Asianet Suvarna News Asianet Suvarna News

ರೂಲ್ಸ್ ಕೇಳಿದ್ದಕ್ಕೆ ಪರಚಮ್ಮ ಆದ ಟ್ರಾಫಿಕ್ ಪೊಲೀಸ್ ಗಂಗಮ್ಮ!

ಮೋಟಾರು ವಾಹನ ತಿದ್ದುಪಡಿಯಾಗಿದೆ. ಆದರೆ ನೂತನ ನಿಯಮ ಸೆಪ್ಟೆಂಬರ್ 1 ರಿಂದ ಜಾರಿಯಾಗಲಿದೆ. ಆದರೆ ಕೆಲ ಪೊಲೀಸರು ಈಗಿನಿಂದಲೇ ದಂಡ ವಸೂಲಿಗೆ ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಹಲ್ಲೆ ಮಾಡಿ ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉತ್ತರಹಳ್ಳಿಯಲ್ಲಿ ನಡೆದ ಈ ಘಟನೆ ವಿವರ ಇಲ್ಲಿದೆ.

Bengaluru Traffic Police Assaults Woman Motorist
Author
Bengaluru, First Published Aug 22, 2019, 6:42 PM IST

ಬೆಂಗಳೂರು(ಆ.22): ಹೊಸ ನಿಯಮ ಇನ್ನೂ ಜಾರಿಯಾಗಿಲ್ಲ, ಆದರೆ ಕೆಲ ಟ್ರಾಫಿಕ್ ಪೊಲೀಸರು ಮಾತ್ರ ಸಿಕ್ಕಿದ್ದೇ ಚಾನ್ಸು ಅಂದುಕೊಂಡು ಡಬಲ್ ದಂಡ ವಸೂಲಿಗೆ ಮುಂದಾಗಿದ್ದಾರೆ. ನೂತನ ನಿಯಮ ಜಾರಿ ಕುರಿತು ಹಲವರಿಗೆ ಮಾಹಿತಿ ಇಲ್ಲ, ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.  ಇದನ್ನು ಪ್ರಶ್ನಿಸಲು ಹೋದ ಮಹಿಳೆ ಮೇಲೆ ಹಲ್ಲೆ ಮಾಡಿದ ಘಟನೆ ನಗರ ಉತ್ತರಹಳ್ಳಿಯಲ್ಲಿ ನಡೆದಿದೆ. 

ಇದನ್ನೂ ಓದಿ: ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ- ಫೈನ್ ಮೊತ್ತ ಡಬಲ್!

ಉತ್ತರಹಳ್ಳಿಯ ಶಾಂತಿಸಾಗರ ಹೋಟೆಲ್ ಬಳಿ ದೇವಿಕಾ ಅವರ ಗೆಳತಿಯ ಬೈಕ್ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗಿತ್ತು. ತಕ್ಷಣವೇ ಹಾಜರಾದ ಪೊಲೀಸರು ಕೇಂದ್ರ ಸರ್ಕಾರದ ನೂತನ ದಂಡ ಹಾಕಲು ಮುಂದಾಗಿದ್ದಾರೆ. ಆದರೆ ದಂಡದ ಕುರಿತು ಅರಿವಿದ್ದ ದೇವಿಕಾ ಪೊಲೀಸರನ್ನು ಪ್ರಶ್ನಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಟ್ರಾಫಿಕ್ ಮಹಿಳಾ ಪೊಲೀಸ್ ಹಾಗೂ ಮತ್ತೊರ್ವ ಟ್ರಾಫಿಕ್ ಪೊಲೀಸ್ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

"

ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘನೆಗೆ ಸೆ.1ರಿಂದ ಭಾರಿ ದಂಡದ ಬರೆ

