ತಂದೆ-ತಾಯಿಯ ಒಪ್ಪಿಗೆಯಿಲ್ಲದೆ ಓದಿಹೋಗಿ ವಿವಾಹವಾದವರು ಪೌರಾಣಿಕ ಕತೆಗಳಲ್ಲೂ ಇದ್ದಾರೆ! ಅಂಥ ವ್ಯಕ್ತಿಗಳ ಕಥೆಗಳನ್ನು ಇಲ್ಲಿ ನೀವು ಓದಬಹುದು. ನಮ್ಮ ಆದರ್ಶ ಪುರುಷ ಕೃಷ್ಣನೇ ಹಾಗೆ ಮಾಡಿದವನು! 

ತಂದೆ- ತಾಯಿ ಒಪ್ಪದಿದ್ದರೆ ಓಡಿ ಹೋಗಿ ಮದುವೆಯಾಗುವುದು ತಪ್ಪು ಅಲ್ಲವೇ ಅಲ್ಲ! ಯಾಕೆ ಗೊತ್ತೇ? ನಮ್ಮ ಪುರಾಣಗಳಲ್ಲಿ, ಆದರ್ಶ ಪುರುಷರು ಎಂದು ಹೆಸರಿಸಲಾಗುವ ಮಹಾನ್‌ ವ್ಯಕ್ತಿಗಳೇ ಹೀಗೆ ಮಾಡಿದ್ದಾರೆ. ಇದಕ್ಕೆ ಹಲವಾರು ಉದಾಹರಣೆ ಕೊಡಬಹುದು. ಮಹಾಭಾರತದಲ್ಲೂ ತಾನು ಪ್ರೀತಿಸಿದವರನ್ನೇ ಕೈಹಿಡಿಯಬೇಕೆಂದು ಪ್ರೀತಿಸಿದ ಹುಡುಗಿಯನ್ನೇ ಅಪಹರಿಸಿಕೊಂಡು ಹೋಗಿ ವಿವಾಹವಾದ ಮಹಾನ್‌ ಯೋಧರು ಕೂಡ ಇದ್ದಾರೆ. ಯಾರು ಅವರು?

1) ದುಷ್ಯಂತ- ಶಕುಂತಳೆ

ಅಕ್ಷರಾರ್ಥದಲ್ಲಿ ಹೇಳುವುದಾದರೆ, ಇವರು ಓಡಿಹೋದವರಲ್ಲ. ಆದರೆ ಅಪ್ಪ- ಅಮ್ಮನ ಒಪ್ಪಿಗೆಯಿಲ್ಲದೆ ಮದುವೆಯಾದವರು. ಬೇಟೆಗಾಗಿ ಬಂದ ಚಂದ್ರವಂಶದ ದೊರೆ ದುಷ್ಯಂತ, ವನದಲ್ಲಿ ಕಣ್ವ ಮಹರ್ಷಿಗಳ ಆಶ್ರಮದಲ್ಲಿ ಗುರುವಿನ ಸಾಕುಪುತ್ರಿ ಶಕುಂತಲೆಯನ್ನು ನೋಡುತ್ತಾನೆ. ಇಬ್ಬರೂ ಪರಸ್ಪರ ಅನುರಕ್ತರಾಗುತ್ತಾರೆ. ನನ್ನನ್ನು ಮದುವೆಯಾಗು ಎಂದು ದುಷ್ಯಂತ ಕೇಳುತ್ತಾನೆ. ಆದರೆ ಆಗ ತಂದೆ ಕಣ್ವ ಮಹರ್ಷಿ ಪಾತಾಳಕ್ಕೆ ಹೋಗಿದ್ದುದರಿಂದ, ಅವರ ಅಪ್ಪಣೆಯಿಲ್ಲದೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಶಕುಂತಳೆ ಹೇಳುತ್ತಾಳೆ. ಆದರೆ ಗಾಂಧವ್ಯ ವಿವಾಹ ಎಂಬುದೊಂದು ಇದೆ, ಅದರ ಪ್ರಕಾರ ಪ್ರೇಮಿಗಳು ಕುಟುಂಬದ ಪಾಲ್ಗೊಳ್ಳುವಿಕೆ ಇಲ್ಲದೆ ತಾವೇ ಮದುವೆಯಾಗಬಹುದು ಎಂದು ಹೇಳಿ ದುಷ್ಯಂತ ಒಪ್ಪಿಸುತ್ತಾನೆ. ಹೀಗೆ ಇಬ್ಬರೂ ಕಾಡಿನಲ್ಲೇ ಮದುವೆಯಾಗಿ ಕೂಡುತ್ತಾರೆ. ಇವರಿಂದ ಜನಿಸಿದವನೇ ಭರತ.

