ಚೆನ್ನೈ(ಮಾ.31): TVS ಮೋಟಾರ್ ಕಂಪನಿ ಇದೀಗ ವಿಕ್ಟರ್ ಬೈಕ್‌ಗೆ ಹೊಸ ರೂಪ ನೀಡಿದೆ. TVS ವಿಕ್ಟರ್ ಬೈಕ್ ಇದೀಗ CBS(ಕಂಬೈಂಡ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ನೂತನ ಬೈಕ್‌ SBT(ಸಿಂಕ್ರೋನೈಸಡ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನ ಕೂಡ ಹೊಂದಿದೆ. 

ಇದನ್ನೂ ಓದಿ: ಸಂಜಯ್ ದತ್‌ 'ಹೈ-ರೇಂಜ್' ಪ್ರೀತಿ- ಮನೆಗೆ ಬಂದ ಹೊಸ ಆತಿಥಿ!

ನೂತನ ಬೈಕ್ 110 cc ಸಿಂಗಲ್-ಸಿಲಿಂಡರ್, ಆಯಿಲ್ ಕೂಲ್ಡ್, 3-ವೇಲ್ವ್ ಎಂಜಿನ್ ಹೊಂದಿದ್ದು, 9.3 bhp ಪವರ್(@7500 rpm) ಹಾಗೂ 9.4 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  4 ಸ್ಪೀಡ್ ಗೇರ್ ‌ಬಾಕ್ಸ್ ಹೊಂದಿರು ನೂತನ ವಿಕ್ಟರ್ CSB ಇದೀಗ ಬಜಾಜ್ ಸೇರಿದಂತೆ ಇತರ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಬಜಾಜ್‌ ಪ್ಲಾಟಿನಾ 100 KS ಬೈಕ್ ಬಿಡುಗಡೆ- ಬೆಲೆ ಎಷ್ಟು?

TVS ವಿಕ್ಟರ್ CBS ಬೈಕ್ ಬೆಲೆ 54,682 ರೂಪಾಯಿಂದ ₹ 57,662 ರೂಪಾಯಿ(ಎಕ್ಸ್ ಶೋ ರೂಂ).  ಟಿವಿಎಸ್ ಕಂಪನಿಯ NTorq, ಜುಪಿಟರ್, ವೆಗೋ, ಪೆಪ್+ ಹಾಗೂ ಮೊರ್ರ್ SBT ತಂತ್ರಜ್ಞಾನ ಹೊಂದಿದ್ದರೆ, TVS ಅಪಾಚೆ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.