ಮೇಷ: ನಿಮಗರಿವಿಲ್ಲದ ಅದೆಷ್ಟೋ ಕೆಟ್ಟ ವಿಚಾರಗಳು ನಿಮ್ಮ ಸುತ್ತ ನಡೆಯುತ್ತಿದ್ದರೂ ಸುಮ್ಮನೆ ಕುಳಿತು ನೋಡುವುದು ಒಳಿತಲ್ಲ. ಸಂದರ್ಭಕ್ಕೆ ತಕ್ಕಂತೆ ಉತ್ತರ ನೀಡಿ ಮುಂದಾಗುವ ಅನಾಹುತವನ್ನು ತಪ್ಪಿಸಲಿದ್ದೀರಿ. ಇದರಿಂದ ನಿಮ್ಮ ಸುತ್ತಲಿನವರ ಪ್ರೀತಿಗೆ ಪಾತ್ರರಾಗಲಿದ್ದೀರಿ. ವಾರಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.

ವೃಷಭ: ಬಿಸಿಲು ಜಾಸ್ತಿ ಇರುವುದರಿಂದ ದೂರ ಪ್ರಯಾಣ ಸ್ವಲ್ಪ ಕಡಿಮೆ ಮಾಡುವುದು ಒಳಿತು. ಆರೋಗ್ಯದಲ್ಲಿ ಹೆಚ್ಚುಕಮ್ಮಿ ಆದರೂ ಬಾರಿ ನಷ್ಟ ಅನುಭವಿಸಬೇಕಾಗುತ್ತದೆ. ಸ್ವಲ್ಪ ಶ್ರಮಪಟ್ಟು ಹುಡುಕಿದರೆ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಹಿರಿಯರಿಂದ ಪ್ರಶಂಸೆ, ಮಕ್ಕಳ ವಿದ್ಯಭ್ಯಾಸದಲ್ಲಿ ಉತ್ತಮ. ಶುಭ ಫಲ.

ಮಿಥುನ: ಇಷ್ಟು ದಿನದಲ್ಲಿ ನೆರವೇರದ ಎಷ್ಟೋ ವಿಷಯಗಳು ಈ ವಾರ ಕೈಗೂಡಲಿದೆ. ಕುಟುಂಬದ ಜೊತೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ಜೀವನದ ತೃಪ್ತಿ ಭಾವನೆ ಮೂಡಲಿದ್ದು, ಮಕ್ಕಳನ್ನು ಬಿಸಿಲಿನಲ್ಲಿ ಜಾಸ್ತಿ ಸುತ್ತಿಸದಿರಿ. ವಾರಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.

ಕಟಕ: ಆಸಕ್ತಿ ಇರುವ ವಿಷಯಗಳಲ್ಲಿ ಹೆಚ್ಚು ಗಮನಹರಿಸುವುದು ಸೂಕ್ತ. ಗೊತ್ತಿಲ್ಲದ ವಿಚಾರಗಳ ಬಗ್ಗೆ ತಿಳಿದವರ ಬಳಿ ಚರ್ಚಿಸುವುದು ಒಳ್ಳೆಯದು. ಇದು ಮುಂದೊಂದು ದಿನ ನಿಮ್ಮ ಕೆಲಸಗಳಿಗೆ ಸಹಾಯವಾಗಲಿದೆ. ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಈ ವಾರ ಬಂಪರ್. ಮಹಿಳೆಯರಿಗೆ ಶುಭ ವಾರ. ಶುಭ ಫಲ

ಸಿಂಹ: ಈ ವಾರ ಪ್ರಯಾಣದಲ್ಲೇ ಕಳೆಯುವ ನೀವು ವಾರಾಂತ್ಯದಲ್ಲಿ ಆಯಾಸದೊಂದಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳಲಿದೆ. ಧಾರ್ಮಿಕ ವಿಷಯದಲ್ಲಿ ಮೊಂಡುತನ ಬೇಡ. ಹಿರಿಯರು ಹೇಳಿದ ಮಾತನ್ನು ಲಘುವಾಗಿ ಪರಿಗಣಿಸದಿರಿ. ಮಹಿಳೆಯರಿಂದ ಈ ವಾರ ಉತ್ತಮ ಮನೆ ನಿರ್ವಹಣೆ ಸಾಧ್ಯತೆ.

ಕನ್ಯಾ: ಕೆಲಸದಲ್ಲಿನ ನಿಮ್ಮ ಆಸಕ್ತಿ ಶ್ರದ್ಧೆಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಪುರುಷರು ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಉತ್ತಮ. ವಾರದುದ್ದಕ್ಕೂ ಮನಸ್ಸಿನಲ್ಲಿನ ಗೊಂದಲ ಕಿರಿಕಿರಿಗೆ ವಾರಂತ್ಯದಲ್ಲಿ ನೆಮ್ಮದಿ ಸಿಗಲಿದೆ. ವಾರಂತ್ಯದಲ್ಲಿ ಬಂಧುಗಳ ಆಗಮನ ಸಾಧ್ಯತೆ. ಮಕ್ಕಳಿಗೆ ಶುಭ ಫಲ.