2) ಕೃಷ್ಣ- ರುಕ್ಮಿಣಿ

ವಿದರ್ಭದ ರಾಜ ಭೀಷ್ಮಕನ ಮಗಳು ರಾಜಕುಮಾರಿ ರುಕ್ಮಣಿಯನ್ನು ಅಪಹರಿಸಿ ಕೃಷ್ಣನು ಮದುವೆಯಾಗುತ್ತಾನೆ. ಭೀಷ್ಮಕ ಮಗಧದ ರಾಜನಾದ ಜರಸಂಧನ ಗುತ್ತಿಗೆದಾರ. ಭಗವಾನ್‌ ಕೃಷ್ಣ ಮತ್ತು ರುಕ್ಮಿಣಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಕಾರಣ ಮದುವೆಯಾಗಲು ಬಯಸಿದರು. ಆದರೆ ರುಕ್ಮಿಣಿಯ ಹಿರಿಯ ಸಹೋದರ ರುಕ್ಮಿ ದುಷ್ಟ ರಾಜ ಕಂಸನ ಸ್ನೇಹಿತನಾಗಿದ್ದನು. ಆದ್ದರಿಂದ ಈತ ತನ್ನ ಸಹೋದರಿ ರುಕ್ಮಿಣಿ ಮತ್ತು ಕೃಷ್ಣನ ವಿವಾಹಕ್ಕೆ ವಿರೋಧವಾಗಿ ನಿಲ್ಲುತ್ತಾನೆ. ರುಕ್ಮಿಣಿಯು ಭಗವಾನ್‌ ಕೃಷ್ಣನಿಗೆ ಪತ್ರವೊಂದನ್ನು ಕಳುಹಿಸಿ ಮದುವೆಯ ಬಗ್ಗೆ ಪ್ರಸ್ತಾಪಿಸುತ್ತಾಳೆ. ಅದರ ನಂತರ, ಕೃಷ್ಣನಿಗೆ ದ್ವಾರಕಾದಲ್ಲಿ ಸಂದೇಶ ಬಂದ ಕೂಡಲೇ ಅವನು ತನ್ನ ಹಿರಿಯ ಸಹೋದರ ಬಲರಾಮನೊಂದಿಗೆ ವಿದರ್ಭಕ್ಕೆ ಹೊರಟನು. ನಂತರ ಕೃಷ್ಣ ಮತ್ತು ರುಕ್ಮಿ ನಡುವೆ ಭೀಕರ ಕದನ ಉಂಟಾಗುತ್ತದೆ. ಅವನನ್ನು ಸೋಲಿಸಿ ಕೃಷ್ಣನು ರುಕ್ಮಣಿಯನ್ನು ಅಪಹರಿಸಿಕೊಂಡು ಹೋಗಿ ವಿವಾಹವಾಗುತ್ತಾನೆ.

3) ಅರ್ಜುನ- ಸುಭದ್ರೆ

ಕೃಷ್ಣನ ಸಲಹೆಯನ್ನು ಪಡೆದು, ಬಲರಾಮನ ಒಪ್ಪಿಗೆ ಪಡೆಯದೆ, ಅವರ ಸಹೋದರಿ ಸುಭದ್ರೆಯನ್ನು ಅಪಹರಿಸಿಕೊಂಡು ಹೋಗಿ ಅರ್ಜುನ ವಿವಾಹವಾಗುತ್ತಾನೆ. ಸುಭದ್ರೆಯ ಹಿರಿಯಣ್ಣ ಬಲರಾಮನು ದುರ್ಯೋಧನನಿಗೆ ತನ್ನ ಸಹೋದರಿಯನ್ನು ಕೊಟ್ಟು ವಿವಾಹ ಮಾಡಿಸಬೇಕೆಂದು ಬಯಸಿದ್ದನು. ಆದರೆ ಶ್ರೀಕೃಷ್ಣನಿಗೆ ಇದು ಇಷ್ಟವಿರಲಿಲ್ಲ. ಯಾಕೆಂದರೆ ಅರ್ಜುನ ಮತ್ತು ಸುಭದ್ರೆಯರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ವಿಷಯ ತಿಳಿದಿತ್ತು. ಆದ್ದರಿಂದ ಅವನು ಅರ್ಜುನ ಮತ್ತು ಸುಭದ್ರೆಯ ಬಳಿ ಓಡಿಹೋಗಿ ವಿವಾಹವಾಗುವಂತೆ ಸಲಹೆಯನ್ನು ನೀಡುತ್ತಾನೆ. ಅದರಂತೆಯೇ ಅರ್ಜುನ ಮತ್ತು ಸುಭದ್ರೆ ವಿವಾಹವಾದರು. ನಂತರ, ಅವರ ಗರ್ಭದಿಂದ, ಮಗ ಅಭಿಮನ್ಯು ಜನಿಸಿದನು. ಈತ ಕೂಡ ತಂದೆಯಂತೆ ಮಹಾಭಾರತ ಯುದ್ಧದಲ್ಲಿ ಮಹಾನ್‌ ಯೋಧನಾಗಿದ್ದನು.

