ಹಿಂದೂ ಸಂಸ್ಕೃತಿಯಲ್ಲಿ ಊಟಕ್ಕೊಂದು ಕ್ರಮವಿದೆ. ಮೊದಲಿಗೆ ಖಾರ ಅಥವಾ ಸಂಬಾರ ಪದಾರ್ಥಗಳು ಹೆಚ್ಚಿರುವ ತಿನಿಸುಗಳನ್ನು ಬಡಿಸಲಾಗುತ್ತದೆ. ಪಲ್ಯ, ಚಟ್ನಿ, ಸಾಂಬಾರು ಇತ್ಯಾದಿಗಳೆಲ್ಲ ಮುಗಿದ ಮೇಲೆ ಕೊನೆಯಲ್ಲಿ ಸಿಹಿ ಬಡಿಸುತ್ತಾರೆ. ಅಥವಾ ಹಾಲು, ಮೊಸರನ್ನು ಬಡಿಸುತ್ತಾರೆ. ಒಟ್ಟಿನಲ್ಲಿ ಊಟದ ಕೊನೆಯಲ್ಲಿ ಸ್ವೀಟ್ ಹಾಗೂ ಮೊಸರು ತಿನ್ನಬೇಕು ಎಂಬುದು ಕ್ರಮ.

ತಾಜ್‌ಮಹಲ್ ಮನೆಯಲ್ಲಿದ್ದರೆ ಅಶುಭ...!

ಏಕೆ ಈ ಕ್ರಮವಿದೆ? ಊಟದ ಕೊನೆಯಲ್ಲೇ ಏಕೆ ಸಿಹಿ ತಿನ್ನಬೇಕು? ನಮ್ಮ ಮೆದುಳಿನ ಹೈಪೋಥಲಾಮಸ್ ಎನ್ನುವ ಭಾಗದಲ್ಲಿ ಕ್ಷುದ್ ಕೇಂದ್ರ (ಹಂಗರ್ ಸೆಂಟರ್) ಮತ್ತು ತೃಪ್ತಿಕೇಂದ್ರ (ಸ್ಯಾಟಿಟಿ ಸೆಂಟರ್) ಇದೆ. ಕ್ಷುದ್ ಕೇಂದ್ರವು ಯಾವಾಗಲೂ ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣವನ್ನು ಗಮನಿಸುತ್ತಿರುತ್ತದೆ. ಅದು ಕಡಿಮೆಯಾಗುತ್ತಿದೆ ಎನಿಸಿದಾಗ ಕ್ಷುದ್ ಕೇಂದ್ರವು ಜಾಗೃತವಾಗಿ 'ಹಸಿವಾಗುತ್ತಿದೆ' ಎನ್ನುವ ಸಂದೇಶವನ್ನು ಹಿಂದುಳಿನ ಇತರ ಭಾಗಗಳಿಗೆ, ತನ್ಮೂಲಕ ಶರೀರದ ಜೀರ್ಣಾಂಗಗಳಿಗೆ ಹಾಗೂ ಪಂಚೇಂದ್ರಿಯಗಳಿಗೆ ತಿಳಿಸುತ್ತದೆ. ಆಗ ನಾವು ಊಟಕ್ಕೆ ಕುಳಿತುಕೊಳ್ಳುತ್ತೇವೆ. ಆರಂಭದಲ್ಲೇ ಸಿಹಿ ತಿನ್ನುತ್ತೇವೆ ಎಂದು ಭಾವಿಸೋಣ. ಸಿಹಿ ಪದಾರ್ಥವು (ಗ್ಲೂಕೋಸ್) ಹೆಚ್ಚಿನ ಜೀರ್ಣಕ್ರಿಯೆಗೆ ಒಳಗಾಗದೇ ನೇರವಾಗಿ ನಾಲಿಗೆಯಡಿಯ ರಕ್ತನಾಳ ಜಾಲದ ಮೂಲಕ ರಕ್ತಪ್ರವಾಹವನ್ನು ಸೇರುತ್ತದೆ. ಈ ಹೆಚ್ಚುವರಿ ಗ್ಲೂಕೋಸ್ ತೃಪ್ತಿ ಕೇಂದ್ರಕ್ಕೆ 'ಹೊಟ್ಟೆ ತುಂಬಿದೆ' ಎಂದು ತಪ್ಪು ಮಾಹಿತಿ ನೀಡುತ್ತದೆ. ಆಗ ಊಟ ಸಾಕೆನಿಸುತ್ತದೆ. ಹೀಗಾಗದಿರಲು ಸಿಹಿಯನ್ನು ಊಟದ ಕೊನೆಯಲ್ಲಿ ತಿನ್ನುವುದು ಸೂಕ್ತ. ಮನೆಗೆ ಬಂದ ಅತಿಥಿ ಹೆಚ್ಚು ಊಟ ಮಾಡಬಾರದು ಎನ್ನುವ ಇರಾದೆ ಇದ್ದಲ್ಲಿ, ಆರಂಭದಲ್ಲಿಯೇ ಎರಡು ಸಿಹಿಯನ್ನು ಬಡಿಸಿ! ಆತ ಕಡಿಮೆ ಊಟ ಮಾಡುತ್ತಾನೆ.

ತಾಜ್‌ಮಹಲ್ ಮನೆಯಲ್ಲಿದ್ದರೆ ಅಶುಭ...!

ರಕ್ತದಲ್ಲಿ ಅನಗತ್ಯವಾಗಿ ಗ್ಲೂಕೋಸ್ ಪ್ರಮಾಣ ಹೆಚ್ಚದೇ ಇರಲು ಹಾಗೂ ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ಆಹಾರವನ್ನು ಸರಿಯಾಗಿ ಊಟ ಮಾಡಲು ಊಟದ ಕೊನೆಯಲ್ಲೇ ಸಿಹಿ ತಿನ್ನಬೇಕು.