ಬೆಂಗಳೂರು(ಫೆ.25): ಏರೋ ಇಂಡಿಯಾ ಶೋನಲ್ಲಿ ನಡೆದ ಅಗ್ನಿ ಅವಘಡಕ್ಕೆ 300ಕ್ಕೂ ಹೆಚ್ಚು ಕಾರುಗಳು ಬೆಂಕಿಯಲ್ಲಿ ಬೆಂದುಹೋಗಿವೆ. ಕಾರುಗಳು ಗುರುತೇ ಸಿಗದಷ್ಟರ ಮಟ್ಟಿಗೆ ಸುಟ್ಟು ಕರಕಲಾಗಿದೆ.  ಈಗಾಗಲೇ RTO ಅಧಿಕಾರಿಗಳು ಸಹಾಯವಾಣಿ ತೆರಿದ್ದಾರೆ. ಹಲವು ಇನ್ಶೂರೆನ್ಸ್ ಕಂಪೆನಿಗಳು ಕೂಡ ಸ್ಥಳದಲ್ಲಿ ಠಿಕಾಣಿ ಹೂಡಿದೆ. ಇದರ ಬೆನ್ನಲ್ಲೇ ಇದೀಗ ಟೊಯೋಟಾ ಕೂಡ ತನ್ನ ಗ್ರಾಹಕರ ನೆರವಿಗೆ ಧಾವಿಸಿದೆ.

ಇದನ್ನೂ ಓದಿ: ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?

ಯಲಹಂಕ ವಾಯುನೆಲೆ ಗೇಟ್ ನಂಬರ್ 5 ರ ಬಳಿಕ ಟೊಯೊಟಾ ಸಹಾಯ ಕೇಂದ್ರ ತೆರೆಯಲಾಗಿದೆ. ಬೆಳಗ್ಗೆ 8.30ರಿಂದ ಟೊಯೋಟಾ ಗ್ರಾಹಕರು ಸಹಾಯ ಕೇಂದ್ರಕ್ಕೆ ತೆರಳಿ ಸೂಕ್ತ ಪರಿಹಾರ ಪಡೆದುಕೊಳ್ಳಲು ಸೂಚಿಸಿದೆ. ಇನ್ನು ಸಹಾಯವಾಣಿಯನ್ನೂ ತೆರೆದಿರುವ ಟೊಯೋಟಾ 180042500001 ಅಥಲಾ 08066293001 ನಂಬರ್‌ಗಳಿಗೆ ಕರೆ ಮಾಡಿ ಸಹಾಯ ಪಡೆಯಲು ಸೂಚಿಸಿದೆ.

ಇದನ್ನೂ ಓದಿ: ಮಹಿಳೆಯ ಟೆಸ್ಟ್ ಡ್ರೈವ್‌ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!

ಕಾರು ಮಾಲೀಕರ ಗುರುತಿನ ಚೀಟಿ, ಕಾರಿನ ರಿಜಿಸ್ಟ್ರೇಶನ್ ದಾಖಲೆಗಳು, ಚಾಸಿ ನಂಬರ್ ಸೇರಿದ ದಾಖಲೆಗಳೊಂದಿಗೆ ಟೊಯೊಟ ಗ್ರಾಹಕರು ಸಹಾಯ ಪಡೆದುಕೊಳ್ಳಬಹುದು. ಕಾರಿನ ಸಂಪೂರ್ಣ ವಿಮೆ, ಕಾರು ರಿಪೇರಿ ಅವಶ್ಯಕತೆ ವಿಮೆ, ಕಾರನ್ನ ಶೋ ರೊಂಗೆ ಒಯ್ಯಲು ಇತರ ವಾಹನದ ಸಹಾಯ ಸೇರಿದಂತೆ ಅಗ್ನಿ ಅವಘಡಕ್ಕೆ ತುತ್ತಾದ ಕಾರಿಗೆ ಬೇಕಾದ ಎಲ್ಲಾ ಸಹಾಯವನ್ನ ತನ್ನ ಗ್ರಾಹಕರಿಗೆ ನೀಡಲು ಟೊಯೋಟಾ ಸಿದ್ಧವಾಗಿದೆ.