Asianet Suvarna News Asianet Suvarna News

ಭಾರತದ ಮೊಟ್ಟ ಮೊದಲ ಸಿಎನ್‌ಜಿ ಆಟೋಮ್ಯಾಟಿಕ್ ಟಾಟಾ ಟಿಯಾಗೋ, ಟಿಗೋರ್ ಕಾರು ಬಿಡುಗಡೆ!

ಭಾರತದಲ್ಲಿ ಆಟೋಮ್ಯಾಟಿಕ್ ಕಾರುಗಳು ಇಂಧನ ಅಥವಾ ಎಲೆಕ್ಟ್ರಿಕ್ ಕಾರುಗಳ ಮೊರೆ ಹೋಗಬೇಕು. ಇದೀಗ ಟಾಟಾ ಮೋಟಾರ್ಸ್ ಭಾರತದಲ್ಲಿ ಮೊಟ್ಟ ಮೊದಲ ಸಿಎನ್‌ಜಿ ಆಟೋಮ್ಯಾಟಿಕ್ ಕಾರು ಬಿಡುಗಡೆ ಮಾಡಿದೆ. ನೂತನ ಟಾಟಾ ಟಿಯಾಗೋ, ಟಿಗೋರ್ ಕಾರಿನ ಬೆಲೆ ಹಾಗೂ ಇತರ ವಿಶೇಷತೆ ಇಲ್ಲಿದೆ.

Tata Motors creates another Industry 1st Launches Tiago and Tigor iCNG AMT Cars ckm
Author
First Published Feb 8, 2024, 8:20 PM IST

ಬೆಂಗಳೂರು(ಫೆ.08): ಆಟೋಮ್ಯಾಟಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ನಗರ ಹಾಗೂ ದೂರ ಪ್ರಯಾಣ ಅತ್ಯಂತು ಸುಲಭವಾಗಿ ಹಾಗೂ ಆರಾಮದಾಯಕವಾಗಿ ಮಾಡಲು ಆಟೋಮ್ಯಾಟಿಕ್ ಗೇರ್ ಕಾರುಗಳ ಸೂಕ್ತ. ಇದೀಗ ಟಾಟಾ ಮೋಟಾರ್ಸ್ ಭಾರತದಲ್ಲಿ ಮೊಟ್ಟ ಮೊದಲ ಸಿಎನ್‌ಜಿ ಆಟೋಮ್ಯಾಟಿಕ್ ಕಾರು ಬಿಡುಗಡೆ ಮಾಡಿದೆ. ಟಾಟಾ ಸಿಎನ್‌ಜಿ ಟಿಯಾಗೋ, ಟಿಗೋರ್ ಎಎಂಟಿ ಕಾರುಗಳನ್ನು ಬಿಡುಗಡೆ ಮಾಡಿದೆ. 28.06 ಕಿ.ಮೀ ಮೈಲೇಜ್ ನೀಡಬಲ್ಲ ಈ ಕಾರು ಹೊಸ ಸಂಚಲನ ಸೃಷ್ಟಿಸಿದೆ. 

ಹೊಚ್ಚ ಹೊಸ ಟಿಯಾಗೋ ಐಸಿಎನ್‌ಜಿ ಆಟೋಮ್ಯಾಟಿಕ್ ಕಾರು ಬೆಲೆ 7.89 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಮತ್ತು ಟಿಗೋರ್ ಐಸಿಎನ್‌ಜಿ  8.84 ಲಕ್ಷ ರೂಪಾಯಿ  ಆರಂಭಿಕ ಬೆಲೆಯಲ್ಲಿ(ಎಕ್ಸ್ ಶೋ ರೂಂ) ಲಭ್ಯವಿದೆ. ಪ್ರಸ್ತುತ ಇರುವ ಬಣ್ಣಗಳ ಜೊತೆಗೆ, ಕಂಪನಿಯು ಟಿಯಾಗೋಗೆ ಆಸಕ್ತಿಕರ ಹೊಸ ಟೊರ್ನಾಡೊ ಬ್ಲೂ ಬಣ್ಣ ಸೇರಿಸಿದೆ. ಟಿಯಾಗೊ ಎನ್‌ಆರ್‌ಜಿಯಲ್ಲಿ ಗ್ರಾಸ್‌ಲ್ಯಾಂಡ್ ಬೀಜ್ ಮತ್ತು ಟಿಗೋರ್‌ನಲ್ಲಿ ಮಿಟಿಯೋರ್ ಬ್ರೋಂಜ್ ಬಣ್ಣ ದೊರೆಯುತ್ತದೆ.

21 ಸಾವಿರಕ್ಕೆ ಬುಕ್ ಮಾಡಿ ಭಾರತದ ಮೊದಲ ಟಾಟಾ ಆಟೋಮ್ಯಾಟಿಕ್ ಸಿಎನ್‌ಜಿ ಕಾರು!

