ಬೆಂಗಳೂರು(ನ.06): ಭಾರತದಲ್ಲಿ ಮೋಡಿ ಮಾಡಲು ಮತ್ತೆ ಜಾವಾ ಮೋಟಾರ್ ಬೈಕ್ ಬಿಡುಗಡೆಯಾಗುತ್ತಿದೆ. ನವೆಂಬರ್ 15 ರಂದು ಜಾವಾ ಬೈಕ್ ಅನಾವರಣಗೊಳ್ಳಲಿದೆ. ಮಹೀಂದ್ರ ಕಂಪೆನಿ ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ ಇದೀಗ ಜಾವಾ ಬೈಕ್ ಬಿಡುಗಡೆಗೆ ಎಲ್ಲಾ ತಯಾರಿ ಮಾಡಿಕೊಂಡಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ-ಜಾವಾ ಬಿಡುಗಡೆ ಮಾಡಲಿದೆ ಹೊಸ 3 ಬೈಕ್ !

ಬಹುನಿರೀಕ್ಷಿತ ಜಾವಾ ಬೈಕ್ ಬಿಡುಗಡೆಗೂ ಮುನ್ನ ಫೋಟೋ ಲೀಕ್ ಆಗಿದೆ. ಬೈಕ್ ಮೇಲೆ ಸಿಬ್ಬಂಧಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋ ಇದೀಗ ಬೈಕ್ ಪ್ರಿಯರ ಕುತೂಹಲ ಇಮ್ಮಡಿಗೊಳಿಸಿದೆ. ಇಷ್ಟೇ ಅಲ್ಲ ಇತರ ಬ್ರ್ಯಾಂಡ್ ಬೈಕ್‌ಗಳಿಗೆ ಆತಂಕ ಹುಟ್ಟಿಸಿದೆ.

ಈಗಾಗಲೇ ಜಾವಾ ರೋಡ್ ಟೆಸ್ಟ್ ಪೂರ್ಣಗೊಳಿಸಿತ್ತು. ಯಶಸ್ವಿ ರೋಡ್ ಟೆಸ್ಟ್‌  ಬಳಿಕ ಇದೀಗ ಜಾವಾ ಫೋಟೋ ಕೂಡ ರಿವೀಲ್ ಆಗಿದೆ. ರಾಯಲ್ ಎನ್‌ಪೀಲ್ಡ್ ಕ್ಲಾಸಿಕ್ 350 ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಬಲ್ಲ ಜಾವಾ, ದಾಖಲೆ ಬರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಬಿಡುಗಡೆಗೂ ಮುನ್ನ ಜಾವಾ ಬೈಕ್ ರೋಡ್ ಟೆಸ್ಟ್-ಹೇಗಿದೆ ಪರ್ಫಾಮೆನ್ಸ್?

293 ಸಿಸಿ ಎಂಜಿನ್ ಹೊಂದಿರುವ ನೂತನ ಜಾವಾ ಬೈಕ್, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿದೆ. 27 ಬಿಹೆಚ್‌ಪಿ ಪವರ್ ಹಾಗೂ 28 ಎನಎಂ ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು 6 ಸ್ಪೀಡ್ ಗೇರ್ ಹೊಂದಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಹಿಂದಿಕ್ಕಿಲು ಮತ್ತೆ ಬರುತ್ತಿದೆ ಜಾವಾ ಬೈಕ್

ಆಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಜಾವಾ ಬೈಕ್ ಬಿಡುಗಡೆಯಾಗಲಿದೆ. ಹಿಂದಿನ ಜಾವಾ ಬೈಕ್ ವಿನ್ಯಾಸಕ್ಕೆ ಯಾವುದೇ ಧಕ್ಕೆ ಬರದ ರೀತಿಯಲ್ಲಿ ಬಿಡುಗಡೆ ಮಾಡಲು ಮಹೀಂದ್ರ ಸಜ್ಜಾಗಿದೆ.