ಪುಣೆ(ಜು.21): ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಬಜೆಟ್‌ನಲ್ಲೂ ಎಲೆಕ್ಟ್ರಿಕ್ ವಾಹನಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಇದರ ಬೆನ್ನಲ್ಲೇ ಹಲವು ಎಲೆಕ್ಟ್ರಿಕ್ ಕಾರು ಹಾಗೂ ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಇದೀಗ ಪುಣೆ ಮೂಲದ ಟೆಕೋ ಎಲೆಕ್ಟ್ರಾ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಬೆಂಗಳೂರು ಕಂಪನಿ ಜೊತೆ ಸಹಭಾಗಿತ್ವ; ಭಾರತಕ್ಕೆ ಬಂತು ಚೀನಾ ಬೈಕ್!

3 ವೆರಿಯೆಂಟ್‌ಗಳಲ್ಲಿ ನೂತನ ಸ್ಕೂಟರ್ ಲಭ್ಯವಿದೆ. ಟೆಕೊ ಎಲೆಕ್ಟ್ರಾ NEO, ರ್ಯಾಪ್ಟರ್ ಹಾಗೂ ಎಮರ್ಜ್ ವೇರಿಯೆಂಟ್ ಲಭ್ಯವಿದೆ. NEO ಸ್ಕೂಟರ್ ಬೆಲೆ 43,967 ರೂಪಾಯಿ, ರ್ಯಾಪ್ಟರ್ ಸ್ಕೂಟರ್ ಬೆಲೆ 60,771 ರೂಪಾಯಿ ಹಾಗೂ ಎಮರ್ಜ್ ಸ್ಕೂಟರ್ ಬೆಲೆ 72,247 ರೂಪಾಯಿ.

ಇದನ್ನೂ ಓದಿ: ಚೆನ್ನೈ ಮೂಲದ ಬ್ಲಾಕ್‌ಸ್ಮಿತ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಸದ್ಯದಲ್ಲೇ ಬಿಡುಗಡೆ !

NEO ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 65 ಕಿ.ಮೀ ಪ್ರಯಾಣ ಮಾಡಬಹುದು. ಇನ್ನು ರ್ಯಾಪ್ಟರ್ ಹಾಗೂ ಎಮರ್ಜ್ ಸ್ಕೂಟರ್ ಒಂದು ಬಾರಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಆಕರ್ಷಕ ವಿನ್ಯಾಸ ಹೊಂದಿದೆ. ಇಷ್ಟೇ ಅಲ್ಲ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ಬೆಲೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನೋ ಹೆಗ್ಗಳಿಗೆಗೂ ಪಾತ್ರವಾಗಿದೆ.