ಮುಂಬೈ(ನ.16): ಬಾಲಿವುಡ್‌ನ ಸ್ಟಾರ್ ಅಜಯ್ ದೇವಗನ್ ತಮ್ಮ ನೈಜ ಅಭಿನಯದಿಂದಲೇ ಪ್ರಖ್ಯಾತಿ ಪಡೆದಿದ್ದಾರೆ. ಅಜಯ್ ದೇವಗನ್ ರೋಲ್ಸ್ ರಾಯ್ಸ್, ರೇಂಜ್ ರೋವರ್ ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇತ್ತೀಚೀಗೆ ಅಜಯ್ ದುಬಾರಿ ಕಾರಾದ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರನ್ನು ಖರೀದಿಸಿದ್ದಾರೆ. ಆದರೆ ಈ ಬಾರಿ ಅಜಯ್ ಯಾವುದೇ ಕಾರು ಖರೀದಿಸಿಲ್ಲ. ಬದಲಾಗಿದೆ ತಮ್ಮಲ್ಲಿನ ಕಾರನ್ನು ಮಾರಾಟ ಮಾಡುತ್ತಿದ್ದಾರೆ.

ನೂತನ BMW XDrive 40i ಕಾರಿನೊಂದಿಗೆ ಸಿಂಗಂ ಅಜಯ್ ದೇವಗನ್ ಪ್ರತ್ಯಕ್ಷ!.

SUV ಕಾರಾದ ವೋಲ್ವೋ XC90 ಕಾರನ್ನು ಮಾರಾಟ ಮಾಡುತ್ತಿದ್ದಾರೆ. 2016ರಲ್ಲಿ ಅಜಯ್ ದೇವಗನ್ ಈ ಕಾರು ಖರೀದಿಸಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ 55,000 ಕಿ.ಮೀ ಪ್ರಯಾಣ ಮಾಡಿದೆ. ಈ ಕಾರು ಅಜಯ್ ದೇವಗನ್ ಹೆಸರಲ್ಲಿ ರಿಜಿಸ್ಟರ್ ಆಗಿದ್ದರೂ, ಕಾರನ್ನು ಹೆಚ್ಚಾಗಿ ಬಳಸಿದ್ದು ಪತ್ನಿ ಹಾಗೂ ನಟಿ ಕಾಜಲ್. 

ಮಾಜಿ ಪ್ರಧಾನಿ ದೇವೇಗೌಡರಿಗೆ ಸರ್ಕಾರ ನೀಡಿದ ವೋಲ್ವೋ ಕಾರಿನ ವಿಶೇಷತೆ ಏನು?..

2.0 ಲೀಟರ್ ಟ್ವಿನ್ ಟರ್ಬೋಚಾರ್ಜ್ D5 ಡೀಸೆಲ್ ಎಂಜಿನ್ ಹೊಂದಿರುವ ಈ ಕಾರು  225 PS ಪವರ್ 470 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಗರಿಷ್ಠ ಸ್ಪೀಡ್ 230 km ಪ್ರತಿ ಗಂಟೆಗೆ.