ತಾಜ್‌ಮಹಲ್ ಮನೆಯಲ್ಲಿದ್ದರೆ ಅಶುಭ...!
ಮನೆಯಲ್ಲಿರುವ ವಸ್ತುಗಳು ನಮ್ಮ ಮನಸ್ಸನ್ನು ವಿಕಸಿತಗೊಳಿಸುವಂತೆ ಇರಬೇಕು. ಮನೆಯ ನೆಗಟಿವ್ ಎನರ್ಜಿ ಹೋಗಿಸಿ, ಮನಸ್ಸನ್ನು ಪ್ರಫುಲ್ಲಗೊಳಿಸುವಂಥದ್ದಾಗಿರಬೇಕು. ಆದರೆ, ಕೆಲವೊಂದು ಮನೆಯಲ್ಲಿದ್ದರೆ ಅಶುಭ. ಯಾವವು?
ಮನೆಯಲ್ಲಿಡುವ ಕೆಲವೊಂದು ವಸ್ತುಗಳು ಸಂಪತ್ತು, ಶಾಂತಿ ತಂದರೆ, ಇನ್ನು ಕೆಲವೊಂದು ಮನೆಗೆ ದೋಷವನ್ನು ತರುತ್ತವೆ. ಅಂತಹ ವಸ್ತುಗಳನ್ನು ಮನೆಯಲ್ಲಿ ಇಡದೆ ಇದ್ದರೆ ಉತ್ತಮ.
ಕಳ್ಳತನ ತಡೆಯಲು ಇಲ್ಲಿವೆ ವಾಸ್ತು ಟಿಪ್ಸ್....
- ದೇವರ ತುಂಡಾದ ಮೂರ್ತಿಯನ್ನು ಯಾವತ್ತೂ ಮನೆಯಲ್ಲಿ ಇಡಬಾರದೆಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.
- ನಟರಾಜ ಎಂದರೆ ನೃತ್ಯ ಮಾಡುತ್ತಿರುವ ಶಿವ. ಈ ಮೂರ್ತಿಯನ್ನು ನೃತ್ಯ ಶಾಲೆಗಳಲ್ಲಿ ಇಡುತ್ತಾರೆ. ಆದರೆ ಇದನ್ನು ಮನೆಯಲ್ಲಿ ಇತ್ತು ಪೂಜಿಸಬಾರದು. ನಟರಾಜ ತಾಂಡವ ನೃತ್ಯ ಸಂಹಾರ ಮಾಡುವುದರ ಪ್ರತೀಕ. ಅಂದರೆ ಕೆಟ್ಟದಾದಾಗ ಶಿವ ಕೋಪಗೊಂಡು ಮಾಡುವ ನೃತ್ಯ. ಇದು ವಿನಾಶದ ಸೂಚನೆ. ಆದುದರಿಂದ ಇದು ಮನೆಯಲ್ಲಿ ಇರಬಾರದು.
- ತಾಜ್‌ಮಹಲ್ ಅನ್ನು ಪ್ರೇಮ ಸೌಧ ಎಂದು ಕರೆದರೂ ಅದೊಂದು ಸಮಾಧಿ. ಇದನ್ನು ಮನೆಯಲ್ಲಿ ಇಡೋದರಿಂದ ನೆಗೆಟಿವಿಟಿ ಹರಡುತ್ತದೆ.
- ಮನೆಯಲ್ಲಿ ಯಾವುದೇ ಕ್ರೂರ ಪ್ರಾಣಿಯ ಚಿತ್ರ ಅಥವಾ ಮೂರ್ತಿ ಇಡಬಾರದು . ಇದು ವ್ಯಾಗ್ರತೆಯ ಸಂಕೇತವಾಗಿದೆ. ಇದರಿಂದ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.
- ಮನೆಯಲ್ಲಿ ಮುಳುಗುತ್ತಿರುವ ನೌಕೆಯ ಫೋಟೋ ಅಥವಾ ಶೋಪೀಸ್ ಇದ್ದರೂ ಮನಸ್ಸು, ಸಂಬಂಧದ ಮೇಲೆ ದುಷ್ಪರಿಣಾಮ ಬೀರುತ್ತದೆ.