ಮುಂಬೈ(ಜೂ.23): ಬಾಲಿವುಡ್ ಸೆಲೆಬ್ರೆಟಿಗಳು ತಮ್ಮ ಕಾರುಗಳನ್ನು ಬದಲಾಯಿಸುವುದು ಸಹಜ. ಐಷಾರಾಮಿ, ದುಬಾರಿ ಕಾರುಗಳನ್ನು ಬದಲಾಯಿಸಿ ಅಪ್‌ಗ್ರೇಡೆಡ್ ಕಾರುಗಳನ್ನು ಖರೀದಿಸುತ್ತಾರೆ.  ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ಕೂಡ ತಮ್ಮ ರೋಲ್ಸ್ ರಾಯ್ಸ್ ಕಾರು ಮಾರಾಟ ಮಾಡಿದ್ದರು. ಇದೀಗ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಖರೀದಿಸಿ ತನ್ನ ತಂಗಿಗೆ ಗಿಫ್ಟ್ ನೀಡಿದ BMW 7 ಸೀರಿಸ್ ಕಾರು ಮಾರಾಟಕ್ಕಿಡಲಾಗಿದೆ.

 

ಇದನ್ನೂ ಓದಿ: ಕಡಿಮೆ ಬೆಲೆಗೆ ಲಭ್ಯವಿರೋ 5 ಅಟೋಮ್ಯಾಟಿಕ್ ಕಾರು- ಇಲ್ಲಿದೆ ಲಿಸ್ಟ್!

ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ 2016ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಸಲ್ಮಾನ್ ಖಾನ್ ತಂಗಿಗೆ BMW 7 ಸೀರಿಸ್ ಕಾರು ಉಡುಗೊರೆ ನೀಡಿದ್ದರು. ಈ ಕಾರನ್ನು ಹೆಚ್ಚಾಗಿ ಬಳಸದ ಅರ್ಪಿತಾ ಖಾನ್ ಇದೀಗ ಮಾರಾಟ ಮಾಡಲು ಮುಂದಾಗಿದ್ದಾರೆ. ಕಾರು ಕೇವಲ 11,500 ಕಿ.ಮೀ ಪ್ರಯಾಣಿಸಿದೆ. ಸಿಂಗಲ್ ಓನರ್ ಹೊಂದಿರುವ ಕಾರು ಇದೀಗ ಮಾರಟಕ್ಕಿದೆ.

 

ಇದನ್ನೂ ಓದಿ: ಮಾರುತಿ ಡಿಸೈರ್ BS-VI ಕಾರು ಬಿಡುಗಡೆ- ಬೆಲೆ ಬದಲಾವಣೆ!

BMW 7 ಸೀರಿಸ್ ಕಾರಿನ ಆನ್ ರೋಡ್ ಬೆಲೆ 1.6 ಕೋಟಿ ರೂಪಾಯಿ. ಇದೀಗ ಅರ್ಪಿತಾ ಖಾನ್ ತಮ್ಮ ಕಾರನ್ನು 75 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ.  3.0-ಲೀಟರ್, 6 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರುವ ಈ ಕಾರು 265 Bhp ಪವರ್ ಹಾಗೂ 620 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.