ಮೇಷ: ಕುಟುಂಬಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ. ನಿಮ್ಮ ಒತ್ತಡದ ಕೆಲಸಕ್ಕೆ ಸ್ವಲ್ಪ ಬಿಡುವು ಸಿಕ್ಕಂತಾಗುತ್ತದೆ. ಉದ್ಯೋಗ ಹುಡುಕುತ್ತಿರುವ ವರಿಗೆ ಇನ್ನಷ್ಟು ಪ್ರಯತ್ನ ಮಾಡಬೇಕಿದೆ. ಮಹಿಳೆಯರಲ್ಲಿ ಸಣ್ಣಪುಟ್ಟ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಮೂಡಲಿದೆ. ಮಕ್ಕಳ ವಿದ್ಯಭ್ಯಾಸದಲ್ಲಿ ಉತ್ತಮ. ವಾರಾಂತ್ಯದಲ್ಲಿ ಸಿಹಿ ಸುದ್ದಿ.

ವೃಷಭ: ನಿದ್ರೆ ವಿಚಾರದಲ್ಲಿ ಮೋಸ ಮಾಡಿಕೊಳ್ಳಬೇಡಿ. ಇಲ್ಲವಾದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಣಕಾಸಿನ ವಿಚಾರದಲ್ಲಿ ಬಲಗೈನಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗದಂತೆ ನೋಡಿ ಕೊಳ್ಳಿ. ಎಲ್ಲರನ್ನೂ ಅತಿಯಾಗಿ ನಂಬುವುದು ತರವಲ್ಲ. ಸ್ನೇಹಿತರು ಕೆಲವೊಮ್ಮೆ ಶತ್ರುಗಳೂ ಆಗುತ್ತಾರೆ.

ಮಿಥುನ: ಮನೆಯಲ್ಲಿ ಈ ವಾರ ಶಾಂತಿ ನೆಲೆಸಲಿದ್ದು, ಹೆಚ್ಚು ಸಂತೋಷದಿಂದ ಕೂಡಿರುತ್ತದೆ. ಕಾಲ್ಕೆರದು ಜಗಳಕ್ಕೆ ಬರುವ ಗುಣದವರಿಂದ ದೂರ ಇರುವುದು ಸೂಕ್ತ. ಮನಸ್ಸಲ್ಲಿ ಕಿರಿಕಿರಿ ಎದುರಾದರೂ ಧ್ಯಾನ ಅಥವಾ ದೇಗುಲಕ್ಕೆ ಭೇಟಿ ನೀಡಿ. ಯಾರ ವಿಚಾರಕ್ಕೂ ತಲೆ ಹಾಕದಿರುವುದು ಸೂಕ್ತ.

ಕಟಕ: ಫೋನ್ ನಂಬರ್‌ನಲ್ಲಿ ಒಂದಂಕಿ ಮಿಸ್ ಆದರೂ ಅಪರಿಚಿತರಿಗೆ ಹೋಗುತ್ತದೆ. ಹಾಗೆಯೇ ಮಾತ ನಾಡುವಾಗ ಎಚ್ಚರ ಇರಲಿ. ನಿಮ್ಮ ಮಾತು ಬೇರೆ ರೀತಿ ಅರ್ಥೈಸಿದರೆ ಇನ್ನೊಬ್ಬರು ಮತ್ತೇನೋ ತಿಳಿಯ ಬಹುದು. ಹೊಸ ಕೆಲಸಗಳು ಈ ವಾರ ಯಶಸ್ವಿಯಾಗೇ ಪೂರ್ಣವಾಗಲಿದೆ. ಮಕ್ಕಳ ಆರೋಗ್ಯ ಬಗ್ಗೆ ಎಚ್ಚರ.

ಸಿಂಹ: ಮರಳಿನಲ್ಲಿ ಇಂಗಿದ ನೀರು ಹೇಗೆ ಮರಳಿ ಪಡೆಯಲು ಸಾಧ್ಯವಿಲ್ಲವೊ ಹಾಗೆ ಕಳೆದು ಹೋದ ವಸ್ತುವೂ ಸಹ. ಕಳೆದು ಹೋದವರ ಬಗ್ಗೆ, ದೂರಾದವರ ಬಗ್ಗೆ ಚಿಂತಿಸಿ ಇಂದಿನ ಸಂತೋಷದ ದಿನಗಳನ್ನು ಕಳೆದುಕೊಳ್ಳದಿರಿ. ವಾರಾಂತ್ಯದಲ್ಲಿ ಕುಟುಂಬ ಸಮೇತ ದೂರದ ಊರಿಗೆ ಪ್ರಯಾಣ ಸಾಧ್ಯತೆ.

