ನವದೆಹಲಿ(ಜು.20): ಕೊರೋನಾ ವೈರಸ್ ಹೊಡೆತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಭಾರತೀಯ ಆಟೋಮೊಬೈಲ್ ಕಂಪನಿಗಳು ಇದೀಗ ಒಂದರ ಮೇಲೊಂದರಂತೆ ವಾಹನ ಬಿಡುಗಡೆ ಮಾಡುತ್ತಿದೆ. ಇದೀಗ BGauss ಸ್ಟಾರ್ಟ್ ಅಪ್ ಕಂಪನಿಯ 2 ವೇರಿಯೆಂಟ್ ಮಾರಾಟ ಆರಂಭಗೊಂಡಿದೆ. A2  ಸ್ಕೂಟರ್  ಬೆಲೆ 52,499 ರೂಪಾಯಿ ಹಾಗೂ B8 ಸ್ಕೂಟರ್ ಬೆಲೆ  62,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.

ಮೇಡ್ ಇನ್ ಇಂಡಿಯಾ ಜೆಮೊಪೈ ಮಿಸೋ ಎಲೆಕ್ಟಿಕ್ ಸ್ಕೂಟರ್ ಬಿಡುಗಡೆ!.

A2 ಸ್ಕೂಟರ್‌ನಲ್ಲಿ 2 ವೇರಿಯೆಂಟ್ ಹಾಗೂ B8 ಸ್ಕೂಟರ್‌ನಲ್ಲಿ 3 ವೇರಿಯೆಂಟ್ ಲಭ್ಯವಿದೆ.  5 ವೇರಿಯೆಂಟ್ ಸ್ಕೂಟರ್ ಬೆಲೆ ಇಲ್ಲಿದೆ.

A2 Lead Acid    52,499 ರೂಪಾಯಿ 
A2 Lithium-Ion    67,999 ರೂಪಾಯಿ 

B8 Lead Acid    62,999 ರೂಪಾಯಿ 
B8 Lithium-Ion    82,999 ರೂಪಾಯಿ 
B8 LI Technology 88,999 ರೂಪಾಯಿ 

ವಿದ್ಯಾರ್ಥಿ ಆವಿಷ್ಕರಿಸಿದ ನೂತನ ಎಲೆಕ್ಟ್ರಿಕ್ ಬೈಕ್‌ಗೆ ಭಾರಿ ಬೇಡಿಕೆ!

ಬೇಸ್ ಮಾಡೆಲ್ A2 ಸ್ಕೂಟರ್ ಸಂಪೂರ್ಣ ಚಾರ್ಜ್‌ಗೆ 92 ಕಿ.ಮೀ ಮೈಲೇಜ್ ನೀಡಲಿದೆ ಈ ಸ್ಕೂಟರ್ ಗರಿಷ್ಠ ವೇಗ 21 ಕಿ.ಮೀ ಪ್ರತಿ ಗಂಟೆಗೆ. ಲಿಥಿಯಂ ಐಯಾನ್ ಬ್ಯಾಟರಿ 2 ಗಂಟೆ 15 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಆದರೆ ಲೀಡ್ ಆ್ಯಸಿಡ್ ಬ್ಯಾಟರಿ 7 ರಿಂದ 8 ಗಂಟೆ ಸಂಪೂರ್ಣ ಚಾರ್ಜ್‌ಗೆ ತೆಗೆದುಕೊಳ್ಳುತ್ತದೆ.