ಅಹಮ್ಮದಾಬಾದ್(ಅ.04): ಹೊಸ ಟ್ರಾಫಿಕ್ ನಿಯಮ ಹಾಗೂ ದುಬಾರಿ ದಂಡವನ್ನು ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯಗಳು ವಿರೋಧ ವ್ಯಕ್ತಪಡಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ತವರಲ್ಲೇ ದುಬಾರಿ ತಂಡಕ್ಕೆ ಪ್ರತಿಭಟನೆ ನಡೆಯುತ್ತಿದೆ. ಆಹಮ್ಮದಾಬಾದ್ ನಗರದ ಆಟೋ ರಿಕ್ಷಾ ಚಾಲಕರು ದುಬಾರಿ ದಂಡಕ್ಕೆ ಬ್ರೇಕ್ ಹಾಕಿ ಎಂದು ಸತತ 12 ಗಂಟೆಗಳ ಕಾಲ ಪ್ರತಿಭಟನೆ ಮಾಡಿದ್ದಾರೆ. 

ಇದನ್ನೂ ಓದಿ: 8 ವರ್ಷದ ಬಾಲಕನ ಬೈಕ್ ರೈಡ್; ತಂದೆಗೆ 30,000 ರೂ ದಂಡ!

ದುಬಾರಿ ದಂಡದಿಂದ ಬಡ ಆಟೋ ಚಾಲಕರು ಕಂಗಾಲಾಗಿದ್ದಾರೆ. ಆಟೋ ಚಾಲನೆ ಮಾಡುವ ಬಹುತೇಕರು ಬಡತನ ರೇಖೆಗಿಂತ ಕೆಳಗಿದ್ದಾರೆ. ಇವರ ಮೇಲೆ ದುಬಾರಿ ದಂಡ ಹಾಕಿದರೆ ಅವರ ಕುಟುಂಬ ಹಾಗೂ ಜೀವನ ನಿರ್ವಹಣೆ ತಾಳ ತಪ್ಪಲಿದೆ. ಇದಕ್ಕಾಗಿ ನಿಯಮ ಸಡಿಲಗೊಳಿಸಬೇಕು ಎಂದು ಅಹಮ್ಮದಾಬಾದ್ ನಗರದ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ನೇಪಾಳ ಎಂದು ಚೀನಾ ತಲುಪಿದ್ರು; ಭಾರತೀಯ ಬೈಕರ್ಸ್‌ಗೆ ಗಡಿಯಲ್ಲಿ ಸಂಕಷ್ಟ!

ಸತತ 12 ಗಂಟೆಗಳಾ ಪ್ರತಿಭಟನೆ ಮಾಡಿದ ಆಟೋ ಚಾಲಕರ ಕೂಗನ್ನು ಸರ್ಕಾರ ಕೇಳಿಸಿಕೊಂಡಿದೆ. ಆಟೋ ಚಾಲಕ ಸಂಘದ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ ಸರ್ಕಾರ, ಚಾಲಕ ಬೇಡಿಕೆಗಳನ್ನು ಆಲಿಸಿದರು. ದುಬಾರಿ ದಂಡದಲ್ಲಿ ಬದಲಾವಣೆ, ಅಹಮ್ಮದಾಬಾದ್ ನಗರದಲ್ಲಿ ಆಟೋ ಸ್ಟ್ಯಾಂಡ್ ನಿರ್ಮಾಣ ಸೇರಿದಂತೆ ಹಲವು ಬೇಡಿಗಳಳನ್ನು ಆಟೋ ಚಾಲಕರು ಸರ್ಕಾರದ ಮುಂದಿಟ್ಟಿದ್ದಾರೆ.

ನೂತನ ಟ್ರಾಫಿಕ್ ನಿಯಮ ಹಾಗೂ ದುಬಾರಿ ದಂಡದಿಂದ ಆಟೋ ಚಾಲಕರನ್ನು ಮುಕ್ತಿಗೊಳಿಸಲು ಪ್ರಮುಖ ಬೇಡಿಕೆ ಇಡಲಾಗಿದೆ. ಇನ್ನು ಅಹಮ್ಮದಾಬಾದ್ ನಗರದಲ್ಲಿ 2.2 ಲಕ್ಷ ಆಟೋಗಳು ಓಡಾಡುತ್ತಿದೆ. ಆದರೆ ಆಟೋ ಸ್ಟ್ಯಾಂಡ್‌ನಲ್ಲಿ 23,000 ಆಟೋ ನಿಲ್ಲಿಸಲು ಮಾತ್ರ ಸ್ಥಳವಕಾಶವಿದೆ. ಹೀಗಾಗಿ ಸೂಕ್ತ ಸ್ಟ್ಯಾಂಡ್ ನಿರ್ಮಿಸಲು ಬೇಡಿಕೆ ಇಡಲಾಗಿದೆ.