ನವದೆಹಲಿ(ಅ.11): 80ರ ದಶಕದಲ್ಲಿ ಹಮಾರ ಬಜಾಜ್ ಕೇವಲ ಜಾಹೀರಾತಾಗಿ ಉಳಿದಿರಲಿಲ್ಲ. ಅದು ಭಾರತೀಯರ ಪ್ರೀತಿಯ ಸಾರಥಿಯಾಗಿತ್ತು. ಅಷ್ಟರಮಟ್ಟಿಗೆ ಬಜಾಜ್ ಚೇತಕ್ ಸ್ಕೂಟರ್ ಭಾರತೀಯರನ್ನು ಆವರಿಸಿಬಿಟ್ಟಿತ್ತು. 1972ರಲ್ಲಿ ಚೇತಕ್ ಸ್ಕೂಟರ್ ಭಾರತದದ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. 2005ರ ವರೆಗೆ ಅಸ್ಥಿತ್ವ ಉಳಿಸಿಕೊಂಡಿದ್ದ ಬಜಾಜ್ ಚೇತಕ್ ಇತರ ಸ್ಕೂಟರ್ ಹಾಗೂ ಬೈಕ್ ಪೈಪೋಟಿಯಿಂದ ಸ್ಥಗಿತಗೊಂಡಿತು. ಇದೀಗ ಬಜಾಜ್ ಚೇತಕ್ ಹೊಸ ಅವತಾರದಲ್ಲಿ ಮತ್ತೆ ರಸ್ತೆಗಿಳಿಯುತ್ತಿದೆ.

ಇದನ್ನೂ ಓದಿ: ಹೊಸ ರೂಪದಲ್ಲಿ ಬಜಾಜ್‌ ಸಿಟಿ 110

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬಿಡುಗಡೆಯಾಗುತ್ತಿದೆ. ಪುಣೆ ಮೂಲದ ಬಜಾಜ್ ಆಟೋಮೊಬೈಲ್ ಕಂಪನಿ ಕಳೆದ  2 ವರ್ಷದಿಂದ ಇ ಸ್ಕೂಟರ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಇದೀಗ ಅಕ್ಟೋಬರ್ 16 ರಂದು ನೂತನ ಬಜಾಜ್ ಚೇತಕ್ ಇ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ.

ಇದನ್ನೂ ಓದಿ: ಬಜಾಜ್ ಪಲ್ಸಾರ್ 150 ಬೆಲೆ ಏರಿಕೆ; ಇಲ್ಲಿದೆ ನೂತನ ದರ ಪಟ್ಟಿ!

ಸದ್ಯ ಮಾರುಕಟ್ಟೆಯಲ್ಲಿ ಬೆಂಗಳೂರು ಮೂಲದ ಎದರ್ ಎಲೆಕ್ಟ್ರಿಕ್, ಒಕಿನಾವ, ರಿವೋಲ್ಟ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ಗಳಿವೆ. ಇದೀಗ ಈ ಎಲ್ಲಾ ದ್ವಿಚಕ್ರವಾಹನಗಳಿಗೆ ಪೈಪೋಟಿ ನೀಡಲು ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸುತ್ತಿದೆ. 

ಇದನ್ನೂ ಓದಿ: ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಬಿಡುಗಡೆಗೆ- ಬೆಲೆ ಎಷ್ಟು?

ಅತ್ಯಾಧುನಿಕ ತಂತ್ರಜ್ಞಾನ, ಹೆಚ್ಚು ಆಕರ್ಷಕ, ಆರಾಮದಾಯಕ ಪ್ರಯಾಣವನ್ನು ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್ ನೀಡಲಿದೆ ಎಂದು ಕಂಪನಿ ಹೇಳಿದೆ. ನ್ಯಾವಿಗೇಶನ್, ರೈಡ್ ಅಂಕಿ ಅಂಶ, ಬ್ಲೂಟೂಥ್, ಕೆನೆಕ್ಟಿವಿಟಿ, ಜಿಯೋ ಫೆನ್ಸಿಂಗ್ ಸೇರಿದಂತೆ ಹಲವು ಫೀಚರ್ಸ್ ಕೂಡ ಈ ಸ್ಕೂಟರ್‌ನಲ್ಲಿರಲಿದೆ.

ಇದನ್ನೂ ಓದಿ: ಜಾವಾ 90th ಆ್ಯನಿವರ್ಸರಿ ಎಡಿಶನ್ ಬೈಕ್ ಬಿಡುಗಡೆ

ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಚೇತಕ್ ಚಿಕ್ ಹೆಸರಿಡುವ ಸಾಧ್ಯತೆ ಇದೆ. ಬಜಾಜ್ ಚೇತಕ್ ಹೆಸರಿಗೂ ಇತಿಹಾಸಕ್ಕೂ ಅವಿನಾಭಾವ ಸಂಬಂಧವಿದೆ. ರಾಜಸ್ಥಾನದ ಮೇವಾರದ 13ನೇ ರಾಜ ಮಹರಾಣ ಪ್ರತಾಪ್, 21 ಜೂನ್, 1576ರಲ್ಲಿ ನಡೆದ ಹಲ್ದಿಘಾಟ್ ಯುದ್ದದಲ್ಲಿ ಚೇತಕ್ ಅನ್ನೋ ಹೆಸರಿನ ಕುದುರೆಯನ್ನು ಬಳಸಿದ್ದರು.

ಈ ಯುದ್ದದಲ್ಲಿ ಮಹರಾಣ ಪ್ರತಾಪ್ ನೆಚ್ಚಿನ ಕುದರೆ ಚೇತಕ್ ಸಾವನ್ನಪ್ಪಿತ್ತು. ರಾಜಸ್ಥಾನ ಬಲಿಚಾ ಗ್ರಾಮದ ಅರವಲ್ಲಿ ಬೆಟ್ಟದಲ್ಲಿ ಚೇತಕ್ ಕುದರೆಗಾಗಿ ರಾಜ ಮಹರಾಣ ಪ್ರತಾಪ್ ಸ್ಮಾರಕ ನಿರ್ಮಿಸಿದ್ದಾರೆ. ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿದೆ. ಇದೇ ಐತಿಹಾಸಿಕ ಹೆಸರನ್ನು ನೂತನ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಇಡುವ ಸಾಧ್ಯತೆ ಹೆಚ್ಚಿದೆ. ನೂತನ ಬೈಕ್ ಬೆಲೆ, ಮೈಲೇಜ್ ರೇಂಜ್ ಹಾಗೂ ಬ್ಯಾಟರಿ ಮಾಹಿತಿ ಬಹಿರಂಗವಾಗಿಲ್ಲ.