ಕೇಂದ್ರ ಸರ್ಕಾರದ ಮಹತ್ವಾಂಕ್ಷಿಯ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಸೆಪ್ಬೆಂಬರ್ 1 ರಿಂದ ದೇಶದಲ್ಲಿ ಜಾರಿಯಾಗಲಿದೆ. ನೂತನ ನಿಯಮದ ಪ್ರಕಾರ ದಂಡ ಮೊತ್ತ 10 ಪಟ್ಟು ಹೆಚ್ಚಾಗಿದೆ. 100 ರೂಪಾಯಿ ಇದ್ದ ರಸ್ತೆ ನಿಯಮ ಉಲ್ಲಂಘನೆ 1000 ರೂಪಾಯಿ ಆಗಲಿದೆ. ಆದರೆ ಸದ್ಯ ಹಳೇ ನಿಯಮ ಚಾಲ್ತಿಯಲ್ಲಿದೆ. ನೋ ಪಾರ್ಕಿಂಗ್  ವಾಹನಕ್ಕೆ ಸದ್ಯದ ನಿಯಮದ ಪ್ರಕಾರ 100 ರೂಪಾಯಿ ದಂಡ. ಆದರೆ ಪೊಲೀಸರು 1000 ರೂಪಾಯಿ ದಂಡಕ್ಕೆ ಮುಂದಾಗಿದ್ದಾರೆ. ಇನ್ನೂ ನಿಯಮವೇ ಜಾರಿಯಾಗಿಲ್ಲ, ಈಗಲೇ ಹೆಚ್ಚುವರಿ ದಂಡ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಜಾಗೃತಿಗಾಗಿ KGF ಮೊರೆ ಹೋದ ಪೊಲೀಸರು!

ಇದರಿಂದ ಆಕ್ರೋಶಕೊಂಡ ಮಹಿಳಾ ಪೊಲೀಸ್ ಗಂಗಮ್ಮಾ ದೇವಿಕಾ ಗೆಳತಿ  ಮೇಲೆ ಹಲ್ಲೆ ಮಾಡಿದ್ದಾರೆ. ದೇವಿಕಾ ಗೆಳತಿ ಮೇಲೆ ಪರಚಿ ಹಲ್ಲೆ ಮಾಡಲಾಗಿದೆ ಎಂದು ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ. ಮಹಿಳಾ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. 

ಕೇಂದ್ರ ಸರ್ಕಾರದ ಮೋಟಾರು ವಾಹನ ತಿದ್ದು ಪಡಿ ನಿಯಮ ಸೆಪ್ಟೆಂಬರ್ 1 ರಿಂದ ಜಾರಿಯಾಗಲಿದೆ. ರಸ್ತೆ ನಿಯಮ ಪಾಲನೆಗೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೂತನ ನಿಯಮ ಹಾಗೂ ದಂಡದ ಮೊತ್ತ ಇಲ್ಲಿದೆ. 

ನಿಯಮ    ಹಳೇ ಫೈನ್ನೂತನ ಫೈನ್
ಲೈಸೆನ್ಸ್ ಇಲ್ಲದ ವಾಹನ ಚಲಾವಣೆ500 ರೂ    5,000 ರೂ
ಮೊಬೈಲ್ ಫೋನ್ ಬಳಕೆ1,000 ರೂ    5,000 ರೂ
ಡ್ರಂಕ್ & ಡ್ರೈವ್2,000 ರೂ10,000 ರೂ
RASH ರ್ಡೈವಿಂಗ್1,000 ರೂ    5,000 ರೂ
ನೋ ಪಾರ್ಕಿಂಗ್100 ರೂ1,00 ರೂ
DL ಇಲ್ಲದೆ ಚಾಲನೆ500 ರೂ5,000 ರೂ
ಅತೀ ವೇಗದ ಚಾಲನೆ100 ರೂ1,000 ರೂ
ಸೀಟ್ ಬೆಲ್ಟ್ ಇಲ್ಲದಿದ್ದರೆ100 ರೂ1,000 ರೂ
ಹೆಲ್ಮೆಟ್ ಇಲ್ಲದೆ ರೈಡ್100 ರೂ1,000 ರೂ
ವಿಮೆ ಇಲ್ಲದೆ ಚಾಲನೆ500 ರೂ1,000 ರೂ
ಸಿಗ್ನಲ್ ಜಂಪ್, ಒನ್ ವೇ ನಿಯಮ ಉಲ್ಲಂಘನೆ100 ರೂ 1,000 ರೂ

 

Follow Us:
Download App:
  • android
  • ios