ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಮೂಲಕ ಚಲಿಸುವ ವಿಶ್ವದ ಮೊದಲ ಮೋಟಾರ್‌ ಸೈಕಲ್‌ನ್ನು ಬಜಾಜ್‌ ಕಂಪನಿ ಶುಕ್ರವಾರ ಬಿಡುಗಡೆ ಮಾಡಿದೆ.

ಮುಂಬೈ: ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಮೂಲಕ ಚಲಿಸುವ ವಿಶ್ವದ ಮೊದಲ ಮೋಟಾರ್‌ ಸೈಕಲ್‌ನ್ನು ಬಜಾಜ್‌ ಕಂಪನಿ ಶುಕ್ರವಾರ ಬಿಡುಗಡೆ ಮಾಡಿದೆ. ಇದಕ್ಕೆ ‘ಫ್ರೀಡಂ’ ಎಂದು ಹೆಸರಿಡಲಾಗಿದೆ ಹಾಗೂ ಇದರ ಬೆಲೆ ₹ 95 ಸಾವಿರ ರು.ನಿಂದ ಆರಂಭವಾಗಲಿದೆ.

ಈ ಬೈಕ್‌ ಪೆಟ್ರೋಲ್‌ ಹಾಗೂ ಸಿಎನ್‌ಜಿನಿಂದಲೂ ಚಲಿಸುತ್ತದೆ. ಚಾಲಕರು ಇಲ್ಲಿ ಯಾವುದು ಬೇಕು ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ. ಫ್ರೀಡಂ ಎನ್‌ಜಿಒ 4 ಡ್ರಮ್‌ ಬೈಕ್‌ ಬೆಲೆ ₹ 95,000, ಮಿಡ್-ಸ್ಪೆಕ್ ಎನ್‌ಜಿಒ4 ಡ್ರಮ್ ಎಲ್‌ಇಡಿ ಬೈಕ್‌ ಬೆಲೆ ₹ 1.05 ಲಕ್ಷ ಹಾಗೂ ಟಾಪ್-ಸ್ಪೆಕ್ ಎನ್‌ಜಿಒ4 ಡಿಸ್ಕ್ ಎಲ್‌ಇಡಿ ಬೈಕ್‌ ಬೆಲೆ ₹ 1.10 ಲಕ್ಷ ಬೆಲೆ ಇದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಬುಕ್ಕಿಂಗ್ ಆರಂಭವಾಗಿದೆ ಎಂದು ಕಂಪನಿ ತಿಳಿಸಿದೆ.

Scroll to load tweet…

ಮೊಬೈಲ್‌ ಕೆರೆ ಶುಲ್ಕ ಏರಿಕೆ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ತೀವ್ರ ತರಾಟೆ

ನವದೆಹಲಿ: ದೇಶದ ಪ್ರಮುಖ ಮೂರು ಮೊಬೈಲ್‌ ಸೇವಾ ಕಂಪನಿಗಳ ಮೊಬೈಲ್‌ ಚಂದಾ ಶುಲ್ಕವನ್ನು ಏರಿಕೆ ಮಾಡಿರುವ ಕುರಿತು ಕಾಂಗ್ರೆಸ್‌ ಶುಕ್ರವಾರ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಭಾರತದಲ್ಲಿ 109 ಕೋಟಿ ಜನ ಮೊಬೈಲ್‌ಗಳನ್ನು ಬಳಕೆ ಮಾಡುತ್ತಿದ್ದು, ಮೊಬೈಲ್‌ ಸೇವಾ ಕಂಪನಿಗಳು ಮೊಬೈಲ್‌ ಚಂದಾ ಶುಲ್ಕವನ್ನು ದುಪ್ಪಟ್ಟು ಮಾಡಿವೆ. ಈ ದರಗಳನ್ನು ಏರಿಕೆ ಮಾಡಲು ಕೇಂದ್ರ ಯಾವುದೇ ವಿಚಾರಣೆ ಇಲ್ಲದೆ ಹೇಗೆ ಅನುಮತಿ ನೀಡಿದೆ ಪ್ರಶ್ನಿಸಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಮಾತನಾಡಿ, ಮೋದಿ 3.0 ಅವಧಿಯಲ್ಲೂ ಬಂಡವಾಳಶಾಹಿಗಳ ಅಭಿವೃದ್ಧಿ ಮುಂದುವರೆದಿದೆ. ರಿಲಯನ್ಸ್‌ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್‌ ಐಡಿಯಾ ಮೊಬೈಲ್ ಸೇವಾ ಕಂಪನಿಗಳ ಲಾಭಕೋರತನಕ್ಕೆ ಕೇಂದ್ರ ಅನುಮತಿ ನೀಡುವ ಮೂಲಕ 109 ಕೋಟಿ ಮೊಬೈಲ್‌ ಬಳಕೆದಾರರನ್ನು ಸುಲಿಗೆ ಮಾಡುತ್ತಿದೆ ಎಂದು ಕಿಡಿಕಾರಿದರು.