Honeymoon Murder: ಮೇಘಾಲಯ ಹನಿಮೂನ್ ಕೊಲೆ: ನಿಗೂಢ ಕಾಮಾಕ್ಯ ದೇಗುಲದ ರಹಸ್ಯ!

4) ಸಾಂಬ- ಲಕ್ಷಣಾ

ಶ್ರೀಕೃಷ್ಣನ 8 ಹೆಂಡತಿಯರಲ್ಲಿ ಜಾಂಬವತಿ ಕೂಡ ಒಬ್ಬಳು. ಜಾಂಬವತಿ ಮತ್ತು ಕೃಷ್ಣನ ಮಗನ ಹೆಸರೇ ಈ ಸಾಂಬ. ಸಾಂಬನು ದುರ್ಯೋಧನ ಮತ್ತು ಭಾನುಮತಿಯ ಮಗಳಾದ ಲಕ್ಷಣಾಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ಪರಸ್ಪರ ಮದುವೆಯಾಗಲು ಬಯಸಿದ್ದರು. ಆದರೆ ದುರ್ಯೋಧನನು ತನ್ನ ಮಗಳನ್ನು ಶ್ರೀ ಕೃಷ್ಣನ ಮಗನೊಂದಿಗೆ ವಿವಾಹ ಮಾಡಿಸಲು ಇಷ್ಟಪಡುವುದಿಲ್ಲ. ಆದ್ದರಿಂದ ಸಾಂಬ ಒಂದು ದಿನ ಲಕ್ಷಣಾಳನ್ನು ಅಪಹರಿಸಿ ತನ್ನ ರಥದಲ್ಲಿ ಕರೆದುಕೊಂಡು ದ್ವಾರಕೆಗೆ ಹೋದ. ಕೌರವರು ಈ ಬಗ್ಗೆ ತಿಳಿದಾಗ, ತಮ್ಮ ಇಡೀ ಸೈನ್ಯದೊಂದಿಗೆ ಸಾಂಬನ ಮೇಲೆ ಯುದ್ಧ ಸಾರಿ ಆತನನ್ನು ಹಿಡಿದು ತಮ್ಮ ಸೆರೆಯಲ್ಲಿಟ್ಟುಕೊಂಡರು. ಈ ವಿಷಯವನ್ನು ಶ್ರೀ ಕೃಷ್ಣ ಮತ್ತು ಬಲರಾಮ ತಿಳಿದು ಹಸ್ತಿನಾಪುರಕ್ಕೆ ಧಾವಿಸಿದರು. ಬಲರಾಮ ತನ್ನ ನೇಗಿಲಿನಿಂದ ಹಸ್ತಿನಾಪುರದ ಸಂಪೂರ್ಣ ಭೂಮಿಯನ್ನು ಎಳೆದು ಗಂಗೆಯಲ್ಲಿ ಮುಳುಗಿಸಲು ಪ್ರಾರಂಭಿಸಿದ. ಇದನ್ನು ನೋಡಿದ ಕೌರವರು ಭಯಭೀತರಾದರು. ಎಲ್ಲರೂ ಬಲರಾಮನಲ್ಲಿ ಕ್ಷಮೆಯಾಚಿಸಿದರು. ನಂತರ ದ್ವಾರಕೆಯಲ್ಲಿ ಸಾಂಬ ಮತ್ತು ಲಕ್ಷಣಾ ವಿವಾಹವಾದರು.

ಗರುಡ ಪುರಾಣ: ಈ 3 ಕೆಲಸ ಮಾಡುವ ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ! ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