ಮೇಷ: ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಪರಿಸ್ಥಿತಿಯಲ್ಲಿ ತುಸು ಚೇತರಿಕೆ ಇದೆ. ವಾರದ ಮಧ್ಯಭಾಗದಿಂದ ಆರ್ಥಿಕ ಚೈತನ್ಯವೂ ಸಿಗುತ್ತದೆ. ನಿಮ್ಮ ಚಿಂತೆಗಳಿಗೆಲ್ಲ ಪರಿಹಾರ ಕಂಡುಕೊಳ್ಳುವುದರಲ್ಲಿ ಸಫಲರಾಗುವಿರಿ.ಛಲ, ಹಠ, ಕಷ್ಟದಲ್ಲೂ ಜಿಗಿದೇಳುವ ಗುಣ ನಿಮ್ಮನ್ನು ಕಾಯಲಿ.

ವೃಷಭ: ಹಿಂದಿನ ನೋವುಗಳಿಂದ ತುಸು ಚೇತರಿಕೆ ಸಿಗಬಹುದು. ಕಷ್ಟಕಾಲಗಳೆಲ್ಲ ಕಳೆದವು, ಇನ್ನು ನೆಮ್ಮದಿಯಿಂದಿರಿ. ಗೆಳೆಯರ ಸಹಾಯಕ್ಕೆ ಧಾವಿಸುವ ನಿಮನ್ನು ಮಿತ್ರರು ಕೈ ಹಿಡಿದು ದಡ ಸೇರಿಸುತ್ತಾರೆ. ಆದರೂ ವಾಹನ ಚಲಾಯಿಸುವ ಸಂದರ್ಭ, ದೂರ ಪ್ರಯಾಣದ ಸಂದರ್ಭ ಎಚ್ಚರಿಕೆ ಇರಲಿ.

ಮಿಥುನ: ಹೊಸ ಅವಕಾಶ ಕಣ್ಮುಂದಿದೆ. ಆದರೆ ನೀವು ಅದರತ್ತ ಗಮನ ಹರಿಸುತ್ತಿಲ್ಲ. ಒದ್ದಾಟ, ನೋವು ಇದ್ದದ್ದೇ. ಅದನ್ನು ಪಕ್ಕಕ್ಕೆ ಸರಿಸಿ ಹೊಸ ಯೋಚನೆ, ಯೋಜನೆಗಳ ಕಾರ್ಯರೂಪಕ್ಕೆ ಪ್ರಯತ್ನಿಸಿ. ಬೇರೆಯವರ ಮಾತಿಗೆ ಗಮನಕೊಡಿ. ಅವರ ಅನುಭವ, ಕಾಳಜಿ ನಿಮ್ಮ ಸಹಾಯಕ್ಕೆ ಬರಬಹುದು.

ಕಟಕ: ಶರಣಾಗತಿಯಿಂದ ಕೆಲಸಗಳು ಹೇಗೆ ಸಲೀಸಾಗಿ ಆಗುತ್ತವೆ ಅನ್ನೋದು ನಿಮಗೇ ಅಚ್ಚರಿ ತರಬಹುದು. ಆದರೂ ಉದ್ಯೋಗದಲ್ಲಿ ಸೋಲಿನ ಭೀತಿ ಆವರಿಸಬಹುದು. ನಿಮ್ಮಲ್ಲಿ ಸ್ಕಿಲ್ ಇದೆ. ಬುದ್ಧಿಗೇಡಿ ಆತುರವೂ ಇದೆ. ಇದೇ ನಿಮ್ಮ ಶತ್ರು. ಈ ಶತ್ರುವನ್ನು ಮಣಿಸಿದರೆ ಜಯ ಗ್ಯಾರೆಂಟಿ.

ಸಿಂಹ: ಕೆಲಸದ ಜಾಗದಲ್ಲಿ ಕೆಲವರು ಪದೇ ಪದೇ ಕೇಳುವ ಪ್ರಶ್ನೆಗಳು ಕಿರಿಕಿರಿ ಉಂಟು ಮಾಡಬಹುದು. ನೀವು ಕಷ್ಟಪಟ್ಟು ಮಾಡಿದ ಕೆಲಸದ ಕ್ರೆಡಿಟ್ ಇನ್ನೊಬ್ಬರಿಗೆ ಹೋಗಬಹುದು. ಹುಷಾರಾಗಿರಿ. ಸಾಹಸಿ ಕಾರ್ಯಗಳ, ದೂರ ಪ್ರಯಾಣದ ನಿಮ್ಮ ಕನಸು ಈ ವಾರ ನನಸಾಗಬಹುದು.

ಕನ್ಯಾ: ನೀವು ಮಾಡಿಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಪ್ರಸಂಗ ಬರಬಹುದು. ಮನಸ್ಥಿತಿ ಹದಗೆಡಬಹುದು. ಸಾಧ್ಯವಾದರೆ ನೀವು ಮುಗ್ಧರು ಎಂಬುವುದನ್ನು ಪ್ರೂವ್ ಮಾಡಿ. ಅನವಶ್ಯಕ ಹಠ, ಅಹಂ ಬೇಡ. ಕೆಲಸದಲ್ಲಿ ಪದೇ ಪದೇ ವಿಳಂಬ ಮಾಡುತ್ತೀರಿ, ಇದು ಒಳ್ಳೆಯದಲ್ಲ.

