಕ ಆ್ಯಂಬುಲೆನ್ಸ್‌ಗೆ ದಾರಿಯ ಬಲಭಾಗದಲ್ಲಿ ದಾರಿ ಮಾಡಿಕೊಡಬೇಕು. 

Latest Videos
Follow Us:
Download App:
  • android
  • ios