ನವದೆಹಲಿ(ಮಾ.31): ಬಹುನಿರೀಕ್ಷಿತ ಬಜಾಜ್ ಡೊಮಿನಾರ್ 400 ಬಿಡುಗಡೆಗೆ ಸಜ್ಜಾಗಿದೆ. ಬೈಕ್ ಮಾರುಕಟ್ಟೆ ಪ್ರವೇಶಿಸೋ ಮುನ್ನ ಡೊಮಿನಾರ್ ಬೈಕ್ ಬೆಲೆ ಬಹಿರಂಗವಾಗಿದೆ. ಬೈಕ್ ಈಗಾಗಲೇ ಡೀಲರ್‌ಗಳ ಕೈ ಸೇರಿದೆ. ಇದರ ಬೆನ್ನಲ್ಲೇ ಬೈಕ್ ಬೆಲೆ ಕೂಡ ಬಹಿರಂಗವಾಗಿದೆ. ಈ ಹಿಂದಿನ ಡೊಮಿನಾರ್ ಬೈಕ್ ಬೆಲೆಗಿಂತ ನೂತನ ಬೈಕ್ ಬೆಲೆ 10,000 ರೂಪಾಯಿ ಹೆಚ್ಚಳವಾಗಿದೆ.

ಇದನ್ನೂ ಓದಿ: TVS ವಿಕ್ಟರ್ CBS ಬೈಕ್ ಬಿಡುಗಡೆ- ಬೆಲೆ ಎಷ್ಟು?

2019ರ ಬಜಾಜ್ ಡೊಮಿನಾರ್ 400 ಬೈಕ್ ಬೆಲೆ 1.73 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಹಿಂದಿನ ಡೊಮಿನಾರ್ ಬೈಕ್ ಬೆಲೆ 1.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  2019 ಬಜಾಜ್ ಡೊಮಿನಾರ್ 400 ಬೈಕ್‌ನಲ್ಲಿ SOHC ಎಂಜಿನ್ ಬದಲು DOHC ಎಂಜಿನ್ ಬಳಸಲಾಗಿದೆ.  35 bhp ಪವರ್(@8000 rpm) to 39 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಬಜಾಜ್‌ ಪ್ಲಾಟಿನಾ 100 KS ಬೈಕ್ ಬಿಡುಗಡೆ- ಬೆಲೆ ಎಷ್ಟು?

ನೂತನ ಬಜಾಜ್ ಡೊಮಿನಾರ್ ಹಸಿರು ಬಣ್ಣದಲ್ಲೂ ಲಭ್ಯವಿದೆ. ನೂತನ ಡೊಮಿನಾರ್ ಬೈಕ್ ರಾಯಲ್ ಎನ್‌ಫೀಲ್ಡ್ 350,  ಹೊಂಡಾ CB 300R, KTM 250 ಡ್ಯೂಕ್, BMW G 310 R, TVS ಆಪಾಚೆ RR 310 ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.