ತುಲಾ: ನಿಮ್ಮ ತಲೆಯಲ್ಲಿ ಅದ್ಭುತ ಐಡಿಯಾಗಳಿವೆ. ಅದನ್ನು ಹೊರಜಗತ್ತಿಗೆ ತಿಳಿಸಲು ಸಂಕೋಚ ಬೇಡ. ಆಪ್ತರಲ್ಲಿ ನಿಮ್ಮ ಚಿಂತನೆಯನ್ನು ತಿಳಿಸಿ. ಅವರು ಅದಕ್ಕೆ ಸರಿಯಾದ ರೂಪ ನೀಡುತ್ತಾರೆ. ಮರೆತಂತಾದ ಹಳೇ ಹವ್ಯಾಸಗಳಿಗೆ ಜೀವ ಕೊಡಿ. ಆರ್ಥಿಕವಾಗಿ ಚೇತರಿಕೆ ಇದೆ.

ವೃಶ್ಚಿಕ: ನಿಮ್ಮ ನಿರ್ಧಾರ ನಿಮ್ಮದು ಅಷ್ಟೇ. ಇತರರ ಅಭಿಪ್ರಾಯಕ್ಕೆ ಹೆಚ್ಚು ಬೆಲೆ ಕೊಡಬೇಡಿ. ಉದ್ಯೋಗದಲ್ಲಿ ಕಷ್ಟದ ದಿನಗಳಿವೆ. ನಿಮ್ಮ ಮಿತಿಗಳನ್ನು ಒಪ್ಪಿಕೊಳ್ಳಿ. ಜೊತೆಗಿರುವವರ ಸಹಕಾರ ಪಡೆಯಿರಿ. ಸೋಮಾರಿತನ ಪಲಾಯನ ಮಾಡುವ ಎಲ್ಲ ಸಾಧ್ಯತೆ ಇದೆ. ಒತ್ತಡ ಹೆಚಾ ್ಚ ಗಬಹುದು.

ಧನುಸ್ಸು: ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಬರುತ್ತವೆ. ಇಡೀ ವಾರ ಕೆಲಸಗಳಲ್ಲಿ ಬ್ಯುಸಿ ಇರುತ್ತೀರಿ. ಗಡಿಬಿಡಿ ಬೇಡ. ಪ್ಲಾನ್ ಮಾಡಿ ಸಾವಧಾನದಿಂದ ಮುಂದುವರಿಯಿರಿ. ಖುಷಿ ಹೆಚ್ಚು. ಫ್ಯಾಮಿಲಿ ಜೊತೆಗೆ ಪ್ರವಾಸದ ಯೋಗವಿ

ಮಕರ: ಹಳೆ ತಪ್ಪುಗಳಿಂದ ಕಲಿತ ಪಾಠ ನಿಮ್ಮನ್ನು ಮುನ್ನಡೆಸಲಿದೆ. ಹಾಗಂತ ಹಳೆಯ ನೋವನ್ನು ಕೆದಕಿದರೆ ನೋವೇ ಹೆಚ್ಚು. ವರ್ತಮಾನದ ಸಂಬಂಧಗಳ ಬಗ್ಗೆ ಚಿಂತಿಸಿ. ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಗೊಂದಲ ಬೇಡ. ಸ್ಪಷ್ಟವಾಗಿರಿ.

ಕುಂಭ: ಹೊಸ ಚಾಲೆಂಜ್‌ಗಳನ್ನು ಹಾರ್ದಿಕವಾಗಿ ಸ್ವಾಗತಿಸಿ. ಸದಾ ದೂರುತ್ತಿರುವುದರಿಂದ ಯಾವ ಪ್ರಯೋಜನವೂ ಇಲ್ಲ. ಆಪ್ತರು ನಿಮ್ಮ ಸಹಾಯ ಯಾಚಿಸಬಹುದು. ಮುಂದೆ ಇವರು ನಿಮ್ಮ ಸಹಾಯಕ್ಕೂ ಬರಬಹುದು. ಪಾಸಿಟಿವ್ ಆಗಿ ಚಿಂತಿಸುವುದನ್ನು ರೂಢಿಸಿಕೊಂಡರೆ ಒಳ್ಳೆಯದು.

ಮೀನ: ಫ್ಯಾಮಿಲಿ ಹಾಗೂ ಉದ್ಯೋಗದ ಸ್ಥಳದಲ್ಲಿ ನಿಮ್ಮ ಬಗ್ಗೆ ಗೌರವ ಹೆಚ್ಚ ಲಿದೆ. ನಿಮ್ಮ ಬೇಡಿಕೆ ಹಾಗೂ ಭಾವನೆಗಳನ್ನು ಹಿಂಜರಿಕೆ ಇಲ್ಲದೇ ಹಂಚಿಕೊಳ್ಳುವಿರಿ. ರೊಮ್ಯಾಂಟಿಕ್ ಲೈಫ್ ನಿಮ್ಮ ಮುಂದಿದೆ. ಎನ್‌ಜಾಯ್ ಮಾಡಿ