ಭಾರತದ ಮೊಟ್ಟ ಮೊದಲ ಸಿಎನ್‌ಜಿ ಆಟೋಮ್ಯಾಟಿಕ್ ಟಾಟಾ ಟಿಯಾಗೋ, ಟಿಗೋರ್ ಕಾರು ಬಿಡುಗಡೆ!

ಸಲಿಂಗ ವಿವಾಹ: ಜು.10ಕ್ಕೆ ಮರುಪರಿಶೀಲನಾ ಅರ್ಜಿ ವಿಚಾರಣೆ

ನವದೆಹಲಿ: ಸಲಿಂಗ ವಿವಾಹ ಕಾನೂನು ಬದ್ಧವಲ್ಲವೆಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಜುಲೈ 10ಕ್ಕೆ ನಡೆಯಲಿದೆ. ಕಳೆದ ವರ್ಷ ಅಕ್ಟೋಬರ್‌ 17 ರಂದು ಸುಪ್ರೀಂಕೋರ್ಟ್, ಸಲಿಂಗ ವಿವಾಹ ಕಾನೂನು ಬದ್ಧಗೊಳಿಸಲು ಸಾಧ್ಯವಿಲ್ಲವೆಂದು ತೀರ್ಪು ಪ್ರಕಟಿಸಿತ್ತು. ಈ ಬಗ್ಗೆ ಮರುಪರೀಶಿಲಿಸುವಂತೆ ನ್ಯಾಯಾಲಯಕ್ಕೆಅರ್ಜಿ ಸಲ್ಲಿಕೆಯಾದ ಕಾರಣ ಮುಖ್ಯ ನ್ಯಾ। ಡಿವೈ ಚಂದ್ರಚೂಡ್‌ , ನ್ಯಾ। ಸಂಜೀವ್‌ ಖನ್ನಾ, ಹಿಮಾ ಕೋಹ್ಲಿ, ಬಿವಿ ನಾಗರತ್ನ, ಪಿಎಸ್‌ ನರಸಿಂಹ ಸೇರರಿದಂತೆ ಒಟ್ಟು 5 ನ್ಯಾಯಾಧೀಶರ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ. ಮರುಪರಿಶೀಲನಾ ಅರ್ಜಿ ಆಗಿರುವ ಕಾರಣ ಇದರ ವಿಚಾರಣೆಯು ಕೋರ್ಟ್‌ ಹಾಲ್‌ನಲ್ಲಿ ಬಹಿರಂಗವಾಗಿ ನಡೆಯುವುದಿಲ್ಲ. ಮುಖ್ಯ ನ್ಯಾಯಾಧೀಶರ ಛೇಂಬರ್‌ನಲ್ಲಿ ನಡೆಯಲಿದೆ.

21 ಸಾವಿರಕ್ಕೆ ಬುಕ್ ಮಾಡಿ ಭಾರತದ ಮೊದಲ ಟಾಟಾ ಆಟೋಮ್ಯಾಟಿಕ್ ಸಿಎನ್‌ಜಿ ಕಾರು!