ಬೆಂಗಳೂರು(ಆ.16): ಎಲೆಕ್ಟ್ರಿಕ್ ವಾಹನ ಉತ್ಪದಾನೆಯಲ್ಲಿ ಬೆಂಗಳೂರು ವಿಶ್ವದ ಗಮನಸೆಳೆಯುತ್ತಿದೆ. ಈಗಾಗಲೆ ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಕರ್ನಾಟಕ, ತಮಿಳುನಾಡಿನಲ್ಲಿ ದಾಖಲೆ ಬರೆಯುತ್ತಿದೆ. ಎದರ್ ಬಳಿಕ ಇದೀಗ ಮತ್ತೊಂದು ಬೆಂಗಳೂರಿನ ಎಲೆಕ್ಟ್ರಿಕ್ ಕಂಪನಿ ಎಂಫ್ಲಕ್ಸ್ ಮೋಟಾರ್ಸ್ ಸ್ಪೂರ್ಟ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. 

ಇದನ್ನೂ ಓದಿ: ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ; ಇಲ್ಲಿದೆ ನೂತನ ದರ ಪಟ್ಟಿ!

2018ರ ಆಟೋ ಎಕ್ಸ್ಪೋದಲ್ಲಿ ಎಂಫ್ಲಕ್ಸ್ ONE ಬೈಕ್ ಅನಾವರಣ ಮಾಡಿತ್ತು. ಇದೀಗ ಎಂಫ್ಲಕ್ಸ್ TWO ಬೈಕ್ ಅನಾವರಣ ಮಾಡಲು ತಯಾರಿ ಮಾಡಿದೆ. ಈಗಾಗಲೇ ಎಂಫ್ಲಕ್ಸ್ TWO ಬೈಕ್ ಟೀಸರ್ ಬಿಡುಗಡೆಯಾಗಿದೆ. ಎಂಫ್ಲಕ್ಸ್ TWO ಬೈಕ್ ಗರಿಷ್ಠ ವೇಗ 160 ಕಿ.ಮಿ ಪ್ರತಿ ಗಂಟೆಗೆ. ಇಷ್ಟೇ ಅಲ್ಲ ಒಂದು ಬಾರಿ ಚಾರ್ಜ್ ಮಾಡಿದರೆ 160 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ.

ಇದನ್ನೂ ಓದಿ:ಟೆಕೋ ಎಲೆಕ್ಟ್ರಾ ಸ್ಕೂಟರ್ ಬಿಡುಗಡೆ- ಬೆಲೆ 43 ಸಾವಿರ ರೂ!

ಎಂಫ್ಲಕ್ಸ್ TWO ಬೈಕ್ ಬೆಲೆ ಬಹಿರಂಗವಾಗಿಲ್ಲ. ಆದರೆ ಎಂಫ್ಲಕ್ಸ್ ONE ಎಲೆಕ್ಟ್ರಿಕ್ ಬೈಕ್ ಬೆಲೆ ಸರಿಸುಮಾರು 6 ಲಕ್ಷ ರೂಪಾಯಿ. ಇನ್ನೂ ಎಂಫ್ಲಕ್ಸ್ TWO ಬೈಕ್ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ. ಎಂಫ್ಲಕ್ಸ್ ONE ಬೈಕ್ 2020ರಲ್ಲಿ ಬಿಡುಗಡೆಯಾಗಲಿದೆ. ಇನ್ನು ಎಂಫ್ಲಕ್ಸ್ TWO ಹಾಗೂ ಎಂಫ್ಲಕ್ಸ್ TWO + ಬೈಕ್ 2021ರಲ್ಲಿ ಬಿಡುಗಡೆಯಾಗಲಿದೆ.