ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗೆ ಪೈಪೋಟಿ ನೀಡಲು ಇದೀಗ ಜಾವಾ ನೂತನ 3 ಬೈಕ್‌ಗಳನ್ನ ನವೆಂಬರ್‌ನಲ್ಲಿ ಅನಾವರಣ ಮಾಡುತ್ತಿದೆ. ಹಳೇ ರೆಟ್ರೋ ಶೈಲಿಯಲ್ಲಿರುವ ಈ ಬೈಕ್ ಮತ್ತೆ ಭಾರತೀಯರನ್ನ ಮೋಡಿ ಮಾಡೋದರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಗಳೂರು(ಅ.14): ಭಾರತದಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಮತ್ತೆ ಪೈಪೋಟಿ ನೀಡಿಲು ಜಾವಾ ಮೋಟಾರ್‌ ಬೈಕ್ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ನವೆಂಬರ್ 15 ರಂದು ಜಾವಾ ನೂತನ 293 ಸಿಸಿ ಬೈಕ್ ಅನಾವರಣ ಮಾಡಲಿದೆ. 

ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿರುವ ಜಾವಾ ಮೋಟಾರ್‌ಸೈಕಲ್ ಇದೀಗ ಹೊಸ 3 ಬೈಕ್ ಅನಾವರಣ ಮಾಡಲು ಸಜ್ಜಾಗಿದೆ. ಕ್ಲಾಸಿಕ್ ಲೆಜೆಂಡ್ 250 ಸಿಸಿ ಬೈಕ್ ಬಿಡುಗಡೆ ಮಾಡಲಿದೆ. ಈ ಮೂಲರ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಭಾರಿ ಪೈಪೋಟಿ ನೀಡಲಿದೆ.

ಜಾವಾ ಮೋಟರ್‌ಸೈಕಲ್ ನೂತನ ಬೈಕ್‌ಗಳು ನವೆಂಬರ್ 15 ರಂದೇ ಅನಾವರಣಗೊಳ್ಳಲಿದೆ. ಈ ಮೂಲಕ ಭಾರತದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಮಾರುಕಟ್ಟೆಗೂ ಪ್ರವೇಶಿಸಲಿದೆ.

ಆಧುನಿಕ ತಂತ್ರಜ್ಞಾನ, ಬಲಿಷ್ಠ ಎಂಜಿನ್ ಹೊಂದಿರುವ ನೂತನ ಜಾವಾ ಬೈಕ್ ಹಳೇ ರೆಟ್ರೋ ಶೈಲಿಯಲ್ಲೇ ರಸ್ತೆಗಿಳಿಯಲಿದೆ. ಹೀಗಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ ಜೊತೆ ಸ್ಪರ್ಧೆ ಎರ್ಪಡಲಿದೆ. ಜಾವಾ ಮೋಟರ್‌ಸೈಕಲ್ ಕಂಪೆನಿಯ ಶೇಕಡಾ 60 ರಷ್ಟು ಶೇರು ಹೊಂದಿದೆ. ಆದರೆ ಮಹೀಂದ್ರ ಮೋಟಾರ್ಸ್ ಜಾವಾ ಬೈಕ್‌ನ್ನ ಭಾರತ ಹೊರತು ಪಡಿಸಿ ಏಷ್ಯಾ ರಾಷ್ಟ್ರಗಳಲ್ಲಿ ಮಾರಾಟ ಮಾಡುವ ಹಕ್ಕನ್ನ ಪಡೆದಿಲ್ಲ.