ಮೇಷ: ನಿಮಗರಿವಿಲ್ಲದ ಅದೆಷ್ಟೋ ಕೆಟ್ಟ ವಿಚಾರಗಳು ನಿಮ್ಮ ಸುತ್ತ ನಡೆಯುತ್ತಿದ್ದರೂ ಸುಮ್ಮನೆ ಕುಳಿತು ನೋಡುವುದು ಒಳಿತಲ್ಲ. ಸಂದರ್ಭಕ್ಕೆ ತಕ್ಕಂತೆ ಉತ್ತರ ನೀಡಿ ಮುಂದಾಗುವ ಅನಾಹುತವನ್ನು ತಪ್ಪಿಸಲಿದ್ದೀರಿ. ಇದರಿಂದ ನಿಮ್ಮ ಸುತ್ತಲಿನವರ ಪ್ರೀತಿಗೆ ಪಾತ್ರರಾಗಲಿದ್ದೀರಿ. ವಾರಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.

ವೃಷಭ: ಬಿಸಿಲು ಜಾಸ್ತಿ ಇರುವುದರಿಂದ ದೂರ ಪ್ರಯಾಣ ಸ್ವಲ್ಪ ಕಡಿಮೆ ಮಾಡುವುದು ಒಳಿತು. ಆರೋಗ್ಯದಲ್ಲಿ ಹೆಚ್ಚು ಕಮ್ಮಿ ಆದರೂ ಬಾರಿ ನಷ್ಟ ಅನುಭವಿಸಬೇಕಾಗುತ್ತದೆ. ಸ್ವಲ್ಪ ಶ್ರಮಪಟ್ಟು ಹುಡುಕಿದರೆ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಹಿರಿಯರಿಂದ ಪ್ರಶಂಸೆ, ಮಕ್ಕಳ ವಿದ್ಯಭ್ಯಾಸದಲ್ಲಿ ಉತ್ತಮ. ಶುಭ ಫಲ.

ಮಿಥುನ: ಇಷ್ಟು ದಿನದಲ್ಲಿ ನೆರವೇರದ ಎಷ್ಟೋ ವಿಷಯಗಳು ಈ ವಾರ ಕೈಗೂಡಲಿದೆ. ಕುಟುಂಬದ ಜೊತೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ಜೀವನದ ತೃಪ್ತಿ ಭಾವನೆ ಮೂಡಲಿದ್ದು, ಮಕ್ಕಳನ್ನು ಬಿಸಿಲಿನಲ್ಲಿ ಜಾಸ್ತಿ ಸುತ್ತಿಸದಿರಿ. ವಾರಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.

ಕಟಕ: ಆಸಕ್ತಿ ಇರುವ ವಿಷಯಗಳಲ್ಲಿ ಹೆಚ್ಚು ಗಮನಹರಿಸುವುದು ಸೂಕ್ತ. ಗೊತ್ತಿಲ್ಲದ ವಿಚಾರಗಳ ಬಗ್ಗೆ ತಿಳಿದವರ ಬಳಿ ಚರ್ಚಿಸುವುದು ಒಳ್ಳೆಯದು. ಇದು ಮುಂದೊಂದು ದಿನ ನಿಮ್ಮ ಕೆಲಸಗಳಿಗೆ ಸಹಾಯವಾಗಲಿದೆ. ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಈ ವಾರ ಬಂಪರ್. ಮಹಿಳೆಯರಿಗೆ ಶುಭ ವಾರ. ಶುಭ ಫಲ

ಸಿಂಹ: ಈ ವಾರ ಪ್ರಯಾಣದಲ್ಲೇ ಕಳೆಯುವ ನೀವು ವಾರಾಂತ್ಯದಲ್ಲಿ ಆಯಾಸದೊಂದಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳಲಿದೆ. ಧಾರ್ಮಿಕ ವಿಷಯದಲ್ಲಿ ಮೊಂಡುತನ ಬೇಡ. ಹಿರಿಯರು ಹೇಳಿದ ಮಾತನ್ನು ಲಘುವಾಗಿ ಪರಿಗಣಿಸದಿರಿ. ಮಹಿಳೆಯರಿಂದ ಈ ವಾರ ಉತ್ತಮ ಮನೆ ನಿರ್ವಹಣೆ ಸಾಧ್ಯತೆ.

ಕನ್ಯಾ: ಕೆಲಸದಲ್ಲಿನ ನಿಮ್ಮ ಆಸಕ್ತಿ ಶ್ರದ್ಧೆಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಪುರುಷರು ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಉತ್ತಮ. ವಾರದುದ್ದಕ್ಕೂ ಮನಸ್ಸಿನಲ್ಲಿನ ಗೊಂದಲ ಕಿರಿಕಿರಿಗೆ ವಾರಂತ್ಯದಲ್ಲಿ ನೆಮ್ಮದಿ ಸಿಗಲಿದೆ. ವಾರಂತ್ಯದಲ್ಲಿ ಬಂಧುಗಳ ಆಗಮನ ಸಾಧ್ಯತೆ. ಮಕ್ಕಳಿಗೆ ಶುಭ ಫಲ.

