ಶೇಕ್‌ಹ್ಯಾಂಡಿಗಿಂತ ನಮಸ್ಕಾರ ಒಳ್ಳೇದು, ಏಕೆ?
ಹಳೇ ಆಚಾರಗಳಿಗೆ ತನ್ನದೇ ಆದ ಮಹತ್ವವಿದೆ. ಅಂಥ ಅನೇಕ ವಿಚಾರಗಳಿಗೆ ವೈಜ್ಞಾನಿಕ ಕಾರಣವೂ ಇದೆ. ಹೀಗೆ ಆಚಾರಗಳಿಗೆ ವೈಜ್ಞಾನಿಕ ಮಹತ್ವ ಅರಿಯುವ ಯತ್ನವಿದು.
ಯಾರಾದರೂ ಎದುರಿಗೆ ಬಂದಾಗ ಎರಡೂ ಕೈ ಮುಗಿದು ನಮಸ್ಕಾರ ಮಾಡುವುದು ನಮಗೀಗ ಹೆಚ್ಚುಕಡಿಮೆ ಮರೆತೇ ಹೋಗಿದೆ. ಜನರನ್ನು ಮಾತನಾಡಿಸುವಾಗ ಮತ್ತು ಅವರಿಗೆ ವಿದಾಯ ಹೇಳುವಾಗ ಹಾಯ್ ಅಥವಾ ಬಾಯ್ ಎನ್ನುತ್ತಾ ಶೇಕ್‌ಹ್ಯಾಂಡ್ ಮಾಡುತ್ತೇವೆ. ನಮಸ್ಕಾರ ಮಾಡುವುದು ಭಾರತೀಯ ಸಂಸ್ಕೃತಿ, ಶೇಕ್‌ಹ್ಯಾಂಡ್ ಪಾಶ್ಚಾತ್ಯ ಸಂಸ್ಕೃತಿ ಎಂಬುದು ನಮಗೆ ಗೊತ್ತಿದ್ದರೂ, ಎಲ್ಲಾ ವಿಷಯಗಳಲ್ಲೂ ನಾವು ಇಂಗ್ಲಿಷ್ ಸಂಸ್ಕೃತಿಗೆ ಮಾರುಹೋಗಿರುವಂತೆ ಶೇಕ್‌ಹ್ಯಾಂಡನ್ನೂ ಒಪ್ಪಿಕೊಂಡಿದ್ದೇವೆ.
ಕೈ ಮುಗಿಯುವುದು ಓಲ್ಡ್ ಫ್ಯಾಷನ್, ಹ್ಯಾಂಡ್‌ಶೇಕ್ ಆಧುನಿಕರ ಲಕ್ಷಣ ಎಂಬ ಭ್ರಮೆ ನಮ್ಮ ತಲೆಗೆ ಹೊಕ್ಕಿದೆ.
ದುಡ್ಡು ಬೇಕಂದ್ರೆ ಜೇಬಲ್ಲಿ ಇವನ್ನ ಇಡ್ಬೇಡಿ...
ಕೈ ಮುಗಿಯುವುದರಿಂದ ಇರುವ ಲಾಭದ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಸರಿಯಾಗಿ ಕೈಮುಗಿಯುವುದು ಅಂದರೆ ನಮ್ಮ ಎರಡೂ ಕೈಗಳ ಹತ್ತು ಬೆರಳುಗಳ ತುದಿಗಳು ಪರಸ್ಪರ ತಾಕಬೇಕು. ಆಗ ಕೈ ಬೆರಳ ತುದಿ ಮೇಲೆ ಒತ್ತಡ ಬೀಳುತ್ತದೆ. ಅದರಿಂದ ಅಲ್ಲಿರುವ ನರಗಳು ಚುರುಕಾಗುತ್ತವೆ. ಆ ನರಗಳು ಕಿವಿ, ಕಣ್ಣು, ಮೆದುಳಿಗೆ ಕನೆಕ್ಟ್ ಆಗಿರುವುದರಿಂದ ಅವು ಆಯಾ ಅಂಗಗಳನ್ನೂ ಚುರುಕುಗೊಳಿಸುತ್ತವೆ. ಅದರಿಂದ, ನಾವು ಯಾರನ್ನು ಮಾತನಾಡಿಸುತ್ತಿದ್ದೇವೋ ಅವರನ್ನು ಬಹುಕಾಲದವರೆಗೆ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳಲು ನಮಗೆ ಸಹಕರಿಸುವುದು ಆತನ ನೋಟ, ಆತನ ಮಾತು ಹಾಗೂ ಆತನ ಚಲನವಲನಗಳಲ್ಲವೇ? ಕೈಮುಗಿದಾಗ ಚುರುಕಾಗುವ ನಮ್ಮ ಕಣ್ಣು, ಕಿವಿ, ಮೆದುಳುಗಳು ತಮ್ಮ ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತವೆ.
ದೇವರ ಪೂಜೆಗೆ ಹೂವುಗಳನ್ನೇಕೆ ಬಳಸುತ್ತೇವೆ?
ಇನ್ನು, ಹ್ಯಾಂಡ್‌ಶೇಕ್ ಮಾಡಿದಾಗ ಮತ್ತೊಬ್ಬರ ಕೈಯಲ್ಲಿರಬಹುದಾದ ರೋಗಾಣುಗಳು ನಮ್ಮ ಕೈಗೆ ಅಂಟಿಕೊಳ್ಳುವುದುಂಟು.ಅಸ್ವಚ್ಛ ಕೈಗಳಿಂದ ಭೇದಿ, ಅತಿಸಾರ, ಆಮಶಂಕೆ, ಕಾಲರ, ಟೈಫಾಯ್ಡ್, ಕಾಮಾಲೆ (ಹೆಪಟೈಟಿಸ್-ಎ) ಸಾರ್ಸ್, ಇನ್‌ಫ್ಲುಯೆಂಜ ರೋಗಗಳಿಗೆ ಕಾರಣವಾಗುವ ಕೀಟಾಣುಗಳು ಹರಡಬಹುದು. ಕರುಳು ಹುಳುಗಳ ಮೊಟ್ಟೆಗಳೂ ಹೀಗೆ ಹರಡುತ್ತವೆ. ಒಬ್ಬರ ಕೈಯನ್ನು ಕುಲುಕಿ, ಅದೇ ಕೈಯಿಂದ ಇತರರ ಕೈ ಕುಲುಕಿದಾಗ ನಾವು ರೋಗಗಳನ್ನು ಹಂಚುತ್ತಿರುತ್ತೇವೆ. ಹಾಗಾಗಿ ಕೈಮುಗಿಯುವುದು ವೈಜ್ಞಾನಿಕವಾಗಿಯೂ ಒಳ್ಳೆಯದು ಹಾಗೂ ಬಹಳ ಸೇಫ್.