ಮುಂಬೈ(ಜು.12): ಕೊರೋನಾ ವೈರಸ್ ಕಾರಣ ಎಲ್ಲಾ ಆಟೋಮೊಬೈಲ್ ಕಂಪನಿಗಳು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಹಲವು ನಗರಗಳು, ಪ್ರದೇಶಗಳು ಮತ್ತೆ ಲಾಕ್‌ಡೌನ್ ಆಗಿವೆ. ಹೀಗಾಗಿ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದ ಆಟೋಮೊಬೈಲ್ ಕಂಪನಿಗಳಿಗೆ ಮತ್ತೆ ಹೊಡೆತ ಬಿದ್ದಿದೆ. ಇದರ ಬೆನ್ನಲ್ಲೇ ಬಜಾಜ್ ಆಟೋ ತನ್ನು ಜನಪ್ರಿಯ ಪಲ್ಸರ್ 150 ಬೈಕ್ ಬೆಲೆ ಹೆಚ್ಚಿಸಿದೆ. 

ಬಜಾಜ್ ಪಲ್ಸರ್ 125 ಡಬಲ್ ಸೀಟ್ ಬೈಕ್ ಬಿಡುಗಡೆ!

BS6 ಬಜಾಜ್ ಪಲ್ಸರ್ 150 ಬಿಡುಗಡೆಯಾದಾಗ, ಉತ್ಪಾದನಾ ವೆಚ್ಚ ಹೆಚ್ಚಳದಿಂದ ಬೆಲೆ ಏರಿಕೆ ಮಾಡಲಾಗಿತ್ತು. BS6 ಪರಿವರ್ತನೆಗೊಂಡ ಎಲ್ಲಾ ವಾಹನಗಳು ಬೆಲೆ ಹೆಚ್ಚಳ ಮಾಡಿತ್ತು. ಇದೀಗ ಮತ್ತೆ 2ನೇ ಬಾರಿಗೆ ಬಜಾಜ್ ಪಲ್ಸರ್ ಬೆಲೆ ಹೆಚ್ಚಳವಾಗಿದೆ. ಆದರೆ ಸದ್ಯದ ಬೆಲೆ ಏರಿಕೆಗೆ ಸ್ಪಷ್ಟ ಕಾರಣವನ್ನು ಕಂಪನಿ ಬಹಿರಂಗ ಪಡಿಸಿಲ್ಲ.

ಲಾಕ್‌ಡೌನ್ ಸಡಿಲ: ಬಜಾಜ್ ಅವೆಂಜರ್ ಸ್ಟ್ರೀಟ್ ಬೈಕ್ ಬೆಲೆ ಹೆಚ್ಚಳ!.

ನೂತನ ಬಜಾಜ್ ಪಲ್ಸರ್ 150 ಬೆಲೆ ಇದೀಗ 999 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಪಲ್ಸರ್ 150 ಆರಂಬಿಕ ಬೆಲೆ 91,387 ರೂಪಾಯಿ ಆಗಿದೆ(ಎಕ್ಸ್ ಶೋ ರೂಂ). ಡ್ಯುಯೆಲ್ ಡಿಸ್ಕ್ ಸೇರಿದಂತೆ ಟಾಪ್ ಎಂಡ್ ಬೈಕ್ ಬೆಲೆ 99,556 ರೂಪಾಯಿ(ಎಕ್ಸ್ ಶೋ ರೂಂ) ಆಗಿದೆ.