ಕೃಷ್ಣನ ಸ್ಪರ್ಶದಿಂದ ಶಾಪಗ್ರಸ್ಥ ಓತಿಕ್ಯಾತಕ್ಕೆ ಮುಕ್ತಿ ಸಿಕ್ಕಿದ್ಹೀಗೆ

ತುಲಾ: ಕೆಲಸ ಕೆಲಸ ಎಂದು ಕುಟುಂಬದ ಕಡೆಗೆ ಗಮನ ಕೊಡುವುದು ಕಡಿಮೆ ಮಾಡಬೇಡಿ. ಕೆಲಸ ಯಾವಾಗಲೂ ಇದ್ದದ್ದೆ. ಆದರೆ ಕುಟುಂಬಕ್ಕೆ ಸ್ವಲ್ಪ ಟೈಂ ಕೊಟ್ಟರೆ ಮನೆಯ ಎಲ್ಲರಿಗೂ ಸಂತೋಷ ಆಗುತ್ತೆ. ಹಬ್ಬದ ಸಮಯವಾದ್ದರಿಂದ ಖರ್ಚು ಹೆಚ್ಚಿರುತ್ತೆ. ನೋಡಿ ಕೊಂಡು ಖರ್ಚು ಮಾಡುವುದು ಒಳ್ಳೆಯದು.

ವೃಶ್ಚಿಕ: ಮೂರು ಹೊತ್ತು ತಿನ್ನುವ ಬಗ್ಗೆ ಯೋಚಿಸದೆ ಕೆಲಸ ಕಾರ್ಯಗಳ ಬಗ್ಗೆಯೂ ಗಮನ ಕೊಡಿ. ನಿಮ್ಮ ಕೆಲಸ ಇತರರಿಗೆ ಮೆಚ್ಚುಗೆಯಾಗುವಂತಿರಲಿ. ಅನಿರೀಕ್ಷಿತ ಘಟನೆಗಳು ನಡೆಯುವ ಸಂಭವ. ನಿಮ್ಮನ್ನು ದೂರ ಮಾಡಿದವರೂ ನಿಮ್ಮನ್ನು ಹೊಗಳುವರು. ವಾರಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.

ಧನಸ್ಸು: ಒಬ್ಬರನ್ನು ಮೋಸ ಮಾಡಿ ಕೊಳ್ಳೆ ಹೊಡೆದು ತಿನ್ನುವುದಕ್ಕಿಂತ ನಿಯತ್ತಾಗಿ ದುಡಿದು ತಿನ್ನುವುದು ಒಳ್ಳೆಯದು. ಆಗ ತಿಂದಿದ್ದೂ ಮೈಗೆ ಹತ್ತುತ್ತೆ. ಈ ವಿಚಾರ ನಿಮಗೆ ಗೊತ್ತಿದ್ದರೂ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುವುದರಿಂದ ಏನೂ ಲಾಭವಿಲ್ಲ.

ಮಕರ:  ನಿಮ್ಮನ್ನು ಇಲ್ಲಸಲ್ಲದೆ ದೂರ ತಳ್ಳಿದವರೂ ಇಂದು ನಿಮ್ಮ ಸ್ನೇಹ ಅರಸಿ ಬರುವ ಸಾಧ್ಯತೆಗಳಿವೆ. ದೊಡ್ಡ ಮನಸ್ಸು ಮಡಿ ಅವರನ್ನು ಕ್ಷಮಿಸಿ ಮಿತ್ರತ್ವ ಬೆಳೆಸಿ. ಒಳ್ಳೆಯ ಗುಣಗಳು ಎಂದೂ ಸೋಲುವುದಿಲ್ಲ. ಬಂಧುಗಳ ಆಗಮನ ಸಾಧ್ಯತೆ

ಕುಂಭ: ತಾನೊಂದು ಬಗೆದರೆ ವಿಧಿ ಇನ್ನೊಂದುಬಗೆಯಿತು ಎಂಬ ಮಾತಿದೆ. ಈಗಾದ ತಪ್ಪನ್ನು ಸರಿಪಡಿಸುವುದು ಅಸಾಧ್ಯ. ಆದರೆ ಆದ ತಪ್ಪಿನಿಂದ ತಿದ್ದಿಕೊಂಡು ಮುನ್ನಡೆಯಿರಿ. ಸೋಲು ಗೆಲುವು ಬದುಕಿನಲ್ಲಿ ಸಿಹಿ ಕಹಿ ಇದ್ದಂತೆ. ಎರಡೂ ಇದ್ದರೇನೆ ಜೀವನ ಸುಂದರವಾಗಿ ಕಾಣುತೆ

ಮೀನ:  ಈ ವಾರ ನಿಮ್ಮ ಮೇಲೆ ಜವಾಬ್ದಾರಿ ಹಾಗೂ ಒತ್ತಡ ಹೆಚ್ಚಾಗಿರಲಿದೆ. ಕೆಲಸದಲ್ಲಿ ಆದಷ್ಟು ಜೋಪಾನವಾಗಿದ್ದಷ್ಟು ನಿಮಗೇ ಒಳ್ಳೆಯದು. ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ವಾತಾವರಣದಲ್ಲಿನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ. ಶುಭ ಫಲ ದೊರೆಯಲಿದೆ.