ಕೇರಳ(ಜು.19): ಟ್ರಕ್‌ಗಳಲ್ಲಿ ಸರಕುಗಳ ಸಾಗಣೆ ಅತೀ ಅಪಾಯದ ಹಾಗೂ ಹೆಚ್ಚು ತಾಳ್ಮೆಯಿಂದ ಕೂಡಿದ ಕೆಲಸ.  ಸರಕು ತುಂಬಿದ ಟ್ರಕ್ ಚಾಲನೆಗೆ ವಿಶೇಷ ಪರಿಣಿತಿ ಹೊಂದಿರಬೇಕು, ಇಷ್ಟೇ ಅಲ್ಲ ಕೌಶಲ್ಯವೂ ಬೇಕು. ಭಾರತದಲ್ಲಿ ಯಾವ ಮೂಲೆಯಿಂದಲೂ ನಾವು ಸರಕುಗಳನ್ನು ತರಿಸಿಕೊಳ್ಳಬಹುದು ಪಂಂಜಾಬ್ ಅಥವಾ ಅಸ್ಸಾಂನಿಂದ ಕರ್ನಾಟಕಕ್ಕೆ ಸರಕು ತರಿಸುವುದು ಈಗಿನ ಕಾಲದಲ್ಲಿ ಕಷ್ಟದ ಕೆಲಸವಲ್ಲ. ಹೆಚ್ಚೆಂದರೆ 15ರಿಂದ 20 ದಿನ ಸಾಕು. ಆದರೆ ಮಹಾರಾಷ್ಟ್ರದ ನಾಸಿಕ್‌ನಿಂದ ಕೇರಳ ತಲುಪಲು ಈ ಟ್ರಕ್ ತೆಗೆದುಕೊಂಡ ಸಮಯ ಒಂದು ವರ್ಷ.

ಟ್ರಕ್ ಚಾಲಕರು, ರೈತರ ಆರೋಗ್ಯ ಕಾಳಜಿ; ಸಮೀಕ್ಷೆಯಿಂದ ಬಹಿರಂಗ!

ಕೊನೆಗೂ ತಲುಪಿತಲ್ಲ ಎಂದು ನಿಟ್ಟುಸಿರು ಬಿಡಬೇಡಿ. ಕಾರಣ ಟ್ರಕ್ ಇನ್ನು ತಲುಪಿಲ್ಲ. ಈಗಷ್ಟೇ ಕೇರಳ ಪ್ರವೇಶಿಸಿದೆ. ಈ ಟ್ರಕ್ 1,700 ಕಿಲೋಮೀಟರ್ ದೂರ ಪ್ರಯಾಣಕ್ಕೆ ಒಂದು ವರ್ಷ ತೆಗೆದುಕೊಳ್ಳಲು ಕಾರಣವಿದೆ. ಈ ಟ್ರಕ್‌ 70 ಟನ್ ಭಾರ ತುಂಬಿದ ಏರೋಸ್ಪೇಸ್ ಆಟೋಕ್ಲೇವ್ ಹೊತ್ತು ನಾಸಿಕ್‌ನಿಂದ ಕೇರಳಕ್ಕೆ ಪ್ರಯಾಣ ಬೆಳೆಸಿದೆ. ಕೇರಳದ ಬಾಹ್ಯಾಕಾಶ ಕೇಂದ್ರಕ್ಕೆ ಈ ಸರಕು ಸಾಗಿಸಬೇಕಾಗಿದೆ.

ಟ್ರಕ್ ಚಾಲಕರಿಗೆ ಆಹಾರ, ವೈದ್ಯಕೀಯ ನೆರವು ಒದಗಿಸಿದ ಟಾಟಾ ಮೋಟಾರ್ಸ್!

ಈ ಟ್ರಕ್ ಗಾತ್ರ ಹೇಳಿದರೆ ಇದರ ವೇಗದ ಸ್ಪಷ್ಟ ಅರಿವು ನಿಮಗೆ ಸಿಗಲಿದೆ. ಈ ಟ್ರಕ್‌ಗೆ ಒಟ್ಟು 74 ಚಕ್ರಗಳಿವೆ. ಜೊತೆಗೆ 70 ಟನ್ ಭಾರದ ಸರಕು ಕೂಡ ಈ ಟ್ರಕ್ ಮೇಲಿದೆ. ಹೀಗಾಗಿ ಪ್ರತಿ ದಿನ ಈ ಟ್ರಕ್ 5 ರಿಂದ 6 ಕಿ.ಮೀ ಮಾತ್ರ ಪ್ರಯಾಣಿಸುತ್ತದೆ. ಒಂದು ದಿನ 5 ಕಿ.ಮೀ ಪ್ರಯಾಣದ ಬಳಿಕ ಸಂಪೂರ್ಣ ವಿಶ್ರಾಂತಿ ಅಂದುಕೊಂಡರೆ ತಪ್ಪು. ಈ ಟ್ರಕ್ 5 ಕಿ.ಮೀ ಪ್ರಯಾಣಿಸಲು ಒಂದು ದಿನ ತೆಗೆದುಕೊಳ್ಳುತ್ತದೆ.

32 ಮಂದಿ ತಂಡ ಈ ಟ್ರಕ್ ಜೊತೆ ಪ್ರಯಾಣ ಬೆಳೆಸಿದೆ. ಇವರು ಈ ಟ್ರಕ್ ಸಾಗುವ ದಾರಿಯಲ್ಲಿ ಯಾವುದೇ ಅಡೆ ತಡೆಗಳಿದ್ದರೆ ಅದನ್ನು ಸರಿಪಡಿಸಿ ಟ್ರಕ್ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಾರೆ. 2019ರ ಜುಲೈ ತಿಂಗಳಲ್ಲಿ ನಾಸಿಕ್‌ನಿಂದ ಹೊರಟ ಈ ಟ್ರಕ್ ಈಗಷ್ಟೇ ಕೇರಳ ತಲುಪಿದೆ. ಇನ್ನು ಕೇರಳದ ತಿರುವನಂತಪುರಂನಲ್ಲಿರುವ  ಬಾಹ್ಯಕಾಷ ತಲುಪಲು ಮತ್ತಷ್ಟು ಸಮಯ ತೆಗೆದುಕೊಳ್ಳಲಿದೆ. ಆದರೆ ಸರಕನ್ನು ಸುರಕ್ಷಿತವಾಗಿ, ಯಾವುದೇ ಹಾನಿಯಾಗದಂತೆ ಸಾಗಿಸಲಾಗುತ್ತಿದೆ. ಹೀಗಾಗಿ ಅತೀವ ಎಚ್ಚರಿಕೆ ವಹಿಸಲಾಗುತ್ತಿದೆ.