ಕನ್ಯಾ: ಹಳೆಯ ಸ್ನೇಹಿತರೆಲ್ಲಾ ಈ ವಾರಾಂತ್ಯದಲ್ಲಿ ಭೇಟಿ ಸಾಧ್ಯತೆ. ಈ ವೇಳೆ ಹೊಸ ಸ್ನೇಹಿತರ ಪರಿಚಯ ವೂ ಆಗಲಿದೆ. ಬೆಲೆ ಬಾಳುವ ವಸ್ತುಗಳ ಬಗ್ಗೆ ಜೋಪಾನ. ಮಾಡುವ ಕೆಲಸದಲ್ಲಿ ಶ್ರದ್ಧೆ, ಆಸಕ್ತಿ ಇರಲಿ. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ ಸಿಗಲು ಒತ್ತಡದಿಂದ ಹೊರಬನಿ

ತುಲಾ: ಈ ವಾರ ಮೋಜು, ಮಸ್ತಿಗಳಿಂದಲೇ ಕಾಲ ಕಳೆಯುವ ಸಾಧ್ಯತೆ. ಇನ್ನೊಬ್ಬರನ್ನು ಹುರಿದುಂ ಬಿಸಿ ಕೆಲಸ ಮಾಡಿಸುವ ಶಕ್ತಿ ನಿಮ್ಮಲಿದ್ದು, ಇದರಿಂದ ಎಲ್ಲರ ಮೆಚ್ಚುಗೆ ಸಿಗಲಿದೆ. ಕೈಲಾದ ಸಹಾಯ ಮಾಡುವ ನಿಮಗೆ ವಾರಾಂತ್ಯದಲ್ಲಿ ಕಷ್ಟಗಳು ಎದುರಾಗುವ ಸಾಧ್ಯತೆ. ಆದಷ್ಟು ಮನಸ್ಸು ಪ್ರಶಾಂತವಾಗಿಟ್ಟುಕೊಳ್ಳಿ

ವೃಶ್ಚಿಕ: ನಾನೇ ಎಲ್ಲವನ್ನು ಮಾಡುತ್ತೇನೆ ಎಂದು ಹೋದಲ್ಲಿ ಎಡವಟ್ಟು ಮಾಡಿಕೊಳ್ಳುತ್ತೀರಿ. ಹಿರಿ ಯರ ಮಾರ್ಗದರ್ಶನ ಪಡೆದು ಹೊಸ ವಿಚಾರ, ವಿಷಯಕ್ಕೆ ಕೈ ಹಾಕಿ. ಹಣಕಾಸಿನ ವ್ಯವಹಾರ ಉತ್ತಮ ವಾಗಿರಲಿದ್ದು, ವಾರಂತ್ಯದಲ್ಲಿ ಸ್ವಲ್ಪ ಕಿರಿಕಿರಿ ಎದುರಾಗ ಬಹುದು. ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚಲಿ

ಧನುಸ್ಸು: ಬಯಸುವ ಪರಿ ನಿಮ್ಮದಲ್ಲದಿದ್ದರೂ, ಬಯಸದೆ ಬರುವ ಉಡುಗೊರೆಯನ್ನು ಬೇಡ ಎನ್ನದಿರಿ. ಪ್ರೀತಿಯಿಂದ ತಂದುಕೊಟ್ಟ ವಸ್ತುಗಳು ಜೀವನ ದಲ್ಲಿ ಹೆಚ್ಚು ಸಂತೋಷ ನೀಡುತ್ತದೆ. ಕುಟುಂಬದಲ್ಲಿ ಸಂತಸ ಮನೆಮಾಡಲಿದ್ದು, ಬಂಧುಗಳ ಆಗಮನ ಸಾಧ್ಯತೆ.

ಮಕರ: ನೇರ ನುಡಿ, ಚುಚ್ಚು ಮಾತುಗಳು, ಕಟುವಾದ ವ್ಯಕ್ತಿತ್ವ ಇನ್ನೊಬ್ಬರ ಮನಸ್ಸು ಘಾಸಿಗೊಳಿಸಿ ಖುಷಿಯಿಂದ ಇರಬೇಡಿ. ಮುಂದೊಂದು ದಿನ ನಿಮಗೂ ಆ ಸ್ಥಿತಿ ಬರಬಹುದು. ಇನ್ನೊಬ್ಬರ ದುಃಖದಲ್ಲಿ ಹೆಗಲು ಕೊಟ್ಟಲ್ಲಿ ಎಲ್ಲರೂ ನಿಮ್ಮನ್ನು ಪ್ರೀತಿಸುವರು.

ಕುಂಭ: ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಒಂದಲ್ಲ ಎರಡಲ್ಲ ಹತ್ತು ಬಾರಿ ಯೋಚಿಸಿ. ಲಾಭ-ನಷ್ಟದ ಬಗ್ಗೆ ಯೋಚಿಸದೆ ಒಳ್ಳೆಯ ಮನಸ್ಸಿನಿಂದ ಕೆಲಸ ಆರಂಭಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಪರೀಕ್ಷೆ ಮುಗಿದ ಮೇಲೆ ಮಕ್ಕಳನ್ನು ಒಳ್ಳೆಯ ಜಾಗಕ್ಕೆ ಕರೆದುಕೊಂಡು ಹೋದರೆ ಮಕ್ಕಳಿಗೂ ಖುಷಿ.

ಮೀನ: ಕೆಲವೊಮ್ಮೆ ಜೀವನದ ಕಹಿ ಘಟನೆಗಳ ಅನುಭವ ಮತ್ತೆ ಮರುಕಳಿಸಿ ಮುಂದಿನ ಒಳ್ಳೆಯ ದಿನಗಳನ್ನು ಕಾಣಲು ಕಾರಣವಾಗುತ್ತದೆ. ಅದಕ್ಕೆ ಯುಗಾದಿ ಹಬ್ಬ ಬರುತ್ತಿದ್ದು ಸಿಹಿ-ಕಹಿಯ ಅನುಭವ ಈ ವಾರಾಂತ್ಯದಲ್ಲಿ ಸಿಗಲಿದೆ. ಶುಭ ವಾರ.