ಬೆಂಗಳೂರು(ಜು.02): ಎಲೆಕ್ಟ್ರಿಕ್ ವಾಹನಗಳಿಗೆ ಭರ್ಜರಿ ಕೊಡುಗೆ ಘೋಷಿಸೋ ಮೂಲಕ ಕೇಂದ್ರ ಸರ್ಕಾರ ಹೊಸ ಕ್ರಾಂತಿ ಮಾಡಲು ಮುಂದಾಗಿದೆ. ಭಾರತದಲ್ಲಿ ಮಾಲಿನ್ಯ ಹಾಗೂ ಇಂಧನ ಆಮದು ಕಡಿಮೆ ಮಾಡಲು ಎಲೆಕ್ಟ್ರಿಕ್  ವಾಹನ ಬಳಕೆಗೆ ಒತ್ತಾಯ ಕೇಳಿಬರುತ್ತಿದೆ. ಇದಕ್ಕಾಗಿ ಎಲೆಕ್ಟ್ರಿಕ್ ವಾಹನದ ಮೇಲೆ GST(ತೆರಿಗೆ) ಇಳಿಸಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರು ಮೂಲದ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯೂ ಇಳಿಕೆಯಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಲೀಸ್‌ಗೆ ಸಿಗಲಿದೆ ಎದರ್ ಎಲೆಕ್ಟ್ರಿಕ್ ಸ್ಕೂಟರ್!

GST ಕೌನ್ಸಿಲ್ ಸಭೆಯಲ್ಲಿ ತೆರಿಗೆಯನ್ನು 12% ರಿಂದ 5%ಕ್ಕೆ ಇಳಿಸಲಾಗಿದೆ. ಇದರಿಂದ ಎದರ್ ಸ್ಕೂಟರ್ ಬೆಲೆಯಲ್ಲಿ 9,000 ರೂಪಾಯಿ ಇಳಿಕೆಯಾಗಿದೆ. ಎದರ್ 340 ಹಾಗೂ ಎದರ್ 450 ಸ್ಕೂಟರ್ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಎದರ್ 340 ಸ್ಕೂಟರ್ ನೂತನ ಬೆಲೆ 1,02,460  ರೂಪಾಯಿ.

ಎದರ್ ಸ್ಕೂಟರ್ ನೂತನ ಬೆಲೆ:

ಎದರ್ ಸ್ಕೂಟರ್ ಬೆಂಗಳೂರು ಚೆನ್ನೆ
ಎದರ್ 340 1,02,460 ರೂ 1,10,443 ರೂ
ಎದರ್ 450 1,13,715 ರೂ 1,22,224 ರೂ


ಎದರ್ ಸ್ಕೂಟರ್ ಕ್ವಿಕ್ ಚಾರ್ಜ್ ಮೂಲಕ 50 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಇನ್ನು ಸಂಪೂರ್ಣ ಚಾರ್ಜ್‌ಗೆ 2 ಗಂಟೆ 40 ನಿಮಿಷ ತೆಗೆದುಕೊಳ್ಳುತ್ತೆ. ಒಂದು ಬಾರಿ ಚಾರ್ಜ್ ಮಾಡಿದರೆ ಎದರ್ 450 ಸ್ಕೂಟರ್ 75 ಕಿ.ಮೀ ಪ್ರಯಾಣದ  ರೇಂಜ್ ನೀಡಲಿದೆ. ಇನ್ನು ಎದರ್ 340 ಸ್ಕೂಟರ್ 70 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ.