ದೇವರ ಪೂಜೆಗೆ ಹೂವುಗಳನ್ನೇಕೆ ಬಳಸುತ್ತೇವೆ?

ಹಳೇ ಆಚಾರಗಳಿಗೆ ತನ್ನದೇ ಆದ ಮಹತ್ವವಿದೆ. ಅಂಥ ಅನೇಕ ವಿಚಾರಗಳಿಗೆ ವೈಜ್ಞಾನಿಕ ಕಾರಣವೂ ಇದೆ. ಹೀಗೆ ಆಚಾರಗಳಿಗೆ ವೈಜ್ಞಾನಿಕ ಮಹತ್ವ ಅರಿಯುವ ಯತ್ನವಿದು. 

Why we offer pooja to god with flowers

ಅನಾದಿ ಕಾಲದಿಂದಲೂ ದೇವರನ್ನು ಪೂಜಿಸಲು ಹೂವನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲೊಂದೇ ಅಲ್ಲ, ಜಗತ್ತಿನ ಬಹುತೇಕ ಎಲ್ಲ ಧರ್ಮಗಳಲ್ಲೂ ಪೂಜೆಗೆ ಹೂವು ಬಳಸುತ್ತಾರೆ. ದೇವರ ಮೂರ್ತಿಗಳಿಲ್ಲದ ಧರ್ಮಗಳಲ್ಲೂ ಪೂಜೆಯಲ್ಲಿ ಹೂವು ಮಾತ್ರ ಇದ್ದೇ ಇರುತ್ತದೆ. 

ಹೂವುಗಳು ಪ್ರಕೃತಿಯಲ್ಲಿ ಸಿಗುವ ಅತ್ಯಂತ ಸುಂದರ ವಸ್ತುಗಳು. ದೇವರನ್ನು ಮೆಚ್ಚಿಸಲು ಉತ್ಕೃಷ್ಟವಾದದ್ದನ್ನೇ ಆತನಿಗೆ ನೀಡಬೇಕಲ್ಲವೆ? ಎಲ್ಲ ಧರ್ಮಗಳೂ ಪ್ರಕೃತಿಯನ್ನು ದೇವರೆಂದೇ ಪರಿಗಣಿಸುವುದರಿಂದ, ಪ್ರಕೃತಿದತ್ತವಾದ ಪುಷ್ಪಗಳು ದೇವರನ್ನು ಆರ್ಕಸುತ್ತವೆ ಎಂದೂ ನಂಬುತ್ತೇವೆ. ಪೂಜೆಯ ವೇಳೆ ಭೂಮಿಗಿಳಿದು ಬರುವ ದೇವತೆಗಳು ಯಾವ ಸ್ಥಳದಿಂದ ಸುವಾಸನೆ ಬರುತ್ತಿದೆಯೋ, ಯಾವ ಸ್ಥಳ ಅತ್ಯಂತ ಸುಂದರವಾಗಿದೆಯೋ ಅಲ್ಲಿಗೇ ಬರುತ್ತಾರೆ ಎಂಬ ನಂಬಿಕೆ ಆಸ್ತಿಕರಲ್ಲಿದೆ. ಹೂವುಗಳನ್ನು ಎಲ್ಲಿ ಬಳಸಿದರೂ ಆ ಸ್ಥಳ ಸುಂದರವಾಗಿಯೇ ಕಾಣಿಸುತ್ತದೆ ಮತ್ತು ಅಲ್ಲಿ ಸುವಾಸನೆ ಹರಡಿರುತ್ತದೆ. ಒಟ್ಟಿನಲ್ಲಿ ಪೂಜಾಸ್ಥಳ ಪರಿಮಳದಿಂದ ಕೂಡಿರಬೇಕು, ಭಕ್ತನ ಮನಸ್ಸಿನಲ್ಲಿ ಏಕಾಗ್ರತೆ ಮೂಡಿಸಬೇಕು, ಮನಸ್ಸನ್ನು ಪ್ರಶಾಂತಗೊಳಿಸಬೇಕು ಮತ್ತು ಬೇಡದ ಯೋಚನೆಗಳನ್ನು ಮನಸ್ಸಿನಿಂದ ಹೊರಹಾಕಬೇಕು ಎಂಬುದು ಪೂಜೆಗೆ ಹೂವುಗಳನ್ನು ಬಳಸುವುದಕ್ಕೆ ಮುಖ್ಯ ಕಾರಣ.

ಆಕಾರವಿಲ್ಲದ ದೇವರಿಗೆ ಮೂರ್ತಿ ಪೂಜೆ ಏಕೆ?

ಎಲ್ಲ ಧರ್ಮಗಳಲ್ಲೂ ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಹೂವುಗಳನ್ನು ಯಥೇಚ್ಛವಾಗಿ ಬಳಸುತ್ತಾರೆ. ಹೂವುಗಳು ಅತಿಥಿಗಳನ್ನು ಮುದಗೊಳಿಸುತ್ತವೆ ಎಂಬ ನಂಬಿಕೆಯಂತೆಯೇ ಅವು ದೇವರನ್ನು ಮುದಗೊಳಿಸುತ್ತವೆ ಎಂಬ ನಂಬಿಕೆಯೂ ಇದೆ. ಶುಭಕಾರ್ಯಗಳಲ್ಲಿ ತೋರಣ ಕಟ್ಟುವುದು, ಪೂಜೆಯಲ್ಲಿ ಮಾವಿನ ಎಲೆಗಳನ್ನು ಬಳಸುವುದೂ ಇದೇ ಕಾರಣಕ್ಕೆ. ಮಾಹಿನ ಎಲೆಯ ಪರಿಮಳ ಆ ಸ್ಥಳವನ್ನು ಶುಚಿಗೊಳಿಸುತ್ತದೆ. ಕೆಲವು ಪರಿಮಳಗಳಿಗೆ ವಾತಾವರಣದಲ್ಲಿರುವ ಮಾಲಿನ್ಯವನ್ನು ಹೀರಿಕೊಳ್ಳುವ ಶಕ್ತಿಯೂ ಇದೆ. ಸುಗಂಧಿತ ವಸ್ತುಗಳು ಧನಾತ್ಮಕ ಶಕ್ತಿಯನ್ನು ಆರ್ಕಸುತ್ತವೆ ಎಂದು ವಿಜ್ಞಾನವೂ ಹೇಳುತ್ತದೆ.ವಾಸ್ತವದಲ್ಲಿ ಹೂವನ್ನು ದೇವರಿಗೆ ಅರ್ಪಿಸುವುದು ಎಂದರೆ 'ಬಲಿ'ಯನ್ನು ಅರ್ಪಿಸುವುದಕ್ಕೆ ಸಮ.

ವಾರಾಣಸಿಯಲ್ಲಿ ನಡೆಯೋ ಗಂಗಾರತಿಗೇಕಿಷ್ಟು ಮಹತ್ವ?

ಹೂವು ಎಂದರೆ ಭ್ರೂಣ. ಇದು ಭಹಿಷ್ಯದ ಸಸ್ಯ. ದೇವರಿಗೆ ಬಲಿ ಪ್ರಿಯವಲ್ಲವೇ!

Latest Videos
Follow Us:
Download App:
  • android
  • ios