ಟಿಯಾಗೋ ಸಿಎನ್‌ಜಿಯಲ್ಲಿ ವೇರಿಯಂಟ್ ಗಳು ಬೆಲೆ (ಎಕ್ಸ್-ಶೋರೂಮ್ ದೆಹಲಿ)
ಟಿಯಾಗೋ ಐಸಿಎನ್‌ಜಿ ಎಎಂಟಿ ,XTA:    7,89,900 ರೂಪಾಯಿ
ಟಿಯಾಗೋ ಐಸಿಎನ್‌ಜಿ ಎಎಂಟಿ  XZA+ :    8,79,900 ರೂಪಾಯಿ
ಟಿಯಾಗೋ ಐಸಿಎನ್‌ಜಿ ಎಎಂಟಿ XZA+: DT     8,89,900 ರೂಪಾಯಿ
ಟಿಯಾಗೋ ಐಸಿಎನ್‌ಜಿ ಎಎಂಟಿ  XZA NRG : 8,79,900 ರೂಪಾಯಿ

ಟಿಗೋರ್‌ ಸಿಎನ್‌ಜಿಯಲ್ಲಿ ವೇರಿಯಂಟ್ ಗಳು ಬೆಲೆ (ಎಕ್ಸ್-ಶೋರೂಮ್ ದೆಹಲಿ)
ಟಿಗೋರ್ ಐಸಿಎನ್‌ಜಿ ಎಎಂಟಿ    XZA    :8,84,900 ರೂಪಾಯಿ
ಟಿಗೋರ್ ಐಸಿಎನ್‌ಜಿ ಎಎಂಟಿ XZA+:    9,54,900 ರೂಪಾಯಿ

ಟಾಟಾ ಮೋಟಾರ್ಸ್ ಸಿಎನ್‌ಜಿ ವಿಭಾಗದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದು, ಟ್ವಿನ್-ಸಿಲಿಂಡರ್ ತಂತ್ರಜ್ಞಾನ (ಹೆಚ್ಚಿನ ಬೂಟ್ ಸ್ಪೇಸ್ ಒದಗಿಸಲು ಸಹಾಯ ಮಾಡುತ್ತದೆ), ಉನ್ನತ ಮಟ್ಟದ ಫೀಚರ್ ಆಯ್ಕೆಗಳು ಮತ್ತು ಸಿಎನ್‌ಜಿ ನಲ್ಲಿ ಡೈರೆಕ್ಟ್ ಸ್ಟಾರ್ಟ್ ನಂತಹ ವಿವಿಧ ಉದ್ಯಮದ ಪ್ರಥಮ ವೈಶಿಷ್ಟ್ಯಗಳನ್ನು ಒದಗಿಸಿದೆ. ಟಾಟಾ ಮೋಟಾರ್ಸ್ ಟಿಯಾಗೋ, ಟಿಗೋರ್, ಅಲ್ಟ್ರೋಜ್ ಮತ್ತು ಪಂಚ್ ಸೇರಿದಂತೆ ವಿಸ್ತಾರವಾದ ಸಿಎನ್‌ಜಿ ಉತ್ಪನ್ನಗಳ ಪೋರ್ಟ್ ಪೋಲಿಯೊವನ್ನು ಹೊಂದಿದೆ ಎಂದು  ಟಾಟಾ ಮೋಟಾರ್ಸ್  ಕಮರ್ಷಿಯಲ್ ಆಫೀಸರ್ ಅಮಿತ್ ಕಾಮತ್ ಹೇಳಿದ್ದಾರೆ.

 

ಅತೀ ಕಡಿಮೆ ಬೆಲೆಯಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ SUV ಕಾರು ಬಿಡುಗಡೆ, 421 ಕಿ.ಮೀ ಮೈಲೇಜ್

ಸಿಎನ್‌ಜಿ ಮಾರುಕಟ್ಟೆಯಲ್ಲಿ ಅಗ್ರ 2 ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆರ್ಥಿಕ ವರ್ಷ 24ರಲ್ಲಿ ಸಿಎನ್‌ಜಿ ಮಾರಾಟದಲ್ಲಿ ನಾವು ಗಮನಾರ್ಹವಾದ 67.9% ಬೆಳವಣಿಗೆಯನ್ನು ಅನುಭವಿಸಿದ್ದೇವೆ. ಈ ಇಂಟೆಲಿಜೆಂಟ್, ಸೇಫ್ ಮತ್ತು ಪವರ್‌ಫುಲ್ ಅವಳಿ ಉತ್ಪನ್ನಗಳ ಪರಿಚಯದೊಂದಿಗೆ, ಈ ವಿಧದ ಇಂಧನ ಆಯ್ಕೆಯ ಉತ್ಪನ್ನಗಳ ಬೇಡಿಕೆಯನ್ನು ಮತ್ತಷ್ಟು ಸುಧಾರಿಸುವ ವಿಶ್ವಾಸವನ್ನು ನಾವು ಹೊಂದಿದ್ದೇವೆ ಮತ್ತು ಪ್ರಯಾಣಿಕ ಕಾರುಗಳಲ್ಲಿ ನಮ್ಮ ಬೆಳವಣಿಗೆಯ ಆವೇಗವನ್ನು ಉಳಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಅಮಿತ್ ಕಾಮತ್ ಹೇಳಿದ್ದಾರೆ.
 

Follow Us:
Download App:
  • android
  • ios