ತುಲಾ: ಕಟುವಾದ ನಡೆವಳಿಕೆ, ಮಾತುಗಳಿಂದ ನಿಮ್ಮ ಸುತ್ತಲಿನವರನ್ನು ದೂರ ಮಾಡಿಕೊಳ್ಳುವ ಸಾಧ್ಯತೆ. ಯಾವುದೇ ವಿಚಾರದ ಬಗ್ಗೆ ಚರ್ಚಿಸುವಾಗ ಶಾಂತ ಮನಸ್ಸಿನಿಂದ ಚರ್ಚಿಸಿ. ಒಳ್ಳೆಯ ಅವಕಾಶಕ್ಕೆ ಕಾಯುವ ಅಗತ್ಯವಿಲ್ಲ. ಅಂದುಕೊಂಡ ಕೆಲಸ ಇಂದೇ ಮಾಡಿ ಮುಗಿಸಿದರೆ ಮುಂದೆ ಒಳ್ಳೆಯ ಅವಕಾಶ ಸಿಗಲಿದೆ.

ವೃಶ್ಚಿಕ: ಮಾಡುವ ಕೆಲಸ ತಪ್ಪು ಅನ್ನುವುದು ತಿಳಿದಿದ್ದರೂ ಪುನಃ ಅದೇ ತಪ್ಪು ಮಾಡದಿರಿ. ಒಮ್ಮೆ ಹೋದ ಮರ್ಯಾದೆ ಎಷ್ಟೇ ದುಡ್ಡುಕೊಟ್ಟರು ಮರಳಿ ಬರುವುದಿಲ್ಲ ಹಾಗೆಯೇ ಇದು. ಪುರುಷರ ಹಣಕಾಸಿನ ವ್ಯವಹಾರದಲ್ಲಿ ಈ ವಾರ ಉತ್ತಮ ಬೆಳವಣಿಗೆ ಕಾಣಲಿದ್ದು, ಮುಂದಿನ ಕೆಲಸಗಳಿಗೆ ಅನುಕೂಲವಾಗಲಿದೆ.

ಧನುಸ್ಸು: ಆರೋಗ್ಯದ ಕಡೆ ಇಷ್ಟೊಂದು ನಿರ್ಲಕ್ಷ್ಯ ಬೇಡ. ಮನೆಯವರ ಮಾತಿಗೆ ಬೆಲೆಕೊಟ್ಟು ಸುಧಾರಿಸಿಕೊಳ್ಳಿ. ನಿಮ್ಮ ನಂಬಿದವರಿಗೆ ಎಂದಿ ಗೂ ಕೈಕೊಡದ ನೀವು ಅಂತಹವರಿಂದಲೇ ಪೆಟ್ಟು ತಿನ್ನುವ ಸಾಧ್ಯತೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.

ಮಕರ: ಕಾರ್ಮಿಕ ವರ್ಗಕ್ಕೆ ಅಧಿಕ ಖರ್ಚು ಸಾಧ್ಯತೆ. ಮನಸ್ಸಿಗೆ ನೆಮ್ಮದಿ. ಕುಂಟು ನೆಪ ತೋರಿ ಕೆಲಸ ದಿಂದ ದೂರಾದರೂ ಅದು ನಿಮ್ಮನ್ನೇ ಬೆನ್ನಟ್ಟಿ ಬರಲಿದೆ. ಕುಟುಂಬದಲ್ಲಿನ ಮನಸ್ಥಾಪಗಳು ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಬಹುದು.

ಕುಂಭ: ನೆರೆಹೊರೆಯವರ ಜೊತೆಗಿದ್ದ ಮನಸ್ಥಾಪ ಈ ವಾರ ದೂರವಾಗಲಿದೆ. ಹೊಸ ಸ್ನೇಹಿತರ ಪರಿಚಯವಾಗಲಿದ್ದು, ಹಳೆ ಶತ್ರುಗಳೂ ನಿಮ್ಮ ಮಿತ್ರರಾಗಿ ಪರಿವರ್ತನೆಯಾಗಲಿದ್ದಾರೆ. ವಿನಃ ಕಾರಣ ನಿಮ್ಮ ತಪ್ಪಿಲ್ಲದ್ದನ್ನು ಒಪ್ಪಿಕೊಳ್ಳದಿರಿ. ಪರೀಕ್ಷೆ ಸಮಯವಾದ್ದರಿಂದ ಮಕ್ಕಳಿಗೆ ಹೆಚ್ಚಿನ ನಿದ್ರೆ ಅತ್ಯವಶ್ಯಕ. ಶುಭ ಫಲ.

ಮೀನ: ಅತಿಯಾದ ಆಲಸಿಗಳಾಗುವುದು ತರವಲ್ಲ. ಸೋಮಾರಿತನ ಮುಂದೆ ಕಷ್ಟ ತರಬಹುದು. ಕೊಂಕು ಮಾತುಗಳಿಗೆ ಕಿವಿಕೊಡಬೇಡಿ. ಕೆಲಸದಲ್ಲಿ ನಿಮ್ಮದೇ ನಿಲುವು ಅಂತಿಮವಾಗಿರಲಿ. ಸೇವೆ, ದಾನಗಳಿಂದ ಹೆಚ್ಚಿನ ಮನಸ್ಸಿಗೆ ಹತ್ತಿರವಾಗಲಿದ್ದೀರಿ.